2015 ಡಕಾರ್ ರಾಲಿ; ಫಿನಿಶಿಂಗ್ ಪಾಯಿಂಟ್ ಸನಿಹದಲ್ಲಿ ಸಂತೋಷ್

By Nagaraja

ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಹೆಸರಾಂತ 2015 ಡಕಾರ್ ರಾಲಿಯಲ್ಲಿ ಪರಿಣಾಮಕಾರಿ ನಿರ್ವಹಣೆ ಮುಂದುವರಿಸಿರುವ ಭಾರತದ ಸಿಎಸ್ ಸಂತೋಷ್, 12ನೇ ಸುತ್ತಿನ ಅಂತ್ಯದ ವೇಳೆಗೆ ಒಟ್ಟಾರೆಯಾಗಿ 36ನೇ ಸ್ಥಾನ ಕಾಪಾಡಿಕೊಂಡಿದ್ದಾರೆ.

ಇನ್ನು ಒಂದು ಹಂತದ ರೇಸ್ ಮಾತ್ರ ಬಾಕಿ ಉಳಿದಿರುವಂತೆಯೇ ತಮ್ಮ ಅಮೋಘ ಸಾಧನೆಯೊಂದಿಗೆ ಅಗ್ರ 30ರ ಪಟ್ಟಿಯೊಳಗೆ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಂತೋಷ್ ಯಶಸ್ವಿಯಾಗುವರೇ ಎಂಬುದು ಬಹಳ ಕುತೂಹಲವೆನಿಸಿದೆ.

cs santosh

11ನೇ ಸುತ್ತಿನಲ್ಲಿ 30ನೇ ಸ್ಥಾನ ಪಡೆದುಕೊಂಡಿದ್ದು, ಇದುವರೆಗಿನ ಎಲ್ಲ ಹಂತವನ್ನು ಪರಿಗಣಿಸಿದಾಗ ತಮ್ಮ ಸರ್ವಶ್ರೇಷ್ಠ ನೀಡುವಲ್ಲಿ ಯಶಸ್ವಿಯಾಗಿದ್ದರು.

ಅತ್ಯಂತ ಅಪಾಯಕಾರಿ ಡಕಾರ್‌ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿರುವ ಪ್ರಪ್ರಥಮ ಭಾರತೀಯನಾಗಿರುವ ಸಂತೋಷ್, ಕೆಟಿಎಂ 450 ರಾಲಿ ಬೈಕ್‌ನಲ್ಲಿ ಸ್ಪರ್ಧೆಗಿಳಿದಿದ್ದರಲ್ಲದೆ ಟಾಪ್ 20ನ್ನು ಗುರಿಯಿರಿಸಿಕೊಂಡಿದ್ದರು.

ಒಟ್ಟಿನಲ್ಲಿ ರಾಂಕಿಂಗ್‌ಗಿಂತಲೂ ಮಿಗಿಲಾಗಿ ಡಕಾರ್ ರಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಅದು ಸಂತೋಷ್ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ಸಂಗತಿಯಾಗಲಿದೆ. ಅಲ್ಲದೆ ಅದು ಭವಿಷ್ಯದಲ್ಲಿ ಇನ್ನಷ್ಟು ಪ್ರತಿಭಾವಂತ ಯುವ ರೇಸರುಗಳನ್ನು ದೇಶದಲ್ಲಿ ಹುಟ್ಟುಹಾಕುವಲ್ಲಿ ನೆರವಾಗಲಿದೆ.

2015 ಡಕಾರ್ ರಾಲಿಯಲ್ಲಿ ಸಂತೋಷ್ ಸಾಧನೆ:

1ನೇ ಹಂತ: 85
ಒಟ್ಟಾರೆ ರಾಂಕಿಂಗ್: 85

2ನೇ ಹಂತ: 49
ಒಟ್ಟಾರೆ ರಾಂಕಿಂಗ್: 49

3ನೇ ಹಂತ: 68
ಒಟ್ಟಾರೆ ರಾಂಕಿಂಗ್: 53

4ನೇ ಹಂತ: 58
ಒಟ್ಟಾರೆ ರಾಂಕಿಂಗ್: 50

5ನೇ ಹಂತ: 55
ಒಟ್ಟಾರೆ ರಾಂಕಿಂಗ್: 51

6ನೇ ಹಂತ: 64
ಒಟ್ಟಾರೆ ರಾಂಕಿಂಗ್: 52

7ನೇ ಹಂತ: 65
ಒಟ್ಟಾರೆ ರಾಂಕಿಂಗ್: 49

8ನೇ ಹಂತ: 32
ಒಟ್ಟಾರೆ ರಾಂಕಿಂಗ್: 42

9ನೇ ಹಂತ: 55
ಒಟ್ಟಾರೆ ರಾಂಕಿಂಗ್: 42

10ನೇ ಹಂತ: 36
ಒಟ್ಟಾರೆ ರಾಂಕಿಂಗ್: 38

11ನೇ ಹಂತ: 32
ಒಟ್ಟಾರೆ ರಾಂಕಿಂಗ್: 36

12ನೇ ಹಂತ: 30
ಒಟ್ಟಾರೆ ರಾಂಕಿಂಗ್: 36

More from DriveSpark

Article Published On: Saturday, January 17, 2015, 14:15 [IST]
English summary
CS Santosh time and again proves why he the best in the country. Despite many riders giving up and a few forced to retire, CS Santosh continues to push hard. After Stage 12, CS Santosh is in the 36th position in the overall ranking for the motorcycle class. He finished the stage in the 30th position.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+