ಬಿಡುಗಡೆಗೊಂಡ ಎಬಿಎಸ್ ವರ್ಷನ್ ಸುಜುಕಿ ಜಿಕ್ಸರ್ ಬೈಕ್.. ಬೆಲೆ ಎಷ್ಟು..??
ಸುಜುಕಿ ಮೋಟಾರ್‍ಸೈಕಲ್ ಇಂಡಿಯಾ ತಮ್ಮ ಜಿಕ್ಸರ್ ಬೈಕಿನ ಎಬಿಎಸ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 87,250 ಸಾವಿರಕ್ಕೆ ಬೆಲೆ ನಿಗದಿಪಡಿಸಲಾಗಿದೆ.
ಸುಜುಕಿ ಮೋಟಾರ್‍ಸೈಕಲ್ ಇಂಡಿಯಾ ತಮ್ಮ ಜಿಕ್ಸರ್ ಬೈಕಿನ ಎಬಿಎಸ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 87,250 ಸಾವಿರಕ್ಕೆ ಬೆಲೆ ನಿಗದಿಪಡಿಸಲಾಗಿದೆ. ಹೊಸದಾಗಿ ಬಿಡುಗಡೆಗೊಂಡ ಈ ಬೈಕ್‍ನಲ್ಲಿ ಪ್ರಾಯಾಣಿಕರ ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಅನ್ನು ಮುಂಭಾಗದ ಚಕ್ರಗಳಿಗೆ ಅಳವಡಿಸಲಾಗಿದೆ.

ಈ ಹಿಂದೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಜಿಕ್ಸರ್ ಎಸ್ಎಫ್ ಬೈಕಿನಲ್ಲಿ ಮಾತ್ರ ಅಳವಡಿಸಲಾಗಿದ್ದು, ಇದೀಗ ಸ್ಟ್ರಾಂಡರ್ಡ್ ವೇರಿಂಟ್ ಸಿಕ್ಸರ್ ಬೈಕಿಗು ಕೂಡ ಮುಂಭಾಗದ ಚಕ್ರಗಳಿಗೆ ಸಿಂಗಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಪ್ರೇರಿತ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬೆಲೆಯೇ ಎಕ್ಸ್‌ಶೋರಂ ಪ್ರಕಾರ 92,675 ಬೆಲೆ ಹೊಂದಿದ್ದು, 87 ಸಾವಿರ ಬಿಡುಗಡೆಗೊಂಡಿರುವ ಜಿಕ್ಸರ್ ಎಬಿಎಸ್ ಬೈಕ್‌ಗಳು ಗ್ರಾಹಕರನ್ನು ಸೆಳೆಯದೇ ಇರಲಾರವು.

ಇನ್ನು ನಾನ್ ಎಬಿಎಸ್ ಜಿಕ್ಸರ್ ಬೈಕ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಆನ್ ರೋಡ್ ಬೆಲೆಗಳ ಪ್ರಕಾರ ರೂ. 82,445ಕ್ಕೆ ಖರೀದಿ ಲಭ್ಯವಿದ್ದು, ಹೆಚ್ಚುವರಿಯಾಗಿ ನಾಲ್ಕು ಸಾವಿರ ಪಾವತಿಸಿದಲ್ಲಿ ಎಬಿಎಸ್ ಸೌಲಭ್ಯದ ಜಿಕ್ಸರ್ ಖರೀದಿ ಮಾಡಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಸುಜುಕಿ ಜಿಕ್ಸರ್ ಎಬಿಎಸ್ ವೇರಿಯಂಟ್ ಬೈಕ್ 154.ಸಿಸಿ ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 14.5 ಬಿಹೆಚ್‍ಪಿ ಮತ್ತು 14ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಎಂಜಿನ್ ಕೂಲಿಂಗ್‍ಗಾಗಿ ತಮ್ಮದೆ ಸಂಸ್ಥೆಯ ಸುಜುಕಿ ಜೆಟ್ ಕೂಲಿಂಗ್ ಅನ್ನು ಕೂಡ ಅಳವಡಿಸಲಾಗಿದೆ.

ವೈಶಿಷ್ಟ್ಯತೆಗಳು
ಹೊಸ ಸುಜುಕಿ ಜಿಕ್ಸರ್ ಎಬಿಎಸ್ ವೇರಿಯಂಟ್ ಬೈಕ್‍ನಲ್ಲಿ ಎಹೆಚ್ಒ ಹೆಡ್‍ಲೈಟ್ (ಆಟೋ ಹೆಡ್‍ಲ್ಯಾಂಪ್ ಆನ್), ಎಲ್ಇಡಿ ಟೈಲ್‍ಲೈಟ್, ಡಿಜಿಟಲ್ ಕ್ಲಸ್ಟರ್ ಮತ್ತು ಡಿಸ್ಕ್ ಬ್ರೇಕ್ ಅನ್ನು ಬೈಕಿನ ಎರಡು ಬದಿಗಳಲ್ಲಿ ಅಳವಡಿಸಲಾಗಿದೆ.

ಇದಲ್ಲದೆ ಈ ಬೈಕ್‍ನ ಸ್ಪೋರ್ಟಿ ಲುಕ್ ಅನ್ನು ಹೆಚ್ಚಿಸಲು ಸ್ಪೋರ್ಟಿ ಟ್ವಿನ್ ಎಕ್ಸಾಸ್ಟ್, 3 ಸ್ಪೋರ್ಕ್ ಅಲಾಯ್ ವೀಲ್ಸ್, ಸ್ಟೆಪ್ಡ್ ಸೀಟ್, 2 ಪೀಸ್ ರಿಯರ್ ಫೆಂಡರ್ ಅನ್ನು ಅಳವಡಿಸಲಾಗಿದ್ದು, ಮೆಟಾಲಿಕ್ ಟಿಟಾನ್ ಬ್ಲೂ/ಗ್ಲಾಸ್ ಸ್ಪಾರ್ಕ್ಲ್ ಬ್ಲಾಕ್, ಕ್ಯಾಂಡಿ ಸೊನೊಮ ರೆಡ್/ಮೆಟಾಲಿಕ್ ಸೋನಿಕ್ ಸಿಲ್ವರ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಸುಜುಕಿ ತನ್ನ ಜಿಕ್ಸರ್ ಬೈಕಿನ ಎಬಿಎಸ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಹೋಂಡಾ ಸಿಬಿ ಹಾರ್ನೆಟ್ 160ಆರ್ ಎಬಿಎಸ್, ಬಜಾಜ್ ಪಲ್ಸರ್ ಎನ್ಎಸ್ 160, ಟಿವಿಎಸ್ ಅಪಾಚೆ ಆರ್‍ಟಿಆರ್ 1604ವಿ ಮತ್ತು ಯಮಹಾ ಎಫ್‍ಜೆಡ್-ಎಸ್ ಬೈಕ್‍ಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








