ಹೊಸ ನೋಟದಲ್ಲಿ ಪಲ್ಸರ್; ಡ್ಯುಯಲ್ ಟೋನ್ ಕಲರ್
ನೀವು ಪಲ್ಸರ್ ಅಭಿಮಾನಿಯಾದ್ದಲ್ಲಿ ನಿಮಗಿದೋ ಶುಭ ಸುದ್ದಿಯೊಂದು ನಮ್ಮಲ್ಲಿದೆ. ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ, ತನ್ನ ಜನಪ್ರಿಯ ಪಲ್ಸರ್ ಆವೃತ್ತಿಗೆ ಡ್ಯುಯಲ್ ಟೋನ್ ಬಣ್ಣಗಳ ಸ್ಪರ್ಶ ನೀಡಿದ್ದು, ಹೊಸ ರೂಪದಲ್ಲಿ ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಹೆಚ್ಚು ಆಕ್ರಮಣಕಾರಿಯಾಗಿ ಗೋಚರಿಸಲಿದೆ.
ನೂತನ ಬಣ್ಣಗಳ ಆಯ್ಕೆಯು ಪಲ್ಸರ್ 150, 180 ಹಾಗೂ 220 ಆವೃತ್ತಿಗಳಲ್ಲಿ ಕಂಡುಬರಲಿದೆ. ಅಲ್ಲದೆ ಪಲ್ಸರ್ ಗ್ರಾಹಕರು ಪಿಯರ್ಲ್ ಮೆಟ್ಯಾಲಿಕ್ ವೈಟ್, ಸಪೈರ್ ಬ್ಲೂ ಮತ್ತು ಕಾಕ್ಟೈಲ್ ವೈನ್ ರೆಡ್ ಬಣ್ಣಗಳ ಆಯ್ಕೆಗಳನ್ನು ಪಡೆಯಲಿದ್ದಾರೆ.

ಆದರೆ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ ಎಂಬುದು ಸಂತಸದಾಯಕ ಸುದ್ದಿಯಾಗಿದೆ. ಈ ಮೂಲಕ ಬಜಾಜ್ ಆಟೋ, ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ಪ್ರಯತ್ನದಲ್ಲಿದೆ.
ನಿಕಟ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚುತ್ತಿರುವುದನ್ನು ಮನಗಂಡಿರುವ ಪಲ್ಸರ್, ನೂತನ ಆವೃತ್ತಿಗಳ ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದೆ.


Click it and Unblock the Notifications








