ಸುಜುಕಿ ಜಿಕ್ಸರ್ ಬುಕ್ಕಿಂಗ್ ಆರಂಭ; ಜುಲೈನಲ್ಲಿ ಲಾಂಚ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಸುಜುಕಿ ಜಿಕ್ಸರ್ ಬಿಡುಗಡೆಗೆ ದಿನಾಂಕ ನಿಗದಿಗೊಂಡಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ವರದಿಗಳ ಪ್ರಕಾರ ಜಪಾನ್ ಮೂಲದ ಸುಜುಕಿ ಸಂಸ್ಥೆಯು ಜುಲೈ ತಿಂಗಳಲ್ಲಿ ಜಿಕ್ಸರ್ 150 ಸಿಸಿ ಬೈಕ್ ಲಾಂಚ್ ಮಾಡಲಿದೆ. ಇದರಂತೆ ಸುಜುಕಿ ಶೋ ರೂಂಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಸ್ಟೈಲಿಷ್ 150ಸಿಸಿ ಬೈಕ್ ಆಗಿರುವ ಜಿಕ್ಸರ್, ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಈಗಾಗಲೇ ಲೆಟ್ಸ್ ಸ್ಕೂಟರ್‌ನಲ್ಲಿ ಪರಿಚಯಿಸಲಾಗಿರುವ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ಎಂಜಿನನ್ನು ಜಿಕ್ಸರ್‌ಗೂ ಆಳವಡಿಸಲಾಗುತ್ತದೆಯೇ ಎಂಬುದು ಕುತೂಹಲವೆನಿಸಿದೆ.
ಎಸ್‌ಪಿಪಿಯನ್ನು ಒಂದು ತಂತ್ರಜ್ಞಾನ ಎಂದು ವಿಶ್ಲೇಷಿಸಲು ಸಾಧ್ಯವಿಲ್ಲ. ಆದರೂ ಇದರಲ್ಲಿ ಕೆಲವೊಂದು ಪರಿಷ್ಕರಣೆ ತರಲಾಗಿದ್ದು, ಇಂಧನ ಕ್ಷಮತೆ ಸುಧಾರಣೆಗೆ ನೆರವಾಗಲಿದೆ. ಅಂದರೆ ಸುಜುಕಿ ಅಭಿಮತದಂತೆ ಜಿಕ್ಸರ್ ಹೆಚ್ಚು ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಲಿದೆ.
ನಿಮಗೆ ತಿಳಿದಿರುವಂತೆಯೇ 150ಸಿಸಿ ವಿಭಾಗವನ್ನು ಬಜಾಜ್ ಪಲ್ಸರ್ ಮತ್ತು ಯಮಹಾ ಎಫ್‌ಝಡ್ ಆವರಿಸಿಕೊಂಡಿದೆ. ಇದೀಗ ಜಿಕ್ಸರ್ ಆಗಮನದೊಂದಿಗೆ ಇನ್ನಷ್ಟು ಆರೋಗ್ಯಕರ ಪೈಪೋಟಿಗೆ ವೇದಿಕೆ ಸಿದ್ಧಗೊಳ್ಳಲಿದೆ. ಅಷ್ಟೇ ಅಲ್ಲದೆ ದೊಡ್ಡದಾದ ಆಲ್ ಡಿಜಿಟಲ್ ಮಾಹಿತಿ ಪರದೆ, ಮೊನೊಶಾಕ್ ಸಸ್ಪೆಷನ್, ಸ್ಪೋರ್ಟಿ ಟ್ವಿನ್ ಔಟ್ಲೆಟ್ ಎಕ್ಸಾಸ್ಟ್ ಜೊತೆಗೆ ವೈಡ್ 140/60 ರಿಯರ್ ಚಕ್ರಗಳು ಇತರ ಸ್ಪರ್ಧಿಗಳಿಂದ ಸುಜಿಕಿ ಜಿಕ್ಸರನ್ನು ಪ್ರತ್ಯೇಕಿಸಲಿದೆ.


Click it and Unblock the Notifications