ಸುಜುಕಿ ಆಕ್ಸೆಸ್, ಸ್ವಿಶ್‌ಗೂ ಬರುತ್ತೆ ಎಸ್‌ಇಪಿ ತಂತ್ರಜ್ಞಾನ
ಇದೀಗಷ್ಟೇ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಲಿಮಿಟೆಡ್, ಸ್ಥಳೀಯ ಲಾಂಚ್ ಅಂಗವಾಗಿ ಬೆಂಗಳೂರಿನಲ್ಲಿ ನೂತನ 110 ಸಿಸಿ ಲೆಟ್ಸ್ ಸ್ಕೂಟರನ್ನು ಪರಿಚಯಿಸಿತ್ತು. ನೂತನ ಲೆಟ್ಸ್ ಸ್ಕೂಟರ್‌ನಲ್ಲಿ ಆಳವಡಿಸಲಾಗಿರುವ ಎಸ್‌ಇಪಿ ಎಂಜಿನ್ ಪ್ರಮುಖ ವೈಶಿಷ್ಟ್ಯವಾಗಿದೆ.(ಸುಜುಕಿ 'ಲೆಟ್ಸ್' ಸ್ಕೂಟರ್ ಬೆಂಗಳೂರಿನಲ್ಲಿ ಭರ್ಜರಿ ಲಾಂಚ್)
ಸುಜುಕಿಯ ಇಕೊ ಫರ್‌ಫಾರ್ಮಮೆನ್ಸ್ 112 ಸಿಸಿ ಎಸ್‌ಇಪಿ ಎಂಜಿನ್ ಗರಿಷ್ಠ ನಿರ್ವಹಣೆ ಜತೆಗೆ ಉತ್ತಮ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ. ಪ್ರಸ್ತುತ ಎಂಜಿನ್ ಇನ್ನು ಮುಂದೆ ಸುಜುಕಿಯ ಆಕ್ಸೆಸ್ ಹಾಗೂ ಸ್ವಿಶ್ ಆವೃತ್ತಿಗಳಿಗೂ ಆಳವಡಿಕೆಯಾಗಲಿದೆ.

ಕ್ರಾಂತಿಕಾರಿ ಎಸ್‌ಇಪಿ ತಂತ್ರಜ್ಞಾನವನ್ನು ಒಳಗೊಂಡಿರುವ ಲೆಟ್ಸ್, ಶಕ್ತಿ ಹಾಗೂ ಸಾಮರ್ಥ್ಯದ ಜತೆ ರಾಜಿಯಾಗದೆ ಹೆಚ್ಚಿನ ಇಂಧನ ಕ್ಷಮತೆಯನ್ನು ಹೊಂದಿದೆ. ಇದು 8.7 ಅಶ್ವಶಕ್ತಿ (9 ಎನ್‌ಎಂ ಟಾರ್ಕ್) ಉತ್ಪಾದಿಸುವ ಹೊರತಾಗಿಯೂ ಲೀಟರ್‌ಗೆ 63 ಕೀ.ಮೀ. ನೀಡಲಿದೆ.
ಸುಜುಕಿ ಇಕೊ ಫರ್‌ಫಾರ್ಮಮೆನ್ಸ್ ಹೋಂಡಾದ ಇಕೊ ತಂತ್ರಜ್ಞಾನಕ್ಕೆ ಸಮಾನವಾಗಿದೆ. ಅಂದರೆ ಮುಂದಿನ ದಿನಗಳಲ್ಲಿ ಸುಜುಕಿ ಪ್ರಯಾಣಿಕ ಬೈಕ್‌ಗಳಿಗೂ ಈ ತಂತ್ರಜ್ಞಾನ ಆಳವಡಿಸುವ ನಿರೀಕ್ಷೆಯಿದೆ.


Click it and Unblock the Notifications








