ಎಲ್ಲವೂ ಅಂತಿಮ ಹೊಸ ಸುಜುಕಿ ಜಿಕ್ಸರ್ ಸೆ. 9ರಂದು ಲಾಂಚ್
ಇದೀಗ ಎಲ್ಲವೂ ಅಂತಿಮಗೊಂಡಿದ್ದು, ದೇಶದ ದ್ವಿಚಕ್ರ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಹೊಚ್ಚ ಹೊಸ ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಸೆಪ್ಟೆಂಬರ್ 09ರಂದು ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ.
ಇದನ್ನು ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಸುಜುಕಿ ಮೋಟಾರುಸೈಕಲ್ಸ್ ಇಂಡಿಯಾ ಲಿಮಿಟೆಡ್ ಸ್ಪಷ್ಟಪಡಿಸಿದೆ. ಇದರೊಂದಿಗೆ ಸುಜುಕಿ ಜಿಕ್ಸರ್ ಪ್ರವೇಶಕ್ಕೆ ಹಬ್ಬದ ಆವೃತ್ತಿಕ್ಕಿಂತ ಮೊದಲು ಕಾಲ ನಿಗದಿಯಾಗಿದೆ.

ಈ ಹಿಂದೆ ವರ್ಷಾರಂಭದಲ್ಲಿ ಸಾಗಿದ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಜಿಕ್ಸರ್, 150 ಸಿಸಿ ವಿಭಾಗದಲ್ಲಿ ಹೊಸ ಸ್ಪರ್ಧೆ ಒಡ್ಡುವಲ್ಲಿ ನೆರವಾಗಲಿದೆ.
ಅಂದ ಹಾಗೆ ಸುಜುಕಿ ಜಿಕ್ಸರ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದರ ಮುಂಬೈ ಎಕ್ಸ್ ಶೋ ರೂಂ ದರ 84,383 ರು.ಗಳಾಗಿರಲಿದೆ. ಅಲ್ಲದೆ ಐದು ವಿಭಿನ್ನ ಬಣ್ಣಗಳಲ್ಲಿ ಆಗಮನವಾಗಲಿದೆ.


Click it and Unblock the Notifications








