2016ರಿಂದ ಯಮಹಾ ಎಲೆಕ್ಟ್ರಿಕ್ ಬೈಕ್ ಲಭ್ಯ
ಈಗಾಗಲೇ ತನ್ನ ಅತ್ಯಾಕರ್ಷಕ ಉತ್ಪನ್ನಗಳಿಂದ ಜನ ಮೆಚ್ಚುಗೆಗೆ ಪಾತ್ರವಾಗಿರುವ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ವಿದ್ಯುತ್ ಚಾಲಿತ ವಾಹನಗಳು 2016ನೇ ಇಸವಿಯಲ್ಲಿ ರಸ್ತೆಗಿಳಿಯಲಿದೆ.
ಈ ಹಿಂದೆ 2013 ಟೊಕಿಯೊ ಮೋಟಾರು ಶೋದಲ್ಲಿ ಪಿಇಡಿ1 ಹಾಗೂ ಪಿಇಎಸ್1 ಕಾನ್ಸೆಪ್ಟ್ ಎಲೆಕ್ಟ್ರಿಕ್ ಬೈಕ್‌ಗಳನ್ನು ಪ್ರದರ್ಶಿಸಿದ್ದ ಯಮಹಾ, ಈ ಮೂಲಕ ಪ್ಯೂಚರಿಸ್ಟಿಕ್ ವಿನ್ಯಾಸ ಕಾಪಾಡಿಕೊಂಡಿತ್ತು.

ಇದರಲ್ಲಿ ಅದಲು ಬದಲು ಮಾಡಿಕೊಳ್ಳುವಂತಹ ಬ್ಯಾಟರಿ ಪ್ಯಾಕ್ ಬಳಕೆ ಮಾಡಿರುವುದು ವಿಶೇಷವೆನಿಸಿದೆ. ಯಮಹಾ ಎಂಜಿನಿಯರ್‌ಗಳಿಂದ ಅವಿರತ ಪರೀಕ್ಷಾರ್ಥ ಹಂತದಲ್ಲಿರುವ ಪಿಇಎಸ್1 ಕಾನ್ಸೆಪ್ಟ್, ಮುಂಬರುವ ಎರಡು ವರ್ಷಗಳಲ್ಲಿ ನಿರ್ಮಾಣ ವರ್ಷನ್ ಪಡೆದುಕೊಳ್ಳಲಿದೆ.
ಇತ್ತೀಚೆಗಷ್ಟೇ ಜಪಾನ್‌ನ ಈ ವಾಹನ ತಯಾರಕ ಸಂಸ್ಥೆಯು ತ್ರಿಚಕ್ರ ಬೈಕನ್ನು ಪರಿಚಯಿಸಿತ್ತು. ಇನ್ನೊಂದೆಡೆ ಪಿಇಡಿ1, ಕೆಟಿಎಂ ಫ್ರಿರೈಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. ಹಾಗಿದ್ದರೂ ಬಲೆ ಬಗೆಗಿನ ಯಾವುದೇ ಮಾಹಿತಿಯನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.


Click it and Unblock the Notifications