ನಿಮ್ಮ ಬಳಿಗೆ ಮತ್ತೆರಡು ಹೊಸ ಬಣ್ಣಗಳಲ್ಲಿ ಟಿವಿಎಸ್ ಜೂಪಿಟರ್
ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರು ಸಂಸ್ಥೆಯು, ತನ್ನ ಜನಪ್ರಿಯ ಜೂಪಿಟರ್ ಸ್ಕೂಟರ್‌ಗೆ ಮತ್ತೆರಡು ಬಣ್ಣಗಳ ಆಯ್ಕೆಗಳನ್ನು ಸೇರಿಸಿವೆ.
ದೀಪಾವಳಿ ಹಬ್ಬದ ಆವೃತ್ತಿಯ ಸಂಭ್ರಮದ ಹಿನ್ನಲೆಯಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಟಿವಿಎಸ್‌ನಿಂದ ಇಂತಹದೊಂದು ಸ್ವಾಗತಾರ್ಹ ನಡೆ ಕಂಡುಬಂದಿದೆ.

ಹೊಸ ಬಣ್ಣಗಳು
ಮ್ಯಾಟ್ ಬೀಜ್,
ಸ್ಪಾರ್ಕ್ಲಿಂಗ್ ಸಿಲ್ವರ್

ಹೆಚ್ಚುವರಿ ಎರಡು ಬಣ್ಣಗಳ ಸೇರಿದಂತೆ ಹೊಸ ಜೂಪಿಟರ್ ಇದೀಗ ಒಟ್ಟು ಆರು ಬಣ್ಣಗಳಲ್ಲಿ ದೊರಕಲಿದೆ. ಉಳಿದ ನಾಲ್ಕು ವರ್ಣಗಳು ಇಂತಿದೆ:
ವೋಲ್ಕನೋ ರೆಡ್,
ಮಿಡ್‌ನೈಟ್ ಬ್ಲ್ಯಾಕ್,
ಟೈಟಾನಿಯಂ ಗ್ರೇ,
ಪ್ರಿಸ್ಟಿನ್ ವೈಟ್

ಟಿವಿಎಸ್‌ನ ಇತರ ಸ್ಕೂಟರ್‌ಗಳಾದ ಜೆಸ್ಟ್, ಪೆಪ್ ಪ್ಲಸ್ ಸ್ಟ್ರೀಕ್ ಮಹಿಳಾ ಗ್ರಾಹಕರನ್ನು ಕೇಂದ್ರಿಕರಿಸಿದ್ದಲ್ಲಿ ಜೂಪಿಟರ್ ಪುರಷ ಗ್ರಾಹಕರನ್ನು ಆಕರ್ಷಿಸಲಿದೆ. ಇದು ಈ ಎರಡು ವಿಭಾಗವನ್ನು ಕೇಂದ್ರಿಕರಿಸಿರುವ ವೆಗೊ ತಲಹದಿಯಲ್ಲಿ ನಿರ್ಮಾಣವಾಗಿದೆ.
ಅಂದ ಹಾಗೆ ಟಿವಿಎಸ್ ಜೂಪಿಟರ್ ಸ್ಕೂಟರ್ 109.7 ಸಿಸಿ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 7.88 ಅಶ್ವಶಕ್ತಿ (8 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿದ್ದು, ಮುಂದುಗಡೆ ಟೆಲಿಸ್ಕಾಪಿಕ್ ಫ್ರಂಟ್ ಮ್ತತು ಹಿಂದುಗಡೆ ಸಿಂಗಲ್ ಸೈಡಡ್ ಕಾಯಿಲ್ ಸ್ಪ್ರಿಂಗ್ ಸಸ್ಪೆಷನ್ ಹೊಂದಿದೆ.


Click it and Unblock the Notifications








