ಸುಜುಕಿ ಇನಾಝುಮಾ ವಿಶೇಷ ಆವೃತ್ತಿ ಅನಾವರಣ
ಜನಪ್ರಿಯ ಇನಾಝುಮಾ ಆವೃತ್ತಿಗೆ ಇನ್ನಷ್ಟು ಆಕರ್ಷಣೆ ತುಂಬುವ ನಿಟ್ಟಿನಲ್ಲಿ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ, ಇಂಗ್ಲೆಂಡ್ ಮಾರುಕಟ್ಟೆಗಾಗಿ ಈ 250ಸಿಸಿಬೈಕ್‌ನ ವಿಶೇಷ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಸುಜುಕಿ ಇನಾಝಮಾ ಸ್ಟ್ರೀಟ್ ಬೈಕ್ ವಿಶೇಷ ಆವೃತ್ತಿಯು ರೆಡ್/ಬ್ಲ್ಯಾಕ್ ಮತ್ತು ಬ್ಲೂ/ಬ್ಲ್ಯಾಕ್ ಡ್ಯುಯಲ್ ಟೋನ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ನೂತನ ಇನಾಝುಮಾ 250ಝಡ್ ಸ್ಟಾಂಡರ್ಡ್ ಮಾದರಿಗಿಂತಲೂ ರು. 5,000ಗಳಷ್ಟು ದುಬಾರಿಯೆನಿಸಲಿದೆ.

ಇದು 248ಸಿಸಿ ಲಿಕ್ವಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 26 ಅಶ್ವಶಕ್ತಿ (24 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್ ಇರಲಿದೆ.
ಅಂದ ಹಾಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಬ್ರೇಕಿಂಗ್ ಜವಾಬ್ದಾರಿಯನ್ನು ನಿಸ್ಸಾನ್ ಡಿಸ್ಕ್ ಬ್ರೇಕ್‌ಗಳು ನಿಭಾಯಿಸಲಿದೆ. ಹಾಗೆಯೇ ಸೆಮಿ ಡಬಲ್ ಕ್ರಾಡಲ್ ಚಾಸೀ, ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂದುಗಡೆ ಏಳು ರೀತಿಯಲ್ಲಿ ಹೊಂದಾಣಿಸಬಹುದಾದ ಸಸ್ಫೆಷನ್ ಪಡೆದುಕೊಳ್ಳಲಿದೆ. ಎಲ್‌ಸಿಡಿ ಪರದೆಯ ಸ್ಪೀಡೋಮೀಟರ್ ಮತ್ತು ತ್ರಿ ಸ್ಪೋಕ್ ಅಲ್ಯೂಮಿನಿಯಂ ವೀಲ್ಸ್ ಮಗದೊಂದು ವೈಶಿಷ್ಟ್ಯವಾಗಿರಲಿದೆ.
ಇನ್ನು ಭಾರತದಲ್ಲಿ ಇತ್ತೀಚೆಗಷ್ಟೇ ಇನಾಝುಮಾ ಮಾದರಿಯ ಬೆಲೆಯನ್ನು ಒಂದು ಲಕ್ಷ ರು.ಗಳಷ್ಟು ಇಳಿಕೆಗೊಳಿಸಲಾಗಿತ್ತು. ಇದರ ಮುಂಬೈ ಆನ್ ರೋಡ್ ದರ 2.43 ಲಕ್ಷ ರು.ಗಳಾಗಿದೆ.


Click it and Unblock the Notifications








