ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

Written By:

ಇಟಲಿ ಮೂಲದ ದೈತ್ಯ ದ್ವಿಚಕ್ರ ವಾಹನ ಸಂಸ್ಥೆ ಬೆನೆಲ್ಲಿ ಮಗದೊಂದು ಸಂಪೂರ್ಣ ಫೇರ್ಡ್ ಸೂಪರ್ ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಭಾರತದಲ್ಲಿ ಡಿಎಸ್ ಕೆ ಸಹಯೋಗದಿಂದ ಮಾರಾಟ ವಿಸ್ತರಿಸಿಕೊಂಡಿರುವ ಬೆನೆಲ್ಲಿ, ವರ್ಷಾಂತ್ಯದ ವೇಳೆಯಾಗುವಾಗ ಅತಿ ನೂತನ 302ಆರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

To Follow DriveSpark On Facebook, Click The Like Button
ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಇಟಲಿಯ ಐಕಾನಿಕ್ ಸಂಸ್ಥೆಯು ನೂತನ 302ಆರ್ ಸೂಪರ್ ಬೈಕ್ ಬಿಡುಗಡೆಯನ್ನು ಖಚಿತಗೊಳಿಸಿದ್ದು, ಭಾರತದಲ್ಲಿ 3.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಇದಕ್ಕೂ ಮೊದಲು ಹಬ್ಬದ ಸಂಭ್ರಮದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆ ಮಾಡಲು ಯೋಜನೆಯಿರಿಸಿಕೊಳ್ಳಲಾಗಿತ್ತು. ಆದರೆ ಬಳಿಕ ಎಬಿಎಸ್ ಆವೃತ್ತಿಯನ್ನು ಬಿಡುಗಡೆ ಮಾಡುವ ಗುರಿಯೊಂದಿಗೆ ವರ್ಷಾಂತ್ಯಕ್ಕೆ ವಿಸ್ತರಿಸಲಾಗಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಸದ್ಯ ಬೆನೆಲ್ಲಿ ನೂತನ ಬೈಕ್ ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಟೆಸ್ಟಿಂಗ್ ಹಂತದಲ್ಲಿದ್ದು, ಎಲ್ಲವೂ ಉದ್ದೇಶಿತ ಯೋಜನೆಯಂತೆ ನಡೆಯುತ್ತಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಬೆನೆಲ್ಲಿ 302ಆರ್ ಒಂದು ಸಂಪೂರ್ಣ ಫೇರ್ಡ್ ಬೈಕಾಗಿದ್ದು, ಇಟಲಿಯ ದೈತ್ಯ ಸಂಸ್ಥೆಯು ಭಾರತಕ್ಕೆ ನೀಡಲಿರುವ ಕೊಡುಗೆಯಾಗಲಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಇದಕ್ಕೂ ಮೊದಲು 2015 ಮಿಲಾನ್ ಮೋಟಾರ್ ಶೋ ಮತ್ತು 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಇದರಲ್ಲಿರುವ 300 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಮೋಟಾರು ಎಂಜಿನ್ 27 ಎನ್ ಎಂ ತಿರುಗುಬಲದಲ್ಲಿ 36 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಕ್ರೀಡಾತ್ಮಕ ಮತ್ತು ಪ್ರಭಾವಶಾಲಿ ವಿನ್ಯಾಸದೊಂದಿಗೆ ಕೂಡಿದ ಬೆನೆಲ್ಲಿ 302ಆರ್, ಗಂಟೆಗೆ ಗರಿಷ್ಠ 170 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಹಗುರ ಭಾರದ ಟ್ರೆಲ್ಲಿಸ್ ಫ್ರೇಮ್ ನಿಂದಾಗಿ ಅತ್ಯುತ್ತಮ ಚಲನಶೀಲತೆ ಕಾಪಾಡಿಕೊಳ್ಳಲಿದೆ. ಹಾಗೆಯೇ ಯುಎಸ್ ಡಿ ಫ್ರಂಟ್ ಫಾರ್ಕ್ ಮತ್ತು ಮೊನೊಶಾಕ್ ರಿಯರ್ ಶಾಕ್ ಗಳು ಸಸ್ಪೆನ್ಷನ್ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ.

ಎಬಿಎಸ್, ಫುಲ್ ಫೇರ್ಡ್ ಬೆನೆಲ್ಲಿ ಸೂಪರ್ ಬೈಕ್ ಭಾರತಕ್ಕೆ ಎಂಟ್ರಿ ಕೊಡಲು ರೆಡಿ

ಡಿಸ್ಕ್ ಬ್ರೇಕ್ ಸೌಲಭ್ಯದೊಂದಿಗೂ ಕೂಡಿರುವ ನೂತನ ಬೆನೆಲ್ಲಿ 302ಆರ್ ಭಾರತದಲ್ಲಿ ಯಮಹಾ ಆರ್3, ಕವಾಸಕಿ ನಿಂಜಾ 300 ಮತ್ತು ಕೆಟಿಎಂ ಆರ್ ಸಿ 390 ಮಾದರಿಗಳಿಗೆ ಪ್ರತಿಸ್ಪರ್ಧೆಯಾಗಲಿದೆ.

English summary
DSK Benelli Launching Its First Fully Faired Model In India By December
Story first published: Saturday, October 15, 2016, 12:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark