ಸ್ಕಾಟ್ ಸ್ಪೋರ್ಟ್ಸ್‌ನಿಂದ 2015 ಶ್ರೇಣಿಯ ಸೈಕಲ್ ಬಿಡುಗಡೆ

By Nagaraja

ಮುಂಚೂಣಿಯ ಹೈ-ಎಂಡ್ ಸೈಕ್ಲಿಂಗ್, ರನ್ನಿಂಗ್ ಮತ್ತು ವಿಂಟರ್ ಸ್ಪೋರ್ಟ್ಸ್ ಉತ್ಪನ್ನಗಳ ಬ್ರಾಂಡ್ ಆಗಿರುವ ಸ್ಕಾಟ್ ಸ್ಪೋರ್ಟ್ಸ್ ಇಂಡಿಯಾ ತನ್ನ 2015ರ ಸೈಕ್ಲಿಂಗ್ ಶ್ರೇಣಿಯ ಮೌಂಟೇನ್, ಹೈಬ್ರಿಡ್ ಮತ್ತು ರೋಡ್ ಬೈಕ್‍ಗಳ ಶ್ರೇಣಿಗಳನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಬೈಕ್ ಉತ್ಸಾಹಿಗಳಿಗೆ ಸ್ಕಾಟ್ ಸೈಕಲ್‍ಗಳನ್ನು ಪ್ರದರ್ಶಿಸಲಾಗಿತ್ತು.

'2015 ಶ್ರೇಣಿಯ ಸ್ಕಾಟ್ ಸ್ಪೋರ್ಟ್ಸ್ ಗ್ರಾಹಕರಿಗೆ ಅಸಾಧಾರಣ ಉತ್ಪನ್ನಗಳನ್ನು ಗ್ರಾಹಕ ಕೇಂದ್ರಿತ ವಿನ್ಯಾಸಗಳ ಮೂಲಕ ಒದಗಿಸುವ ಮೂಲಕ ತಮ್ಮ ಬದ್ಧತೆಯ ಪ್ರದರ್ಶಿಸುತ್ತಿರುವುದಾಗಿ' ಸ್ಕಾಟ್ ಸ್ಪೋರ್ಟ್ಸ್ ಇಂಡಿಯಾದ ಮ್ಯಾನೇಜರ್ ಜೇಮಿನ್ ಶಾ ತಿಳಿಸಿದ್ದಾರೆ.

2015ರ ಶ್ರೇಣಿ - ಮೌಂಟೇನ್ ಶ್ರೇಣಿ

2015ರ ಶ್ರೇಣಿ - ಮೌಂಟೇನ್ ಶ್ರೇಣಿ

ಮೌಂಟೇನ್ ಶ್ರೇಣಿಯ ಹೊಸ ವಿನ್ಯಾಸಗಳು ಸಮರ್ಥ ಮತ್ತು ಕಡಿಮೆ ತೂಕದ ಬೈಕ್‍ಗಳು. ಇವುಗಳನ್ನು ಆಫ್-ರೋಡ್ ಸೈಕ್ಲಿಂಗ್‍ ಜೊತೆಗೆ ಅಲಾಯ್ 6061ರಿಂದ ವಿನ್ಯಾಸಗೊಳಿಸಲಾಗಿದೆ. ಕಸ್ಟಮ್ ಬಟ್ಟೆಡ್ ಸೂಪರ್ ಲೈಟ್ ಟ್ಯೂಬಿಂಗ್ ಸ್ಟರ್ಡಿ ಮತ್ತು ವೈಡ್ ಗೇಜ್ ಟ್ರೇಡೆಡ್ ಚಕ್ರಗಳನ್ನು ಹೊಂದಿರುವ ಸ್ಕಾಟ್ ಮೌಂಟೇನ್ 2015ರ ಶ್ರೇಣಿ ನಿಮ್ಮ ಎಲ್ಲ ಆಫ್ ರೋಡ್ ಸವಾರಿಗೆ ಅನುಕೂಲಕರವಾಗಿದೆ.

ಹೈಬ್ರಿಡ್ ರೇಂಜ್

ಹೈಬ್ರಿಡ್ ರೇಂಜ್

2015ರ ಹೈಬ್ರಿಡ್ ಸೀರೀಸ್ ಬೈಕ್‍ಗಳು ಪ್ರವಾಸ ಮತ್ತು ಸಾರಿಗೆಗೆ ಅನುಕೂಲ ಮತ್ತು ಆರಾಮದಾಕವೆನಿಸಲಿದೆ. ಸ್ಕಾಟ್ ಹೈಬ್ರಿಡ್ ಸೈಕಲ್ಸ್ ವಸ್ತುಗಳನ್ನು ಹೊತ್ತೊಯ್ಯಲು ಅನುಕೂಲಕರ.

 ರೋಡ್ ಬೈಕ್

ರೋಡ್ ಬೈಕ್

ದೀರ್ಘ ಬಾಳ್ವಿಕೆ ಮತ್ತು ಅನುಕೂಲಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಸ್ಕಾಟ್ ರೋಡ್ ಬೈಕ್‍ಗಳು ಹಗುರ, ಸಮರ್ಥ ಮತ್ತು ಕಡಿಮೆ ಬೆಲೆಯನ್ನು ಹೊಂದಿವೆ.

ಸ್ಕಾಟ್ ಸ್ಪೋರ್ಟ್ಸ್‌ನಿಂದ 2015 ಶ್ರೇಣಿಯ ಸೈಕಲ್‌ಗಳ ಬಿಡುಗಡೆ

2015ರ ಸಂಗ್ರಹದಲ್ಲಿ 12 ಮೌಂಟೇನ್, ನಾಲ್ಕು ಹೈಬ್ರಿಡ್ ಮತ್ತು ಒಂಬತ್ತು ರೋಡ್ ಬೈಕ್‍ಗಳಿವೆ. ಇದರ ಬೆಲೆ 25,000 ರೂ.ನಿಂದ 6 ಲಕ್ಷ ರೂ. ವರೆಗೂ ಮತ್ತು ಅದಕ್ಕಿಂತಲೂ ಮೇಲ್ಪಟ್ಟಿದೆ. ಹೊಸ 2015 ಸ್ಕಾಟ್ ಸ್ಪೋರ್ಟ್ಸ್ ಶ್ರೇಣಿಯ ಸೈಕಲ್‌ಗಳು ಸೆಪ್ಟೆಂಬರ್ 19ರ ನಂತರ ಮಳಿಗೆಗಳಿಗೆ ಪೂರೈಕೆಯಾಗಲಿದೆ.

ಸ್ಕಾಟ್ ಸ್ಪೋರ್ಟ್ಸ್‌ನಿಂದ 2015 ಶ್ರೇಣಿಯ ಸೈಕಲ್‌ಗಳ ಬಿಡುಗಡೆ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಏಷ್ಯಾ ಪೆಸಿಫಿಕ್ ಸೇಲ್ಸ್ ಮ್ಯಾನೇಜರ್ ಶ್ರೀ ಕ್ಯಾಂಪ್‍ಬೆಲ್, 'ಸ್ಕಾಟ್ ಸ್ಪೋರ್ಟ್ಸ್ ಸಹಯೋಗ ನನಗೆ ನಿಜಕ್ಕೂ ಸಂತೋಷ ತಂದಿದೆ. ಸ್ಕಾಟ್ ಸ್ಪೋರ್ಟ್ಸ್‌ನಲ್ಲಿ ಎಲ್ಲ ವಯೋಮಾನದ ಸೈಕಲ್ ಪ್ರೇಮಿಗಳಿಗೆ ವಿನೂತನ ಶ್ರೇಣಿಯ ಉತ್ಪನ್ನಗಳನ್ನು ತರಲು ಸದಾ ಶ್ರಮಿಸುತ್ತೇವೆ' ಎಂದರು.

ಸ್ಕಾಟ್ ಸ್ಪೋಟ್ರ್ಸ್ ಇಂಡಿಯಾ ಕುರಿತು

ಸ್ಕಾಟ್ ಸ್ಪೋಟ್ರ್ಸ್ ಇಂಡಿಯಾ ಕುರಿತು

ಸ್ಕಾಟ್ ಜಾಗತಿಕವಾಗಿ ಮಾನ್ಯತೆ ಪಡೆದ ಬ್ರಾಂಡ್ ಆಗಿದ್ದು ತಂತ್ರಜ್ಞಾನ, ಉತ್ಪನ್ನದ ಸಂಶೋಧನೆ ಮತ್ತು ಅತ್ಯುತ್ತಮ ಗುಣಮಟ್ಟಕ್ಕೆ ಹೆಸರು ಪಡೆದಿದೆ. ಸ್ವಿಸ್ ಮೂಲದ ಈ ಕಂಪನಿ ಜಾಗತಿಕ ಮಲ್ಟಿಸ್ಪೋರ್ಟ್ ಕಂಪನಿಯಾಗಿದ್ದು ಉತ್ಪನ್ನಗಳಲ್ಲಿ ಐದು ಸ್ಪೋಟ್ಸ್ ಸೈಕ್ಲಿಂಗ್, ರನ್ನಿಂಗ್, ಮೋಟಾರ್ ಸ್ಪೋಟ್ಸ್, ವಿಂಟರ್ ಸ್ಪೋರ್ಟ್ಸ್ ಮತ್ತು ಔಟ್‍ಡೋರ್ ಒಳಗೊಂಡಿವೆ.

ಸ್ಕಾಟ್ ಸ್ಪೋರ್ಟ್ಸ್‌ನಿಂದ 2015 ಶ್ರೇಣಿಯ ಸೈಕಲ್‌ಗಳ ಬಿಡುಗಡೆ

ಸ್ಕಾಟ್‍ನ ಅತ್ಯಂತ ಮುಖ್ಯ ಗುರಿ ಎಂದರೆ ವಾಹನ ಪ್ರೇಮಿಗಳು ಪ್ರೀತಿಸುವ ಆಟಗಳಿಗೆ ಅತ್ಯುತ್ತಮ ಉತ್ಪನ್ನಗಳನ್ನು ನಿರ್ಮಿಸುವುದು. ಸ್ಕಾಟ್ 1958ರ ಇಸವಿಯಷ್ಟು ಹಿಂದಿನ ಸಂಸ್ಥೆ. ಎಡ್ ಸ್ಕಾಟ್ ಮೊದಲ ಅಲ್ಯುಮಿನಿಯಂ ಸ್ಕಿ ಪೋಲ್ ಕಂಡುಹಿಡಿಯುವ ಮೂಲಕ ಸ್ಕೀಯಿಂಗ್ ಅನ್ನು ಕ್ರಾಂತಿಕಾರಕಗೊಳಿಸಿದರು. ಅಂದಿನಿಂದ ಪ್ರತಿ ಕ್ರೀಡಾ ವಲಯಕ್ಕೂ ಎಚ್ಚರಿಕೆಯಿಂದ ಆಯ್ಕೆ ಮಾಡಿದ ಉತ್ಪನ್ನಗಳನ್ನು ನೀಡಲು ಪ್ರಾರಂಭಿಸಿತು.

ಸ್ಕಾಟ್ ಸ್ಪೋರ್ಟ್ಸ್‌ನಿಂದ 2015 ಶ್ರೇಣಿಯ ಸೈಕಲ್‌ಗಳ ಬಿಡುಗಡೆ

ಸ್ಕಾಟ್ ಮೊದಲ ಮೌಂಟೇನ್ ಬೈಕ್ ಅನ್ನು 1986ರಲ್ಲಿ ಪರಿಚಯಿಸಲಾಗಿತ್ತು. ಅಂದಿನಿಂದ ಸರಣಿ ಬಿಡುಗಡೆಯಾದರೂ ಪ್ರತಿಯೊಂದು ಕೂಡಾ ಒಂದಕ್ಕೊಂದು ವಿಭಿನ್ನವಾಗಿದೆ.

More from DriveSpark

Article Published On: Thursday, September 25, 2014, 10:03 [IST]
English summary
SCOTT Sports India, the leading manufacturing brand of high-end cycling, running and winter sports products announces its 2015 cycling range of Mountain, Hybrid & Road bikes at Bangalore. At the time of launch selected new range of Scotts cycles were displayed for the bike enthusiast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+