ಟಿವಿಎಸ್ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು 300 ಸಿಸಿ ಬೈಕ್ ಭಾರತಕ್ಕೆ
ಬಹುನಿರೀಕ್ಷಿತ ಬಿಎಂಡಬ್ಲ್ಯು ಮೊಟೊರಾಡ್ ಜಿ 310 ಆರ್ ಬೈಕ್ ಭರ್ಜರಿ ಅನಾವರಣಗೊಂಡಿದೆ. ಸಂಸ್ಥೆಯ ಜರ್ಮನಿಯ ಘಟಕದಲ್ಲಿ ಅಧ್ಯಯನ ಹಾಗೂ ಅಭಿವೃದ್ಧಿಗೊಂಡಿರುವ ಹೊಸ ಬೈಕ್ ಮುಂದಿನ ದಿನಗಳಲ್ಲಿ ಭಾರತದಲ್ಲಿ ನಿರ್ಮಾಣವಾಗಲಿದೆ.
Also Read: ಬೈಕ್ ಜಾಕೆಟ್‌ನಲ್ಲೇ ಟರ್ನ್ ಸಿಗ್ನಲ್, ಬ್ರೇಕ್ ಲೈಟ್ಸ್ ಮುಂದಕ್ಕೆ ಓದಿ
ಭಾರತದ ಪ್ರಖ್ಯಾತ ಟಿವಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಬಿಎಂಡಬ್ಲ್ಯು ಈ 300 ಸಿಸಿ ಬೈಕ್ ಅನ್ನು ಚೆನ್ನೈನ ಟಿವಿಎಸ್ ಘಟಕದಲ್ಲಿ ಉತ್ಪಾದಿಸಲಿದೆ. ಈ ಮೂಲಕ ನೂತನ 'ಮೇಡ್ ಇನ್ ಇಂಡಿಯಾ' ವಾಹನ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಟಿವಿಎಸ್ ಜೊತೆ ಸೇರಿ ಕೆ03 ಕೋಟ್ ಹೆಸರಿನ ಹೊಸ ಬೈಕನ್ನು ಜರ್ಮನಿಯಲ್ಲಿ ಅಭಿವೃದ್ಧಿಪಡಿಸಿದೆ. ಸಬ್ 500 ಸಿಸಿ ರೋಡ್ ಸ್ಟರ್ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಜಿ310 ಆರ್ ದೇಶದಲ್ಲಿರುವ ಟಿವಿಎಸ್ ಘಟಕದಲ್ಲಿ ನಿರ್ಮಾಣವಾಗಲಿದೆ.

ಶಕ್ತಿಶಾಲಿ 1000 ಆರ್ ಬೈಕ್ ನಿಂದ ಸ್ಪೂರ್ತಿ ಪಡೆದು ಇದರ ವಿನ್ಯಾಸ ರಚಿಸಲಾಗಿದೆ. ಇದು ಪರಿಣಾಮಕಾರಿ 785 ಎಂಎಂ ಸೀಟು ಎತ್ತರವನ್ನು ಪಡೆದುಕೊಂಡಿದೆ.

313 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಜಿ 310 ಆರ್ ಬೈಕ್, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮುಂಭಾಗ ಮತ್ತು ಹಿಂಭಾಗದಲ್ಲಿ ಅನುಕ್ರಮವಾಗಿ 300 ಎಂಎಂ ಹಾಗೂ 240 ಎಂಎಂ ಡಿಸ್ಕ್ ಬ್ರೇಕ್ ಗಳಲ್ಲಿ ಆಗಮನವಾಗಲಿರುವ ಜಿ 310 ಆರ್, ಮುಂದುಗಡೆ ಅಪ್ ಸೈಡ್ ಡೌನ್ ಮತ್ತು ಹಿಂದುಗಡೆ ಅಲ್ಯೂಮಿನಿಯಂ ಸ್ವಿಂಗ್ ಆರ್ಮ್ ಸಸ್ಪೆನ್ಷನ್ ಗಳನ್ನು ಪಡೆಯಲಿದೆ.

ಮಗದೊಂದು ಗಮನಾರ್ಹ ಸಂಗತಿಯೆಂದರೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಅಂತೆಯೇ 158.5 ಕೆ.ಜಿ ತೂಕವನ್ನು ಹೊಂದಿದೆ.

ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ ಮಾದರಿಗೆ ಪ್ರತಿಸ್ಪರ್ಧಿಯಾಗಲಿರುವ ಬಿಎಂಡಬ್ಲ್ಯು ಮೊಟೊರಾಡ್ ಜಿ 310 ಆರ್, ಅಂದಾಜು ಎರಡು ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಅಲ್ಲದೆ ಜಿ 310 ಆರ್, ವರ್ಷಾಂತ್ಯದಲ್ಲಿ ಅಥವಾ ಮುಂಬರುವ ವರ್ಷಾರಂಭದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಜಿ 310 ಆರ್, ಬಿಎಂಡಬ್ಲ್ಯು ಮೊಟೊರಾಡ್ ನಿಂದ 500 ಸಿಸಿ ಒಳಗಡೆ ನಿರ್ಮಾಣವಾಗುತ್ತಿರುವ ಮೊದಲ ಬೈಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಬಿಎಂಡಬ್ಲ್ಯು ಮತ್ತು ಐಕಾನಿಕ್ ಸಂಸ್ಥೆಯ 13 ಸತ್ಯಗಳು


Click it and Unblock the Notifications








