ಡಕಾರ್ 2015; 11ನೇ ಹಂತದ ಬಳಿಕ ಸಂತೋಷ್ 36ಕ್ಕೆ ನೆಗೆತ

By Nagaraja

ಪರಿಣಾಮಕಾರಿ ನಿರ್ವಹಣೆ ಮುಂದುವರಿಸಿರುವ ಭಾರತದ ಸಿಎಸ್ ಸಂತೋಷ್, ದಕ್ಷಿಣ ಅಮೆರಿಕದಲ್ಲಿ ಸಾಗುತ್ತಿರುವ 2015 ಡಕಾರ್ ರಾಲಿಯ 11ನೇ ಸುತ್ತಿನ ಅಂತ್ಯದ ವೇಳೆ 36ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ.

ಹವಮಾನ ವೈಪರೀತ್ಯದ ನಡುವೆಯೂ ಅಮೋಘ ಪ್ರದರ್ಶನ ನೀಡಿರುವ ಸಂತೋಷ್ ಕೆಟಿಎಂ 450 ರಾಲಿ ಬೈಕ್‌ನಲ್ಲಿ ತಮ್ಮ ಗುರಿಯತ್ತ ಪಯಣ ಮುಂದುವರಿಸಿದ್ದಾರೆ.

cs santosh

11ನೇ ಸುತ್ತಿನ ಮುಕ್ತಾಯಕ್ಕೆ 32ನೇ ರಾಂಕಿಂಗ್ ಕಾಪಾಡಿಕೊಂಡಿರುವ ಸಂತೋಷ್ ಒಟ್ಟಾರೆಯಾಗಿ 36ನೇ ಸ್ಥಾನದಲ್ಲಿದ್ದಾರೆ. ಇನ್ನೆರಡು ಸುತ್ತುಗಳು ಮಾತ್ರ ಬಾಕಿ ಉಳಿದಿರುವಂತೆಯೇ ಸಂತೋಷ್ ಅಗ್ರ 30ರ ಪಟ್ಟಿಯೊಳಗೆ ಲಗ್ಗೆಯಿಟ್ಟಲ್ಲಿ ಮಹತ್ತರ ಸಾಧನೆಯಾಗಲಿದೆ.

ನಿಮ್ಮ ಮಾಹಿತಿಗಾಗಿ, ಮೋಟಾರುಸೈಕಲ್ ವಿಭಾಗದ ರೇಸ್ ಆರಂಭದಲ್ಲಿ 169ರಷ್ಟು ಸ್ಪರ್ಧಿಗಳಿದ್ದ ಡಕಾರ್ ರಾಲಿಯು 11ನೇ ಹಂತಕ್ಕೆ ತಲುಪುವಾಗ ಸ್ಪರ್ಧಿಗಳ ಸಂಖ್ಯೆ 79ಕ್ಕೆ ಇಳಿಕೆಯಾಗಿದೆ. ಇದರಿಂದಲೇ ಡಕಾರ್ ರಾಲಿ 2015 ಎಷ್ಟೊಂದು ಕಠಿಣ ಸವಾಲಿನಿಂದ ಕೂಡಿರುತ್ತದೆ ಎಂಬುದು ಸಾಬೀತಾಗಿದ್ದು, ಸ್ಪರ್ಧಿಗಳಿಗೆ ತಮ್ಮ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

cs santosh

2015 ಡಕಾರ್ ರಾಲಿ - ಸಂತೋಷ್ ನಿರ್ವಹಣೆ

1ನೇ ಹಂತ: 85
ಒಟ್ಟಾರೆ ರಾಂಕಿಂಗ್: 85

2ನೇ ಹಂತ: 49
ಒಟ್ಟಾರೆ ರಾಂಕಿಂಗ್: 49

3ನೇ ಹಂತ: 68
ಒಟ್ಟಾರೆ ರಾಂಕಿಂಗ್: 53

4ನೇ ಹಂತ: 58
ಒಟ್ಟಾರೆ ರಾಂಕಿಂಗ್: 50

5ನೇ ಹಂತ: 55
ಒಟ್ಟಾರೆ ರಾಂಕಿಂಗ್: 51

6ನೇ ಹಂತ: 64
ಒಟ್ಟಾರೆ ರಾಂಕಿಂಗ್: 52

7ನೇ ಹಂತ: 65
ಒಟ್ಟಾರೆ ರಾಂಕಿಂಗ್: 49

8ನೇ ಹಂತ: 32
ಒಟ್ಟಾರೆ ರಾಂಕಿಂಗ್: 42

9ನೇ ಹಂತ: 55
ಒಟ್ಟಾರೆ ರಾಂಕಿಂಗ್: 42

10ನೇ ಹಂತ: 36
ಒಟ್ಟಾರೆ ರಾಂಕಿಂಗ್: 38

11ನೇ ಹಂತ: 32
ಒಟ್ಟಾರೆ ರಾಂಕಿಂಗ್: 36

Article Published On: Friday, January 16, 2015, 15:58 [IST]
English summary
Dakar Rally 2015: Santosh ranked 36th after Stage 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+