ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಜರ್ಮನಿಯ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಮೊಟೊರಾಡ್, 2018ಕ್ಕೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಜಿ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿದೆ.

By Praveen

ಜರ್ಮನಿಯ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾದ ಬಿಎಂಡಬ್ಲ್ಯು ಮೊಟೊರಾಡ್, 2018ಕ್ಕೆ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಜಿ 310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಈ ಹಿಂದೆ 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಬಿಎಂಡಬ್ಲ್ಯು ನೂತನ ಎಂಟ್ರಿ ಲೆವೆಲ್ ಬೈಕ್‌ಗಳು ಇದೀಗ ಬಿಡುಗೊಳ್ಳಲು ಸಜ್ಜುಗೊಳ್ಳುತ್ತಿದ್ದು, ಖರೀದಿಗಾಗಿ ಬೈಕ್ ಪ್ರೇಮಿಗಳು ಅತ್ಯಂತ ಕುತೂಹಲದಿಂದ ಕಾದು ಕುಳಿತಿದ್ದಾರೆ.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ದೇಶಿಯ ಮಾರುಕಟ್ಟೆಯ ಜನಪ್ರಿಯ ಸಂಸ್ಥೆಯಾದ ಟಿವಿಎಸ್ ಮೋಟಾರ್ ಸಂಸ್ಥೆ ಜೊತೆ ಜಂಟಿ ಸಹಭಾಗಿತ್ವದಲ್ಲಿ ಈ ಎರಡೂ ಬೈಕ್‌ಗಳು ಭಾರತದಲ್ಲೇ ತಯಾರಾಗಿದ್ದು, ಸ್ಪರ್ಧಾತ್ಮಕ ಬೆಲೆಗೆ ಲಭ್ಯವಾಗುವ ನಿರೀಕ್ಷೆಯಿದೆ.

Recommended Video

Maruti Baleno - DriveSpark
ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಜೊತೆಗೆ ಇಲ್ಲಿಂದಲೇ ಅಂತರಾಷ್ಟ್ರೀಯ ಮಾರುಕಟ್ಟೆಗೂ ರಫ್ತು ಕೂಡಾ ಆಗಲಿದ್ದು, ಇದಕ್ಕಾಗಿ ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಟಿವಿಎಸ್ ಸಂಸ್ಥೆಯು ಜಂಟಿಯಾಗಿ ಬೃಹತ್ ಯೋಜನೆಯನ್ನು ರೂಪಿಸುತ್ತಿವೆ.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಎಂಜಿನ್ ಸಾಮರ್ಥ್ಯ

313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ನೂತನ ಬಿಎಂಡಬ್ಲ್ಯು ಜಿ 310 ಆರ್, 34-ಬಿಎಚ್‌ಪಿ ಹಾಗೂ 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ ಆರು ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿವೆ.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಈ ಮೂಲಕ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ 30.1 ಕಿ.ಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದಿರುವ ಬಿಎಂಡಬ್ಲ್ಯು ಹೊಸ ಬೈಕ್‌ಗಳು ಗರಿಷ್ಠ ಮಟ್ಟದಲ್ಲಿ ಪ್ರತಿ ಗಂಟೆಗೆ 160 ಕಿಮಿ ವೇಗದಲ್ಲಿ ಚಲಿಸಬಲ್ಲವು.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ಇದಲ್ಲದೇ ಯುಎಸ್‌ಡಿ ಫೋರ್ಕ್‌ಗಳು, ಹಿಂಬದಿ ಮಾನೋಶಾಕ್‌ ಮತ್ತು ಅಡ್ಜೆಸ್ಟೆಬಲ್‌ ಪ್ರಿಲೋಡ್‌, ಅಗಲವಾದ ಟ್ಯೂಬ್‌ಲೆಸ್‌ ಚಕ್ರ, ಮುಂದೆ ಮತ್ತು ಹಿಂದೆ ಡಿಸ್ಕ್‌ ಬ್ರೇಕ್‌ ಮತ್ತು ಎಬಿಎಸ್‌ ಮೊದಲಾದ ಹಲವಾರು ಫೀಚರ್‌ಗಳನ್ನು ಹೊಂದಿದ್ದು,ಜಿ 310 ಜಿಎಸ್‌ ದೂರ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ.

ಭಾರತದಲ್ಲಿ ಸದ್ದು ಮಾಡಲಿವೆ ಬಿಎಂಡಬ್ಲ್ಯು ವಿನೂತನ ಬೈಕ್‌ಗಳು..!!

ನೂತನ ಬಿಎಂಡಬ್ಲ್ಯು ಜಿ 310 ಆರ್ ಭಾರತದಲ್ಲಿ ಕೆಟಿಎಂ 390 ಡ್ಯೂಕ್ ಬೈಕ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ನಿಮ್ಮ ಮಾಹಿತಿಗಾಗಿ ಟಿವಿಎಸ್ ಕೂಡಾ ಬಿಎಂಡಬ್ಲ್ಯುಗೆ ಸಮಾನವಾಗಿ ಅಕುಲಾ ಎಂಟ್ರಿ ಲೆವೆಲ್ ಬೈಕ್ ಸಹ ಬಿಡುಗಡೆ ಮಾಡಲಿದೆ.

Most Read Articles

Kannada
English summary
Read in Kannada about India launch of BMW G 310 R and G 310 GS confirmed for second-half of 2018
Story first published: Saturday, October 14, 2017, 19:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X