ಚೆನ್ನೈ ನಲ್ಲಿ ತಲೆಯೆತ್ತಲಿರುವ ರಾಯಲ್ ಎನ್‌ಫೀಲ್ಡ್ 3ನೇ ಘಟಕ

Written By:

ಮಾರುಕಟ್ಟೆಯಲ್ಲಿ ವೃದ್ಧಿಸುತ್ತಿರುವ ನಿಕಟ ಸ್ಪರ್ಧೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ದೇಶದ ಅತಿ ಪುರಾತನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ರಾಯಲ್ ಎನ್‌ಫೀಲ್ಡ್, ಗ್ರಾಹಕ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಚೆನ್ನೈನಲ್ಲಿ ಮೂರನೇ ಘಟಕವನ್ನು ತೆರೆಯಲಿದೆ.

ಇತ್ತೀಚೆಗಷ್ಟೇ ವಿದೇಶದತ್ತವೂ ತನ್ನ ವ್ಯಾಪಾರವನ್ನು ವಿಸ್ತರಿಸಿದ ಚೆನ್ನೈ ಮೂಲದ ಸಂಸ್ಥೆಯು ತನ್ನ ನಿರ್ಮಾಣ ಸಾಮರ್ಥ್ಯ ವೃದ್ಧಿಸುವಲ್ಲಿ ಗಮನ ಕೇಂದ್ರಿತವಾಗಿದೆ.

Royal Enfield

ರಾಯಲ್ ಎನ್‌ಫೀಲ್ಡ್ ಹೊಸ ಘಟಕವು ಚೆನ್ನೈ ಸಮೀಪದ ವಲ್ಲಂ ವಡಕಲ್‌ನಲ್ಲಿ ಸ್ಥಿತಗೊಂಡಿರಲಿದೆ. ಅಲ್ಲದೆ ಇದಕ್ಕಾಗಿ 57 ಕೋಟಿ ರು. ವೆಚ್ಚದಲ್ಲಿ 50 ಎಕರೆ ಸ್ಥಳವನ್ನು ವಶಪಡಿಸಿಕೊಳ್ಳಲಾಗಿದೆ.

ರಾಯಲ್ ಎನ್‌ಪೀಲ್ಡ್ ಸಂಸ್ಥೆಯು ಈಗಾಗಲೇ ಚೆನ್ನೈನ ಓರಗಡಂನಲ್ಲಿ ಘಟಕವನ್ನು ಹೊಂದಿದೆ. ಅಲ್ಲದೆ ಹೊಸತಾಗಿ ಆರಂಭವಾಗಲಿರುವ ಘಟಕವು ಓರಗಡಂ ಕಾರಿಡೋರ್‌ನಲ್ಲಿ ತಲೆಯೆತ್ತಲಿರುವ ಎರಡನೇ ಘಟಕವೆನಿಸಲಿದೆ.

2015ರ ವೇಳೆಗೆ ಡೀಲರ್ ಜಾಲವನ್ನು 500ಕ್ಕೆ ಏರಿಸುವ ಯೋಜನೆ ಹೊಂದಿರುವ ಸಂಸ್ಥಯು, ಹೊಸ ಘಟಕದ ಆರಂಭದೊಂದಿದಗೆ ವಾರ್ಷಿಕವಾಗಿ ಆರು ಲಕ್ಷ ಯುನಿಟ್‌ಗಳ ನಿರ್ಮಾಣ ಸಾಮರ್ಥ್ಯ ವೃದ್ಧಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

English summary
Royal Enfield, the oldest motorcycle manufacturer in the world, is all set to open a new plant in Vallam Vadakal near Chennai.
Story first published: Tuesday, November 18, 2014, 10:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark