ಯಮಹಾ ಆರ್1, ಆರ್1ಎಂ ಸೂಪರ್ ಬೈಕ್ ಬೆಲೆ ಎಷ್ಟು ಗೊತ್ತೇ?

Written By:

ಇತ್ತೆಚೇಗಷ್ಟೇ ಇಟಲಿಯ ಮಿಲಾನ್‌ನಲ್ಲಿ ನಡೆದ 2014 ಇಐಸಿಎಂಎಂ ಮೋಟಾರ್ ಶೋದಲ್ಲಿ ಜಪಾನ್ ಮೂಲದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಎರಡು ಹೊಸ ಮಾದರಿಗಳನ್ನು ಅನಾವರಣಗೊಳಿಸಿತ್ತು.

ಮುಂದಿನ ಪೀಳಿಗೆಯ ಈ ಸೂಪರ್ ಬೈಕ್‌ಗಳು 2015 ಆರ್1 ಹಾಗೂ ಆರ್1ಎಂ ಆಗಿದೆ. ಈ ಪೈಕಿ ಆರ್1ಎಂ ಟ್ರ್ಯಾಕ್ ಬೈಕಾಗಿದ್ದರೆ ಹೊಸ ಆರ್1 ಸೂಪರ್ ಬೈಕ್ ಅನ್ನು ಸಂಪೂರ್ಣವಾಗಿ ಪರಿಷ್ಕೃತಗೊಳಿಸಲಿದೆ.

yamaha r1

ಈ ನಡುವೆ ಮುಂದಿನ ವರ್ಷ ರಸ್ತೆ ಪ್ರವೇಶಿಸಲಿರುವ ಯಮಹಾ ಮಾದರಿಗಳ ಬೆಲೆಯನ್ನು ಬ್ರಿಟನ್‌ನಲ್ಲಿ ಘೋಷಣೆ ಮಾಡಲಾಗಿದೆ. ಹೌದು, ಬ್ರಿಟನ್‌ನಲ್ಲಿ ಯಮಹಾ ಆರ್1 ಸ್ಟ್ರೀಟ್ ವರ್ಷನ್ 14.61 ಹಾಗೂ ಆರ್1ಎಂ ಟ್ರ್ಯಾಕ್ ವರ್ಷನ್ 18.02 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಇದು 2015 ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಬಳಿಕ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ದೇಶದಲ್ಲಿ ಹೆಚ್ಚೆಚ್ಚು ಯುವ ಗ್ರಾಹಕರು ಸೂಪರ್ ಬೈಕ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದುಬಾರಿ ಬೈಕ್‌ಗಳು ದೇಶಕ್ಕೆ ಪರಿಚಯವಾಗಲಿದೆ.

English summary
Yamaha has now announced the pricing of both their bikes for UK. The 2015 R1 and 2015 R1M will be available by March, 2015.
Story first published: Thursday, December 4, 2014, 16:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark