ಟಿವಿಎಸ್ ಮೋಟಾರ್ಸ್ ಆದಾಯ ಶೇಕಡಾ 35ರಷ್ಟು ಏರಿಕೆ

By Nagaraja

1978ನೇ ಇಸವಿಯಲ್ಲಿ ಸ್ಥಾಪಿತವಾಗಿರುವ ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್, ಈಗಾಗಲೇ ಭಾರತ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿದೆ. ಅಂತೆಯೇ ಗ್ರಾಹಕರಿಗೆ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಬದ್ಧವಾಗಿರುವ ಸಂಸ್ಥೆಯು ನಿರಂತರ ಅಂತರಾಳದಲ್ಲಿ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದೆ.

ವರದಿಗಳ ಪ್ರಕಾರ ಟಿವಿಎಸ್ ಸಂಸ್ಥೆಯು 2014 ಸೆಪ್ಟೆಂಬರ್‌ ತಿಂಗಳಿಗೆ ಅಂತ್ಯಗೊಂಡ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 35ರಷ್ಟು ಆದಾಯ ಏರಿಕೆ ದಾಖಲಿಸಿದ್ದು, ಒಟ್ಟು 2,683.1 ಕೋಟಿ ರು.ಗಳಿಗೆ ಏರಿಕೆಯಾಗಿದೆ. 2013ನೇ ಸಾಲಿನಲ್ಲಿ ಈ ಸಂಖ್ಯೆ 1988.4 ಕೋಟಿ ರು.ಗಳಿಷ್ಟಿತ್ತು.

TVS MOTOR COMPANY

ಈ ಅವಧಿಯಲ್ಲಿ ಸಂಸ್ಥೆಯು ಒಟ್ಟು 6,48,000 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಕಳೆದ ಬಾರಿ ಇದೇ ಅವಧಿಯಲ್ಲಿ 4,79,000 ಯುನಿಟ್‌ಗಳ ಮಾರಾಟ ಮಾತ್ರ ಕಂಡಿತ್ತು.

ಈ ಪೈಕಿ ಮೋಟಾರುಸೈಕಲ್ ವಿಭಾಗದಲ್ಲಿ ಶೇಕಡಾ 29ರಷ್ಟು ಏರಿಕೆ ಕಂಡಿದ್ದು, 2.55 ಲಕ್ಷ ಯುನಿಟ್‌ಗಳಿಗೆ ಏರಿಕೆಯಾಗಿದೆ. 2013ನೇ ಸಾಲಿನಲ್ಲಿ ಈ ಸಂಖ್ಯೆ 1.97 ಲಕ್ಷ ಯುನಿಟ್‌ಗಳಿಷ್ಟಿತ್ತು.

ಇನ್ನು ಸ್ಕೂಟರ್ ವಿಭಾಗದಲ್ಲೂ ಅದ್ಭುತ ಏರಿಕೆ ಸಾಧಿಸಿರುವ ಟಿವಿಎಸ್ ಶೇಕಡಾ 68ರಷ್ಟು ಏರಿಕೆಯೊಂದಿಗೆ 2014ರಲ್ಲಿ 1.95 ಲಕ್ಷ ಯುನಿಟ್‌ಗಳ ಮಾರಾಟ ಕಂಡಿದೆ. ಇದು ಕಳೆದ ವರ್ಷ 1.16 ಲಕ್ಷ ಯುನಿಟ್‌ಗಳಿಷ್ಟಿತ್ತು.

More from DriveSpark

Article Published On: Saturday, November 15, 2014, 13:19 [IST]
English summary
TVS Motor Company has reported a revenue growth of 35% for the quarter ended September 2014. Total revenue grew from Rs. 1,988.4 crores in the quarter ended September 2013 to Rs. 2,683.1 crores in the quarter under review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+