ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್ ಬಗ್ಗೆ ತಿಳಿದುಕೊಳ್ಳಬೇಕಾದ 10 ಅಂಶಗಳು
ಬಿಎಂಡಬ್ಲ್ಯು ಜಿ310 ಜಿಎಸ್ ಅಡ್ವೆಂಚರ್ ಬೈಕ್ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿರುವಂತೆಯೇ ಬೈಕ್ ಪ್ರೇಮಿಗಳು ತಿಳಿದುಕೊಳ್ಳಬೇಕಾದ 10 ಕುತೂಹಲದಾಯಕ ಅಂಶಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.
ಬಹುನಿರೀಕ್ಷಿತ ಬಿಎಂಡಬ್ಲ್ಯು ಮೊಟೊರಾಡ್ ಜಿ310ಆರ್ ಮತ್ತು ಜಿ310ಜಿಎಸ್ ಬೈಕ್ ಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದರೊಂದಿಗೆ ವಾಹನ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ. ಈ ಸಂಬಂಧ ಜಿ310ಆರ್ ಬಗ್ಗೆ ನಾವು ಸಾಕಷ್ಟು ಭಾರಿ ಮಾಹಿತಿಯನ್ನು ಕೊಟ್ಟಿರುತ್ತೇವೆ. ಸದ್ಯ ಜಿ310ಆರ್ ತಳಹದಿಯಲ್ಲೇ ಬಿಡುಗಡೆಯಾಗಲಿರುವ ಜಿ310ಜಿಎಸ್ ಅಡ್ವೆಂಚರ್ ಬೈಕ್ ಬಗ್ಗೆ ಬೈಕ್ ಪ್ರೇಮಿಗಳು ತಿಳಿದುಕೊಳ್ಳಬೇಕಾದ 10 ಕುತೂಹಲದಾಯಕ ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಭಾರತೀಯ ಮೂಲದ ಸಂಸ್ಥೆಯಾಗಿರುವ ಟಿವಿಎಸ್ ಮೋಟಾರು ಕಂಪನಿಯ ಜೊತೆಗಾರಿಕೆಯಲ್ಲಿ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಅಭಿವೃದ್ಧಿಪಡಿಸಲಾಗುತ್ತಿದೆ.

ಚೆನ್ನೈನ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಮೋಟಾರು ಘಟಕದಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ನಿರ್ಮಾಣವಾಗಲಿದೆ. ಇಲ್ಲಿಂದಲೇ ವಿದೇಶಿ ಮಾರುಕಟ್ಟೆಗೂ ರವಾನೆಯಾಗಲಿದೆ.

ನೂತನ ಬಿಎಂಡಬ್ಲ್ಯು ಜಿ310 ಜಿಎಸ್ ಬೈಕ್ ಎರಡರಿಂದ ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವುದಾಗಿ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಬಿಎಂಡಬ್ಲ್ಯು ಶಕ್ತಿಶಾಲಿ ಆರ್ 1200 ಜಿಎಸ್ ಬೈಕ್ ನಿಂದ ಪ್ರೇರಣೆ ಪಡೆದುಕೊಂಡು ಜಿ310 ಜಿಎಸ್ ವಿನ್ಯಾಸವನ್ನು ರಚಿಸಲಾಗಿದೆ. ಇದು ಆಫ್ ರೋಡ್ ಸ್ನೇಹಿ ಚಕ್ರಗಳನ್ನು ಜೋಡಿಸಲಾಗಿದೆ.

313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಬಿಎಂಡಬ್ಲ್ಯು ಜಿ310ಆರ್, 28 ಎನ್ ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಜಿ310 ಜಿಎಸ್ ತಳಹದಿಯಲ್ಲೇ ನಿರ್ಮಾಣಗೊಂಡಿರುವ ಜಿ310 ಜಿಎಸ್, ಆಫ್ ರೋಡ್ ಸ್ನೇಹಿ ಎನಿಸಿಕೊಳ್ಳಲಿದೆ. ಅಲ್ಲದೆ ತನ್ನ ಸೋದರನಿಂದಲೂ ಸ್ವಲ್ಪ ಹೆಚ್ಚು ಉದ್ದಲತೆಯನ್ನು ಪಡೆಯಲಿದೆ.

ಲಗ್ಗೇಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಎಲ್ ಇಡಿ ಇಂಡಿಕೇಟರ್, ಹೀಟಡ್ ಗ್ರಿಪ್, ಟ್ಯಾಂಕ್ ಬ್ಯಾಗ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನೇವಿಗೇಟರ್ ಮತ್ತು ಆಫ್ ರೋಡ್ ಚಾಲನೆಗಳನ್ನು ಗಿಟ್ಟಿಸಿಕೊಳ್ಳಲಿದೆ.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ.

ಅಂದ ಹಾಗೆ ನೂತನ ಜಿ310 ಜಿಎಸ್ ಬೈಕ್ 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

ಅಷ್ಟಕ್ಕೂ ಬಿಎಂಡಬ್ಲ್ಯು ಜಿ310ಆರ್ ಜಿಎಸ್ ಬೈಕ್ 2017ನೇ ಸಾಲಿನ ವರ್ಷಾಂತ್ಯದಲ್ಲಷ್ಟೇ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು 2017 ಮೊದಲಾರ್ಧದಲ್ಲಿ ಜಿ310ಆರ್ ಪ್ರವೇಶವಾಗಲಿದೆ.


Click it and Unblock the Notifications








