ಭಾರತದಲ್ಲೂ ಬೈಕ್‌ಗಳಿಗೆ ಎಬಿಎಸ್ ಕಡ್ಡಾಯ?

Written By:

ಭಾರತದ ರಸ್ತೆಗಳಲ್ಲಿ ಓಡಾಡುವ ವಾಹನಗಳು ಅತ್ಯಂತ ಕಳಪೆ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಹೊಂದಿವೆಯೆಂಬ ಅಪವಾದವು ಪದೇ ಪದೇ ಕೇಳಿಬರುತ್ತಲೇ ಇದೆ. ಈ ಸಂಬಂಧ ವಿದೇಶಗಳಲ್ಲಿ ನಡೆಸಲಾಗುತ್ತಿರುವ ಅಪಘಾತ ಪರೀಕ್ಷೆಯಲ್ಲಿ ಭಾರತೀಯ ಮೂಲದ ಕಾರುಗಳು ಸರಾಸರಿ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ.

ಈ ಎಲ್ಲ ಅಪವಾದಗಳು ಒಂದೆಡೆಯಾದರೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸತೊಂದು ಪ್ರಸ್ತಾವನೆಯೊಂದಿಗೆ ಮುಂದೆ ಬಂದಿದ್ದು, ಭವಿಷ್ಯದಲ್ಲಿ ದೇಶದ ರಸ್ತೆಗಳಲ್ಲಿ ಓಡಾಡುವ ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಕಡ್ಡಾಯವಾಗಿ ಆಳವಡಿಸಬೇಕೆಂಬ ಗಾಢವಾದ ಚಿಂತನೆ ನಡೆಸುತ್ತಿದೆ.

ABS

ವಿದೇಶ ರಾಷ್ಟ್ರಗಳಲ್ಲಿ ಎಬಿಎಸ್ ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ದ್ವಿಚಕ್ರ ವಿಭಾಗ ಮಾರುಕಟ್ಟೆಯಲ್ಲಿ ಇಂತಹದೊಂದು ಮಹತ್ತರ ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸುವುದು ಅಷ್ಟು ಸುಲಭದ ವಿಚಾರವಲ್ಲ.

ತ್ವರೆ ಮಾಡಿ; ಬೈಕ್‌ಎನ್‌ವೀರ್ ಬೈಕಿಂಗ್ ಗ್ಲೋವ್ ರು. 340ರಿಂದ

ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವ ಸಚಿವಾಲಯವು ಪ್ರಾರಂಭದಲ್ಲಿ ಗರಿಷ್ಠ ನಿರ್ವಹಣಾ ಅಂತೆಯೇ ಕ್ರಮೇಣ ಪ್ರಯಾಣಿಕ ಬೈಕ್‌ಗಳಲ್ಲೂ ಸ್ಟಾಂಡರ್ಡ್ ಆಗಿ ಎಬಿಎಸ್ ಲಗತ್ತಿಸುವ ಯೋಜನೆ ಹೊಂದಿದೆ.

ಇನ್ನು ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಅತಿ ಹೆಚ್ಚು ದ್ವಿಚಕ್ರ ರಸ್ತೆ ಅಪಘಾತ ಪ್ರಕರಣಗಳು ಸಂಭವಿಸುತ್ತಿದೆ. ಅಲ್ಲದೆ ಬಹುತೇಕ ಪ್ರಕರಣಗಳಲ್ಲಿ ಬೈಕ್ ಸ್ಕಿಡ್ ಆಗುವುದರಿಂದ ಅಪಘಾತಗಳು ಘಟಿಸುತ್ತಿದೆ. ಈ ಎಲ್ಲ ವಿಚಾರಗಳನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

English summary
The Ministry of Road Transport And Highways of India has its head deep in thought of making Anti-Lock Braking System (ABS), a standard feature for all two-wheelers in the Indian market.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark