ಸದ್ದಿಲ್ಲದೆ ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ಬೆಲೆ ಏರಿಕೆ
ಈ ದೀಪಾವಳಿ ಹಬ್ಬವನ್ನು ಮತ್ತಷ್ಟು ಚಂದವಾಗಿಸಲು ಯೋಜನೆಯಲ್ಲಿದ್ದೀರಾ? ದೇಶ ನಂ.1 ಕ್ರೀಡಾ ಬೈಕ್ ಆಗಿರುವ ಹೊಚ್ಚ ಹೊಸ ಪಲ್ಸರ್ ಕೊಳ್ಳುವ ಇರಾದೆಯಿದೆಯೇ? ನಿಮ್ಮ ಮಾಹಿತಿಗಾಗಿ ಬಜಾಜ್ ಆಟೋ ಸಂಸ್ಥೆಯು ಸದ್ದಿಲ್ಲದೆ ತನ್ನ ಪಲ್ಸರ್ ಎಎಸ್200 ಬೈಕ್ ಗೆ ಬೆಲೆ ಏರಿಕೆಗೊಳಿಸಿದೆ.
ಈ ಹಿಂದೆ ದೆಹಲಿ ಎಕ್ಸ್ ಶೋ ರೂಂ 91,550 ರು.ಗಳಿಗೆ ಬಿಡುಗಡೆಗೊಳಿಸಿದ್ದ ಪಲ್ಸರ್ ಎಎಸ್200 ದರವೀಗ 93,552 ರು.ಗಳಿಗೆ (ದೆಹಲಿ ಎಕ್ಸ್ ಶೋ ರೂಂ) ಏರಿಕೆಯಾಗಿದೆ. ಅಂದರೆ 2000 ರು.ಗಳಷ್ಟು ಬೆಲೆ ವರ್ಧನೆಯಾಗಿದೆ.

ನೂತನ ಪಲ್ಸರ್ ಎಎಸ್200 ಮಾದರಿಯು 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಡಿಟಿಎಸ್-ಐ ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದ್ದು, 18 ಎನ್ ಎಂ ತಿರುಗುಬಲದಲ್ಲಿ 23.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಪಲ್ಸರ್ ಆರ್‌ಎಸ್200 ಮಾದರಿಯಲ್ಲಿರುವುದಕ್ಕೆ ಸಮಾನವಾಗಿದೆ.
ನಿಮ್ಮ ಮಾಹಿತಿಗಾಗಿ ಹೊಸ ಪಲ್ಸರ್ ಎಎಸ್200 ಮತ್ತು ಎಎಸ್150 ಮಾದರಿಗಳು ಕಳೆದ ಎಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಹಾಗಿದ್ದರೂ ಎಎಸ್150 ಮಾದರಿಯ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.


Click it and Unblock the Notifications








