ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಬಹುನಿರೀಕ್ಷಿತ ಬಿಎಂಡಬ್ಲ್ಯು ಜಿ310ಆರ್ ನಿರ್ವಹಣಾ ಮತ್ತು ಜಿ310ಜಿಸ್ ಅಡ್ವೆಂಚರ್ ಬೈಕ್ ಗಳು 2017ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ.

By Nagaraja

ಭಾರತಕ್ಕೆ ಪ್ರವೇಶಕ್ಕೆ ಸಂಬಂಧಿಸಿದಂತೆ ಎದ್ದಿರುವ ಎಲ್ಲ ತರಹದ ಊಹಾಪೋಹಾಗಳಿಗೆ ತೆರೆ ಎಳೆದಿರುವ ಜರ್ಮನಿಯ ಪ್ರತಿಷ್ಠಿತ ಬಿಎಂಡಬ್ಲ್ಯು ಮೊಟೊರಾಡ್ ಸಂಸ್ಥೆಯು ಬಹುನಿರೀಕ್ಷಿತ ಜಿ310ಆರ್ ಮತ್ತು ಜಿ310ಜಿಎಸ್ ಬೈಕ್ ಗಳನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಈ ಸಂಬಂಧ ಟ್ವೀಟ್ ಮಾಡಿರುವ ಜರ್ಮನಿಯ ಸಂಸ್ಥೆಯು 2017ನೇ ಮೊದಲಾರ್ಧದಲ್ಲಿ ಬಿಎಂಡಬ್ಲ್ಯು ಜಿ310ಆರ್ ಬೈಕ್ ಮತ್ತು ದ್ವಿತಿಯಾರ್ಧದಲ್ಲಿ ಜಿ310ಜಿಎಸ್ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಈ ಎರಡು ಬೈಕ್ ಗಳು ದೇಶದಲ್ಲಿ ಸ್ಥಿತಗೊಂಡಿರುವ ಬಿಎಂಡಬ್ಲ್ಯು ಮೊಟೊರಾಡ್ ಮತ್ತು ಬಿಎಂಡಬ್ಲ್ಯು ಕಾರು ಡೀಲರ್ ಶಿಪ್ ಗಳ ಮುಖಾಂತರ ಮಾರಾಟಕ್ಕೆ ಲಭ್ಯವಾಗಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಟಿವಿಎಸ್ ಸಹಯೋಗದಲ್ಲಿ ಬಿಎಂಡಬ್ಲ್ಯು ಜಿ310ಆರ್ ಮತ್ತು ಜಿ310ಜಿಎಸ್ ಬೈಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲದೆ ಹೊಸೂರುನಲ್ಲಿ ಸ್ಥಿತಗೊಂಡಿರುವ ಟಿವಿಎಸ್ ಘಟಕದಲ್ಲಿ ನಿರ್ಮಾಣವಾಗಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಇನ್ನೊಂದೆಡೆ ಬಿಎಂಡಬ್ಲ್ಯು ಮೊಟೊರಾಡ್ ಸಹಯೋಗದಲ್ಲಿ ಟಿವಿಎಸ್ ಸಹ ಅಕುಲಾ 310 ಬೈಕ್ ಅಭಿವೃದ್ಧಿಪಡಿಸಿದ್ದು, ಇದು ಕೂಡಾ ಮುಂದಿನ ವರ್ಷದಲ್ಲೇ ಬಿಡುಗಡೆ ಭಾಗ್ಯ ಕಾಣಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಬಿಎಂಡಬ್ಲ್ಯು ಜಿ310ಆರ್ ಬೈಕ್‌ನ ಟಿವಿಎಸ್ ಪ್ರತಿರೂಪವಾಗಿರುವ ಅಕುಲಾ ಸಂಪೂರ್ಣ ಫೇರ್ಡ್ ವರ್ಷನ್ ಆವೃತ್ತಿಯು, 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದು ದೇಶದಲ್ಲಿ ಜನಪ್ರಿಯ 'ಅಪಾಚಿ' ಎಂಬ ಹೆಸರಿನಲ್ಲಿ ಮಾರಾಟವಾಗುವುದು ಬಹುತೇಕ ಖಚಿತವಾಗಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಭಾರತದಲ್ಲಿ ಬಿಎಂಡಬ್ಲ್ಯು ಜಿ310ಆರ್ ಅಂದಾಜು ಎರಡು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಈ ಎಲ್ಲ ಮೂರು ಬೈಕ್ ಗಳು 313 ಸಿಸಿ ವಾಟರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಯುರೋ4 ಎಂಜಿನ್ ಪಡೆಯಲಿದೆ. ಈ ಪೈಕಿ ಬಿಎಂಡಬ್ಲ್ಯು ಜಿ310ಆರ್ ಮತ್ತು ಜಿ310ಜಿಎಸ್ ಬೈಕ್ ಗಳು 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

2016 ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಎಂಟ್ರಿ ಕೊಡುವುದಾಗಿ ಬಿಎಂಡಬ್ಲ್ಯು ಮೊಟೊರಾಡ್ ಘೋಷಿಸಿತ್ತು. ಜಿ310ಆರ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಅತಿ ಕಡಿಮೆ ಸಿಸಿ ನಿರ್ವಹಣಾ ಬೈಕ್ ಆಗಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಇನ್ನುಳಿದಂತೆ ಅಪ್ ಸೈಡ್ ಡೌನ್ ಟೆಲಿಸ್ಕಾಪಿಕ್ ಫಾರ್ಕ್, ರಿಯರ್ ಮೊನೊ ಶಾಕ್ಸ್ ಸಿಂಗಲ್ ಡಿಸ್ಕ್ ಬ್ರೇಕ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹಾಗೂ ಮಿಚಿಲಿನ್ ಚಕ್ರಗಳನ್ನು ಗಿಟ್ಟಿಸಿಕೊಳ್ಳಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಭಾರತದಲ್ಲಿ ಪ್ರಮುಖವಾಗಿಯೂ ಕೆಟಿಎಂ 390 ಡ್ಯೂಕ್, ಮಹೀಂದ್ರ ಮೊಜೊ, ಕವಾಸಕಿ ಝಡ್250 ಮುಂತಾದ ಬೈಕ್ ಗಳಿಗೆ ಬಿಎಂಡಬ್ಲ್ಯು ನೂತನ ಬೈಕ್ ಪ್ರತಿಸ್ಪರ್ಧಿಯಾಗಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಇನ್ನೊಂದೆಡೆ ಜಿ310ಜಿಎಸ್ ಅಡ್ವೆಂಚರ್ ಬೈಕ್ ನೇರವಾಗಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಸವಾಲನ್ನು ಎದುರಿಸಲಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ನೂತನ ಜಿ310 ಜಿಎಸ್ ಬೈಕ್ ಬಹುತೇಕ ಬಿಡಿಭಾಗಗಳನ್ನು ಜಿ310ಆರ್ ಜೊತೆ ಹಂಚಿಕೊಳ್ಳಲಿದೆ. ಇದು ಬಿಎಂಡಬ್ಲ್ಯುಮತ್ತು ಟಿವಿಎಸ್ ಅಭಿವೃದ್ಧಿಪಡಿಸುತ್ತಿರುವ ಮೂರನೇ ಮಾಡೆಲ್ ಆಗಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಸಾಹಸ ಬೈಕ್ ಗೆ ಅನುಗುಣವಾಗಿ ಮುಂಭಾಗದಲ್ಲಿ ಲಾಂಗ್ ಟ್ರಾವೆಲ್ ಯುಎಸ್ ಡಿ ಫಾರ್ಕ್ , ಮೊನೊಶಾಕ್ ಸಸ್ಷೆನ್ಷನ್ ಮತ್ತು ಆಫ್ ರೋಡ್ ಗೆ ಸೂಕ್ತವಾಗುವ ರೀತಿಯಲ್ಲಿ 17 ಇಂಚುಗಳ ಚಕ್ರಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಮುಂದಿನ ವರ್ಷ ಭಾರತಕ್ಕೆ ಪ್ರವೇಶಿಸಲಿರುವ ಬಿಎಂಡಬ್ಲ್ಯು ನಿರ್ವಹಣಾ ಬೈಕ್ ಗಳು!

ಭಾರತೀಯ ಮಾರುಕಟ್ಟೆಯಲ್ಲಿ ಬೆಲೆ ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಈ ನಿಟ್ಟಿನಲ್ಲಿ ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

Most Read Articles

Kannada
English summary
BMW Motorrad Motorcycle India Launch Confirmed End Of 2017
Story first published: Thursday, November 17, 2016, 9:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X