2015ರಲ್ಲಿ ಟಿವಿಎಸ್ ಅಪಾಚಿ 200 ಸಿಸಿ ಬೈಕ್ ಲಾಂಚ್
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್, 2015ನೇ ಸಾಲಿನಲ್ಲಿ ಅತ್ಯಾಕರ್ಷಕ 200 ಸಿಸಿ ಅಪಾಚಿ ಬೈಕನ್ನು ಲಾಂಚ್ ಮಾಡಲಿದೆ. ಈ ಮೂಲಕ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಗಟ್ಟಿ ಮಾಡಲಿದೆ.
ದೇಶಿಯ ಸೇರಿದಂತೆ ಅಂತರಾಷ್ಟ್ರೀಯ ವಿಭಾಗದಿಂದ ಪೈಪೋಟಿ ವೃದ್ಧಿಸುತ್ತಿರುವುದನ್ನು ನಿಕಟವಾಗಿ ಗಮನಿಸಿರುವ ಟಿವಿಎಸ್, 200 ಸಿಸಿ ವಿಭಾಗದಲ್ಲಿ ನೂತನ ಬೈಕ್ ಪರಿಚಯಿಸಲು ಹೊರಟಿದೆ.

ವರದಿಗಳ ಪ್ರಕಾರ ಟಿವಿಎಸ್‌ನ ಮೊದಲ 200 ಸಿಸಿ ಅಪಾಚಿ ಬೈಕ್ 2015ನೇ ಸಾಲಿನಲ್ಲಿ ಆಗಮನವಾಗಲಿದೆ. ಇದನ್ನು 250 ಸಿಸಿ ಅಪಾಚಿ ಹಿಂಬಾಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ತಂತ್ರಗಾರಿಕೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಟಿವಿಎಸ್ ಡ್ರೇಕನ್ ನೆಕ್ಡ್ ಸ್ಪೋರ್ಟ್ಸ್ ಬೈಕ್‌ನಲ್ಲಿ ಆಳವಡಿಸಲಾಗಿರುವ ನೂತನ ತಂತ್ರಾಂಶಗಳು ಅಪಾಚಿಯಲ್ಲೂ ಕಂಡುಬರುವ ಸಾಧ್ಯತೆಯಿದೆ.
ಟಿವಿಎಸ್ ಭವಿಷ್ಯದ ನಿರ್ವಹಣಾ ಮೋಟಾರುಸೈಕಲ್ ಆಧಾರವಾಗಿ ಡ್ರೇಕನ್ ಕಾನ್ಸೆಪ್ಟ್ ಪ್ರದರ್ಶಿಸಲಾಗಿತ್ತು. ಇದು ಆಫ್-ಸೆಟ್ ಮೊನೊಶಾಕ್, ಎಂಜಿನ್ ಕೆಳಗಡೆ ಎಕ್ಸಾಸ್ಟ್ ಔಟ್ಲೆಟ್, ಆಕ್ಟಿವ್ ಮ್ಯಾಟ್ರಿಕ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಂಪೂರ್ಣ ಎಲ್‌ಇಡಿ ಹೆಡ್‌ಲೈಟ್, ಮಡ್ ಗಾರ್ಡ್ ಜತೆಗೆ ಇಂಟೆಗ್ರೇಟಡ್ ಎಲ್‌ಇಡಿ ಲೈಟ್ಸ್ ಸೌಲಭ್ಯವಿರಲಿದೆ.


Click it and Unblock the Notifications