ಡಿಎಸ್‌ಕೆ ಬೆನೆಲ್ಲಿ 5 ಬೈಕ್ಸ್ ಬಿಡುಗಡೆ; ಪ್ರಾರಂಭಿಕ ಬೆಲೆ 2.83 ಲಕ್ಷ ರು.

By Nagaraja

ಇಟಲಿಯ ಮಗದೊಂದು ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬೆನೆಲ್ಲಿ ಸಂಸ್ಥೆಯು ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಡಿಎಸ್‌ಕೆ ಮುಖಾಂತರ ಭಾರತ ಪ್ರವೇಶ ಪಡೆದಿರುವ ಬೆನೆಲ್ಲಿ ದೇಶದಲ್ಲಿ ಐದು ಹೊಸ ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ,

  1. ಟಿಎನ್‌ಟಿ 302
  2. ಟಿಎನ್‌ಟಿ 600 ಐ
  3. ಟಿಎನ್‌ಟಿ 600 ಜಿಟಿ
  4. ಟಿಎನ್‌ಟಿ 899
  5. ಟಿಎನ್‌ಟಿಆರ್ (1130)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಟಿಎನ್‌ಟಿ 302 - 2.83 ಲಕ್ಷ ರು.
  • ಟಿಎನ್‌ಟಿ 600 ಐ - 5.15 ಲಕ್ಷ ರು.
  • ಟಿಎನ್‌ಟಿ 600 ಜಿಟಿ - 5.62 ಲಕ್ಷ ರು.
  • ಟಿಎನ್‌ಟಿ 899 - 9.48 ಲಕ್ಷ ರು.
  • ಟಿಎನ್‌ಟಿಆರ್ (1130) - 11.81 ಲಕ್ಷ ರು.

ವಾಹನ ವಿಮರ್ಶಕರ ಪ್ರಕಾರ ಬೆನೆಲ್ಲಿ 300 ಹಾಗೂ 600 ಸಿಸಿ ಬೈಕ್‌ಗಳಿಗೆ ದೇಶದಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ. ಯಾಕೆಂದರೆ ಇದರ ಏಕ್ಸ್ ಶೋ ರೂಂ ಬೆಲೆ ಅನುಕ್ರಮವಾಗಿ 2.88 ಹಾಗೂ 5.15 ಲಕ್ಷ ರು.ಗಳಿಷ್ಟಿದೆ. ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಹೈ ಎಂಡ್ ಮೋಟಾರುಸೈಕಲ್‌ಗಳಿಗೂ ಬೇಡಿಕೆ ಹೆಚ್ಚುತ್ತಲೇ ಇದೆ.

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ದೇಶ ಪ್ರವೇಶಿಸಲಿರುವ ಬೆನೆಲ್ಲಿ ಬೈಕ್‌ಗಳು ಪ್ರಸಕ್ತ ಸಾಲಿನಲ್ಲಿ 3000 ಯುನಿಟ್‌ಗಳನ್ನು ಮಾರಾಟದ ಗುರಿಯಿರಿಸಿಕೊಂಡಿದೆ. ಈ ನಿಟ್ಟಿನಲ್ಲಿ ಡಿಎಸ್‌ಕೆ ಬೆನೆಲ್ಲಿ ಶೋ ರೂಂಗಳು ಕಾರ್ಯ ನಿರ್ವಹಿಸಲಿದೆ. ನಿಮ್ಮ ಮಾಹಿತಿಗಾಗೆ ನಾಳೆ ಶುಕ್ರವಾರ (ಫೆ. 19ರಂದು) ಬೆನೆಲ್ಲಿ ಎಕ್ಸ್ ಕ್ಲೂಸಿವ್ ಶೋ ರೂಂ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಈ ಎಲ್ಲ ಐದು ಬೈಕ್‌ಗಳ ಪ್ರದರ್ಶನವಾಗಲಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲೇ 20 ಡೀಲರ್‌ಶಿಪ್‌ಗಳನ್ನು ತೆರೆಯುವ ಯೋಜನೆ ಹೊಂದಿದೆ. ಈ ಪೈಕಿ ಬೆಂಗಳೂರು, ಪುಣೆ, ದೆಹಲಿ, ಮುಂಬೈ, ಚೆನ್ನೈ, ಅಹಮಾಬಾದ್, ಕೋಲ್ಕತ್ತಾ, ಗೋವಾ ಸೇರಿದ ಒಂಬತ್ತು ಶೋ ರೂಂ ಬಾಗಿಲು ತೆರೆದುಕೊಳ್ಳಲು ಸಜ್ಜಾಗಿ ನಿಂತಿದೆ.

ಬೆನೆಲ್ಲಿ ಟಿಎನ್‌ಟಿ 302

ಬೆನೆಲ್ಲಿ ಟಿಎನ್‌ಟಿ 302

ಪ್ರತಿಸ್ಪರ್ಧಿ: ಕೆಟಿಎಂ ಡ್ಯೂಕ್ 390

ಎಂಜಿನ್ ತಾಂತ್ರಿಕತೆ

  • 300 ಸಿಸಿ, ಫೋರ್ ವಾಲ್ವ್, ಡಿಒಎಚ್‌ಸಿ, ಇನ್ ಲೈನ್ ಟು ಸಿಲಿಂಡರ್ ಎಂಜಿನ್,
  • 38.2 ಅಶ್ವಶಕ್ತಿ, 26.5 ತಿರುಗುಬಲ,
  • ಫ್ಯೂಯಲ್ ಇಂಜೆಕ್ಟಡ್,
  • 6 ಸ್ಪೀಡ್ ಗೇರ್ ಬಾಕ್ಸ್.
  • ವಿಶೇಷತೆ

    • 41 ಎಂಎಂ ಹೈಡ್ರಾಲಿಕ್ ಡ್ಯಾಪಿಂಗ್ ಶಾಕ್,
    • ಹೊಂದಾಣಿಸಬಹುದಾದ ರಿಯರ್ ಶಾಕ್ ಅಬ್ಸಾರ್ಬರ್,
    • ಮುಂಭಾಗದಲ್ಲಿ 260 ಎಂಎಂ ಟ್ವಿನ್ ವೇವ್ ಡಿಸ್ಕ್,
    • 240 ಎಂಎಂ ಸಿಂಗಲ್ ಡಿಸ್ಕ್
    • ಬೆನೆಲ್ಲಿ ಟಿಎನ್‌ಟಿ 600ಐ ಮತ್ತು ಟಿಎನ್‌ಟಿ 600 ಜಿಟಿ

      ಬೆನೆಲ್ಲಿ ಟಿಎನ್‌ಟಿ 600ಐ ಮತ್ತು ಟಿಎನ್‌ಟಿ 600 ಜಿಟಿ

      ಎಂಜಿನ್ ತಾಂತ್ರಿಕತೆ

      • ಲಿಕ್ವಿಡ್ ಕೂಲ್ಡ್, 600 ಸಿಸಿ, ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್,
      • 85 ಅಶ್ವಶಕ್ತಿ,
      • 54.6 ತಿರುಗುಬಲ,
      • 6 ಸ್ಪೀಡ್ ಗೇರ್ ಬಾಕ್ಸ್.
      • ಬೆನೆಲ್ಲಿ ಟಿಎನ್‌ಟಿ 600ಐ ಮತ್ತು ಟಿಎನ್‌ಟಿ 600 ಜಿಟಿ ವಿಶೇಷತೆ

        • ಬೆನೆಲ್ಲಿ ಟಿಎನ್ ಟಿ 600ಐ,
        • 50 ಎಂಎಂ ಅಪ್ ಸೈಡ್ ಡೌನ್ ಫಾರ್ಕ್,
        • ಹೊಂದಾಣಿಸಬಹುದಾದ ಮೊನೊ ಶಾಕ್.
        • ಬೆನೆಲ್ಲಿ ಟಿಎನ್‌ಟಿ 889

          ಬೆನೆಲ್ಲಿ ಟಿಎನ್‌ಟಿ 889

          ಎಂಜಿನ್ ತಾಂತ್ರಿಕತೆ

          • 898 ಸಿಸಿ, ಲಿಕ್ವಿಡ್ ಕೂಲ್ಡ್, ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್,
          • 118 ಅಶ್ವಶಕ್ತಿ,
          • 88 ತಿರುಗುಬಲ,
          • ಫ್ಲೂಯಲ್ ಇಂಜೆಕ್ಟಡ್,
          • 6 ಸ್ಪೀಡ್ ಗೇರ್ ಬಾಕ್ಸ್.
          • ಬೆನೆಲ್ಲಿ ಟಿಎನ್‌ಟಿ 1130 ಆರ್

            ಬೆನೆಲ್ಲಿ ಟಿಎನ್‌ಟಿ 1130 ಆರ್

            ಎಂಜಿನ್ ತಾಂತ್ರಿಕತೆ

            • 1130 ಸಿಸಿ, ಲಿಕ್ವಿಡ್ ಕೂಲ್ಡ್, ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್,
            • 155.5 ಅಶ್ವಶಕ್ತಿ,
            • 120 ತಿರುಗುಬಲ,
            • 6 ಸ್ಪೀಡ್ ಗೇರ್ ಬಾಕ್ಸ್,
            • ಡ್ರೈ ಕ್ಲಚ್
            • ಬೆನೆಲ್ಲಿ ಟಿಎನ್‌ಟಿ 889 ಮತ್ತು ಟಿಎನ್‌ಟಿ 1130 ಆರ್ ವಿಶೇಷತೆ

              ಬೆನೆಲ್ಲಿ ಟಿಎನ್‌ಟಿ 889 ಮತ್ತು ಟಿಎನ್‌ಟಿ 1130 ಆರ್ ವಿಶೇಷತೆ

              • ಅನಲಾಗ್ ಮತ್ತು ಡಿಜಿಟಲ್ ಮೀಟರ್ ಕನ್ಸಾಲ್,
              • ಹೊಂದಾಣಿಸಬಹುದಾದ 50ಎಂಎಂ ಮಾರ್ಝೊಷಿ ಫಾರ್ಕ್,
              • ಸಾಚ್ ಮೊನೊಶಾಕ್ ಅಬ್ಸಾರ್ಬರ್.

More from DriveSpark

Article Published On: Thursday, March 19, 2015, 14:29 [IST]
English summary
DSK Benelli Launches 5 Bikes in India; Price, Specs, features and details. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+