2015ರಲ್ಲಿ ಡಕಾರ್ ರಾಲಿಗೆ ಟಿವಿಎಸ್ ರೇಸಿಂಗ್ ಗ್ರಾಂಡ್ ಎಂಟ್ರಿ

By Nagaraja

ಫ್ರಾನ್ಸ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಷೆರ್ಕೊ (Sherco)ಜೊತೆ ಸಹಯೋಗ ಹೊಂದಿರುವ ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್‌ 2015 ಡಕಾರ್ ರಾಲಿಯಲ್ಲಿ ಭರ್ಜರಿ ಎಂಟ್ರಿ ಕೊಡಲಿದೆ.

ಫ್ರಾನ್ಸ್ ಸಂಸ್ಥೆಯ ಜೊತೆ ಕೈಜೋಡಿಸಿರುವ ಟಿವಿಎಸ್ ರೇಸಿಂಗ್, ಇದೀಗ 'ಷೆರ್ಕೊ ಟಿವಿಎಸ್ ರಾಲಿ ಫಾಕ್ಟರಿ ಟೀಮ್' ಎಂದೆನಿಸಿಕೊಳ್ಳಲಿದೆ. ಇದು ಟಿವಿಎಸ್ ರೇಸಿಂಗ್ ಎಂಜಿನಿಯರ್ ಹಾಗೂ ಷೆರ್ಕೊ ತಂಡದ ಸಾಂಘಿಕ ಪ್ರಯತ್ನದ ಫಲವಾಗಿದೆ.

tvs dakar

2015ರಲ್ಲಿ ಭಾಗಿಯಾಗಲಿರುವ ಈ ತಂಡವು ಆರ್‌ಆರ್‌ಆರ್ 450ಯೆಂಬ ಎರಡು ಮೋಟಾರುಸೈಕಲ್‌ಗಳನ್ನು ಬಳಕೆ ಮಾಡಲಿದೆ. ಇದು 450 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಹಗುರ ಭಾರವನ್ನು ಕಾಯ್ದುಕೊಂಡಿದೆ.

ಟಿವಿಎಸ್ ರೇಸಿಂಗ್ ಜೊತೆ ಸೇರಿಕೊಂಡು ಇದರ ಎಂಜಿನ್ ವಿನ್ಯಾಸ, ಅಭಿವೃದ್ಧಿ ಕಾರ್ಯವನ್ನು ಷೆರ್ಕೊ ಕೈಗೊಂಡಿದೆ. ಅಂತೆಯೇ ಇದರ ಪರೀಕ್ಷೆಯು ಕೂಡಾ ಫ್ರಾನ್ಸ್‌ನಲ್ಲೇ ನಡೆದಿದೆ.

More from DriveSpark

Article Published On: Saturday, December 6, 2014, 7:40 [IST]
English summary
TVS Racing is all set to make a grand entry into Dakar 2015. The company will collaborate with the French motorcycle manufacturer, Sherco for the Dakar Rally 2015. This new team will be called "Sherco TVS Rally Factory Team".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+