ಸೈಕಲ್ ತುಳಿತದಿಂದ ದಣಿವಾಗಿದೆಯೇ? ಅತ್ಯಾಧುನಿಕ ಇ-ಬೈಕ್ ನಿಮ್ಮದಾಗಿಸಿ

By Nagaraja

ಇಟಲಿಯ ಐಕಾನಿಕ್ ಡಿಸೈನ್ ಮತ್ತು ಎಂಜಿನಿಯರ್ ಸಂಸ್ಥೆಯಾಗಿರುವ ಪಿನಿನ್ ಫರಿನಾ ಅತಿ ನೂತನ ಇ ಬೈಕ್ ವೊಂದನ್ನು ಅಭಿವೃದ್ಧಿಪಡಿಸಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ವಿನ್ಯಾಸದ ಜೊತೆಗೆ ಕರಕುಶಲ ಕೌಶಲ್ಯದ ಸಂಯೋಜನೆಯನ್ನು ನೀವಿಲ್ಲಿ ಕಾಣಬಹುದಾಗಿದೆ.

ಪಿನಿನ್ ಫರಿನಾ ಅಭಿವೃದ್ಧಿಪಡಿಸಿರುವ ನೂತನ ಸೈಕಲ್ ಹೆಸರು ಫ್ಯೂರಿಸೆರೀ (FUORISERIE) ಎಂದಾಗಿದೆ. ಇದು ಸಿಯೋಲ್ ಲಿವಿಂಗ್ ಡಿಸೈನ್ ಫೇರ್ ನಲ್ಲಿ ಪಾದಾರ್ಪಣೆಗೈದಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ಪಿನಿನ್ ಫರಿನಾ ವಿನ್ಯಾಸಿತ ಈ ಕರಕುಶಲ ಸೈಕಲ್ ಅಭಿವೃದ್ಧಿಯಲ್ಲಿ 43 ಮಿಲನೊ ಕರಕುಶಲ ಕೆಲಸಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಐಷಾರಾಮಿ ಸೈಕಲ್ ನಲ್ಲಿ ಮೈಕ್ರೋ ಎಂಜಿನ್ ಆಳವಡಿಸಲಾಗಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ನಾವೀನ್ಯತೆಯ ಸಂಕೇತವಾಗಿರುವ ಈ ಪೆಡಲ್ ಪುಶರ್ ಸೈಕಲ್ ಯಾವುದೇ ಪರಿಸ್ಥಿತಿಯಲ್ಲೂ ಸುಲಭವಾದ ಚಾಲನೆಯನ್ನು ಒದಗಿಸಲಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ನಗರದಲ್ಲಿ ಫಿನಿನ್ ಫರಿನಾ ಸೈಕಲ್ ಹ್ಯಾಂಡಲ್ ಮಾಡುವುದು ಸರಳವಾಗಿದ್ದು, ಪ್ರವಾಸದ ಅಗತ್ಯಗಳನ್ನು ಪೂರೈಸಲಿದೆ ಎಂದು ತಯಾರಕರು ಅಭಿಪ್ರಾಯಪಡುತ್ತಾರೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ನೈಜ ಲೆಥರ್ ಪರಿಕರಗಳೊಂದಿಗೆ ಇದರ ಹ್ಯಾಂಡಲ್ ಬಾರ್ ಹಾಗೂ ಸೀಟು ಮುಂತಾದ ಭಾಗಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ಪರಿಸರ ಸ್ನೇಹಿ ಎಂಬ ಬಿರುದಿಗೆ ಪಾತ್ರವಾಗಿರುವ ಈ ಸೈಕಲ್ ಅನ್ನು 1936ರ ಪಿನಿನ್ ಫರಿನಾ ಲಾನ್ಸಿಯಾ ಅಸ್ಟುರಾ ಬೊಕ್ಕಾಸ್ ನಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ಇದರಲ್ಲಿ ಎಲೆಕ್ಟ್ರಿಕ್ ಮೋಟಾರು ಕೂಡಾ ಆಳವಡಿಸಲಾಗಿದ್ದು, ಪೆಡಲ್ ತುಳಿಯುವ ವೇಳೆ ಸ್ವಯಂಚಾಲಿತವಾಗಿ ಇದರಲ್ಲಿರುವ ಲಿಥಿಯಂ ಇಯಾನ್ ಬ್ಯಾಟರಿ ರಿಚಾರ್ಜ್ ಆಗಲಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ಇದಕ್ಕಾಗಿ ಜೆಹೂಸ್ (Zehus) ಬೈಕ್ ಪ್ಲಸ್ ತಂತ್ರಜ್ಞಾನವನ್ನು ಆಳವಡಿಸಲಾಗಿದ್ದು, ನಿಮ್ಮ ದೈನಂದಿನ ಪಯಣದಲ್ಲಿ ಸ್ವಯಂಚಾಲಿತವಾಗಿ ರಿಚಾರ್ಜ್ ಆಗುವ ಮೂಲಕ ನಿಮ್ಮ ಪೆಡಲಿಂಗ್ ದಣಿವನ್ನು ಕಡಿಮೆ ಮಾಡಲಿದೆ.

ಅತ್ಯಾಧುನಿಕ ಪಿನಿನ್ ಫರಿನಾ ಸೈಕಲ್

ಒಟ್ಟಾರೆಯಾಗಿ ಸಂಪೂರ್ಣ ನಾವೀನ್ಯ ತಂತ್ರಜ್ಞಾನವನ್ನು ಆಳವಡಿಸಲಾಗಿದ್ದು, ಸೀಮಿತ 30 ಯುನಿಟ್ ಗಳಷ್ಟು ಮಾತ್ರ ನಿರ್ಮಾಣವಾಗಲಿದೆ.

More from DriveSpark

Article Published On: Thursday, April 9, 2015, 17:06 [IST]
English summary
A stylish Italian E-bike Pininfarina Fuoriserie
Read more on ಸೈಕಲ್ cycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+