ಇಗೊ ಬಂದಿದೆ ಸುಜುಕಿ ನ್ಯೂ ಜನರೇಷನ್ ಹಯಾಟೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಐಪಿಎಲ್), ದೇಶದ ಮಾರುಕಟ್ಟೆಗೆ ಹೊಸತಾದ ನ್ಯೂ ಜನರೇಷನ್ ಹಯಾಟೆ ಬೈಕನ್ನು ಬಿಡುಗಡೆಗೊಳಿಸಿದೆ.

ಸುಜುಕಿ ಇಂಡಿಯಾ ಪೈಕಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಬೈಕ್ ಆಗಿರುವ ಹೊಸ ಹಯಾಟೆದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದ್ದು, ಆಕರ್ಷಣೆ, ಅನುಕೂಲತೆ ಮತ್ತು ನಯವಾದ ಚಾಲಣೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ.


ಹೊಸ ಹಯಾಟೆ ಆಕರ್ಷಕ ಮೈ ಬಣ್ಣವನ್ನು ಪಡೆದುಕೊಂಡಿದ್ದು, ತಾಜಾ ವಿನ್ಯಾಸ ಕಾಪಾಡಿಕೊಂಡಿದೆ. ಅಲ್ಲದೆ ಆಕರ್ಷಕ ಗ್ರಾಫಿಕ್ಸ್‌ನೊಂದಿಗೆ ಇನ್ನಷ್ಟು ಸ್ಟೈಲಿಷ್ ಎನಿಸಿಕೊಳ್ಳಲಿದೆ.

ಹಾಗಿದ್ದರೂ ಹೊಸ ಹಯಾಟೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 4 ಸ್ಟ್ರೋಕ್, 112 ಸಿಸಿ ಎಂಜಿನ್ ಪಡೆದುಕೊಂಡಿದ್ದು, ಗಮನಾರ್ಹ ಮೈಲೇಜ್ ನೀಡಲಿದೆ. 2014 ಸೆಪ್ಟೆಂಬರ್ 3ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿರುವ ಹೊಸ ಹಯಾಟೆ ದೆಹಲಿ ಎಕ್ಸ್ ಶೋ ರೂಂ ದರ 44,969 ರು.ಗಳಾಗಿದೆ.

Suzuki Hayate

ಐದು ಬಣ್ಣಗಳ ಆಯ್ಕೆ
ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ರೆಡ್ ಗ್ರಾಫಿಕ್ (ವೈವಿಬಿ),
ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್-ಬ್ಲೂ ಗ್ರಾಫಿಕ್ (ಎಸಿಎಕ್ಸ್),
ಪಿಯರ್ಲ್ ಮಿರೇಜ್ ವೈಟ್ (ವೈಪಿಎ),
ಪಿಯರ್ಲ್ ಮೈರಾ ರೆಡ್/ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ (ಜೆಎಸ್‌ಪಿ), ಪಿಯರ್ಲ್ ಮೂನ್ ಸ್ಟೋನ್ ಗ್ರೇ (ವೈಡಬ್ಲ್ಯುಸಿ)

More from DriveSpark

Article Published On: Wednesday, September 3, 2014, 15:35 [IST]
English summary
Japanese automobile giant also sells motorcycles and scooters in India. The have a product in almost every segment of Indian market. Suzuki Motorcycles India Pvt. Ltd. has today launched its new generation commuter motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+