ಶ್ವೇತ ವರ್ಣದ ಚೆಲುವೆ ಬಜಾಜ್ ಪಲ್ಸರ್ ಆರ್‌ಎಸ್200

By Nagaraja

ಅತಿ ನೂತನ ಬಜಾಜ್ ಪಲ್ಸರ್ ಆರ್‌ಎಸ್200 ಬೈಕ್ ಅನ್ನು ನೀವು ಹಲವು ವರ್ಣಗಳಲ್ಲಿ ಆಸ್ವಾದಿಸಿರಬಹುದು. ಪ್ರಸ್ತುತ ಚೆಲುವೆಯೀಗ ಹೊಸ ಬಣ್ಣದ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಾಳೆ. ಅದುವೇ ಶ್ವೇತ ವರ್ಣ.

ಬಜಾಜ್ ಆಟೋ ಅಧಿಕೃತ ವೆಬ್ ಸೈಟ್ ನಲ್ಲಿ ಈ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಾಗಿದೆ. ಹಾಗಿದ್ದರೂ ಶೋ ರೂಂವೊಂದರಲ್ಲಿ ಅಂದವಾಗಿ ಕಂಗೊಳಿಸುತ್ತಿರುವ ಬಿಳಿ ಮೈ ಬಣ್ಣದ ಪಲ್ಸರ್ ಆರ್‌ಎಸ್200 ಚೆಲುವೆಯ ಮೈಮಾಟದ ಪ್ರದರ್ಶನವಾಗಿದೆ.

ಬಜಾಜ್ ಪಲ್ಸರ್ ಆರ್‌ಎಸ್200

ಇದಕ್ಕೂ ಮೊದಲು ಹಳದಿ ಹಾಗೂ ಕೆಂಪು ವರ್ಣದ ಪಲ್ಸರ್ ಆರ್‌ಎಸ್200 ಬಣ್ಣಗಳನ್ನು ಪರಿಚಯಿಸಲಾಗಿತ್ತು. ತದಾ ಬಳಿಕ ಕೆಲವೇ ಸಮಯಗಳಲ್ಲಿ 'ಡೆಮೊನ್ ಬ್ಲ್ಯಾಕ್' ವರ್ಣವನ್ನು ಪರಿಚಯಿಸಲಾಗಿತ್ತು.

ದೇಶದ ದ್ವಿಚಕ್ರ ಮಾರಾಟದಲ್ಲಿ ಬಣ್ಣವೂ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೊಂದೆಡೆ ಯುವ ಜನಾಂಗವು ಆಕ್ರಮಣಕಾರಿ ವಿನ್ಯಾಸಿತ ಪಲ್ಸರ್ ಬೈಕ್ ಹೆಚ್ಚು ನೆಚ್ಚಿಕೊಂಡಿರುವುದರಿಂದ ವಿವಿಧ ಆಕರ್ಷಕ ವರ್ಣಗಳನ್ನು ಪರಿಚಯಿಸಲಾಗುತ್ತಿದೆ.

ಈಗ ಆಗಮನವಾಗಿರುವ ಶ್ವೇತ ವರ್ಣವು ಸ್ಟ್ಯಾಂಡರ್ಡ್ ಹಾಗೂ ಎಬಿಎಸ್ ಮಾದರಿಗಳಲ್ಲೂ ಲಭ್ಯವಾಗಲಿದೆ. ಆದರೂ ಬೆಲೆಯಲ್ಲಿ ಯಾವುದೇ ರೀತಿಯ ಏರುಪೇರು ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಪಲ್ಸರ್ ಆರ್‌ಎಸ್200 ಸ್ಟ್ಯಾಂಡರ್ಡ್: 1.20 ಲಕ್ಷ ರು.
  • ಪಲ್ಸರ್ ಆರ್‌ಎಸ್200 ಎಬಿಎಸ್:1.32 ಲಕ್ಷ ರು.

ಎಂಜಿನ್ ತಾಂತ್ರಿಕತೆ

  • 199.5 ಸಿಸಿ
  • ಸಿಂಗಲ್ ಸಿಲಿಂಡರ್
  • ಲಿಕ್ವಿಡ್ ಕೂಲ್ಡ್
  • 24.16 ಅಶ್ವಶಕ್ತಿ,
  • 18.16 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಗೇರ್ ಬಾಕ್ಸ್

ಹೆಸರೇನು?
ಕಪ್ಪು ವರ್ಣಕ್ಕೆ ಡೆಮೊನ್ ಬ್ಲ್ಯಾಕ್ ಹೆಸರಿಸಿದ ರೀತಿಯಲ್ಲೇ ಹೊಸ ಶ್ವೇತ ವರ್ಣದ ಬೈಕ್ ಗೆ ಬಜಾಜ್ ಏನು ಹೆಸರಿಸಲಿದೆ ಎಂಬುದು ಇನ್ನೂ ಕುತೂಹಲವೆನಿಸಿದೆ. ಮೂಲಗಳ ಪ್ರಕಾರ ನೂತನ ಬಿಳಿ ವರ್ಣದ ಬೈಕ್ 'ಏಂಜಲಿಕ್ ವೈಟ್' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಅಷ್ಟಕ್ಕೂ ಹೊಸ ಪಲ್ಸರ್ ಆರ್‌ಎಸ್200 ವರ್ಣವು ನಿಮಗಿಷ್ಟವಾಯಿತೇ? ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.

ಶ್ವೇತ ವರ್ಣದ ಪಲ್ಸರ್ ಆರ್‌ಎಸ್200 - ವಿಡಿಯೋ ವೀಕ್ಷಿಸಿ


More from DriveSpark

Article Published On: Saturday, November 28, 2015, 14:54 [IST]
English summary
Bajaj Pulsar RS200 In White Paint Job Launching Soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+