ಮಾ.19ರಂದು ಬೆನೆಲ್ಲಿ ಬೈಕ್‌ಗಳ ಬಿಡುಗಡೆ; ಬುಕ್ಕಿಂಗ್ ಆರಂಭ

By Nagaraja

ಡಿಎಸ್‌ಕೆ ಸಹಯೋಗದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಿರುತ್ತಿರುವ ಬಹುನಿರೀಕ್ಷಿತ ಬೆನೆಲ್ಲಿ ಬೈಕ್‌ಗಳು ಇದೇ ಮುಂಬರುವ 2015 ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆನೆಲ್ಲಿ ದುಬಾರಿ ಬೈಕ್‌ಗಳನ್ನು ದೇಶಕ್ಕೆ ಡಿಎಸ್‌ಕೆ ತರುತ್ತಿದೆ. ಇದರಂತೆ ಮಾರ್ಚ್ 10ರಿಂದಲೇ ದೇಶದ್ಯಾಂತ ಸ್ಥಿತಗೊಂಡಿರುವ ಡಿಎಸ್‌ಕೆ-ಬೆನೆಲ್ಲಿ ಶೋ ರೂಂಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಳಿಸಲಾಗಿದೆ.

dsk benelli tnt 600

ಭಾರತದಲ್ಲಿ ಬೆಂಗಳೂರು ಸೇರಿದಂತೆ ಅಹಮಾದಾಬಾದ್, ಚೆನ್ನೈ, ದೆಹಲಿ, ಗೋವಾ, ಹೈದಾರಾಬಾದ್, ಮುಂಬೈ ಹಾಗೂ ಪುಣೆ ನಗರಗಳಲ್ಲಿ ಡಿಎಸ್‌ಕೆ-ಬೆನೆಲ್ಲಿ ಶೋ ರೂಂಗಳಿವೆ.

2015 ಇಂಡಿಯಾ ಬೈಕ್ ವೀಕ್ ಸೇರಿದಂತೆ ಈಗಗಾಲೇ ದೇಶದಲ್ಲಿ ಹಲವು ಸಂದರ್ಭಗಳಲ್ಲಿ ಅನಾವರಣಗೊಂಡಿರುವ ಬೆನೆಲ್ಲಿ ಬೈಕ್‌ಗಳು ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ.

ಮೊದಲ ಹಂತವಾಗಿ 2015 ಮಾರ್ಚ್ 19ರಂದು ಡಿಎಸ್‌ಕೆ-ಬೆನೆಲ್ಲಿ ಐದು ಹೊಸ ಮಾದರಿಗಳನ್ನು ಪರಿಚಯಿಸಲಿದೆ. ಬಳಿಕ ವರ್ಷಾಂತ್ಯದಲ್ಲಿ ಮತ್ತೆ ಮೂರು ಮಾದರಿಗಳನ್ನು ಬಿಡುಗಡೆ ಮಾಡಲಿದೆ. ಈ ನಡುವೆ ಮಾರಾಟ ಜಾಲ ವಿಸ್ತರಣೆಗೆ ಗಮನ ಕೇಂದ್ರಿಕರಿಸಲಿದೆ.

dsk benelli tnt 899

ಡಿಎಸ್‌ಕೆ-ಬೆನೆಲ್ಲಿಯಿಂದ ಬಿಡುಗಡೆಯಾಗಲಿರುವ ಬೈಕ್‌ಗಳು ಇಂತಿದೆ:
  • ಟಿಎನ್‌ಟಿ 302,
  • ಟಿಎನ್‌ಟಿ 600ಐ,
  • ಟಿಎನ್‌ಟಿ 600 ಜಿಟಿ
  • ಟಿಎನ್‌ಟಿ 899,
  • ಟಿಎನ್‌ಟಿ 1130 ಆರ್,

ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿರುವ ಮಾದರಿಗಳು

  • ಟಿಎನ್‌ಟಿ 25,
  • ಟಿಎನ್‌ಟಿ ಟ್ರೆಕ್ ಅಮಜೋನ್,
  • ಕೀವೇ ಬ್ಲ್ಯಾಕ್‌ಸ್ಟರ್.

ಬುಕ್ಕಿಂಗ್ ಮಾಡಲು ಕರೆ ಮಾಡಿ:

ಅಹಮಾದಾಬಾದ್: +91 800070090.
ಬೆಂಗಳೂರು: +91 9591073333.
ಚೆನ್ನೈ: +91 9176626655.
ದೆಹಲಿ: +91 8588847598.
ಗೋವಾ: +91 9422443287.
ಹೈದಾರಾಬಾದ್: +91 9885004004.
ಕೋಲ್ಕತ್ತಾ: +91 9831639393.
ಮುಂಬೈ: +91 8082059999.
ಪುಣೆ: +91 7030955220.

Article Published On: Thursday, March 12, 2015, 12:16 [IST]
English summary
Italian two-wheeler manufacturer, Benelli will be launching its motorcycles in India on the 19th of March, 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+