ದೀಪಾವಳಿ ಹಬ್ಬದ ಕೊಡುಗೆ; ಬಿಡುಗಡೆಯಾದಿತೇ ಹೊಸ 'ಹಂಕ್'?
ಬೈಕ್ ಪ್ರೇಮಿಗಳಿಗೆ ಮಗದೊಂದು ಶುಭ ಸಮಾಚಾರ ಒದಗಿ ಬಂದಿದೆ. ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆ ಹೊಸ ಕೊಡುಗೆಯೊಂದಿಗೆ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್ ಬರುತ್ತಿದೆ.
ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಾಗುವಾಗ 2016 ಹೀರೊ ಹಂಕ್ ಭರ್ಜರಿ ಬಿಡುಗಡೆ ಕಾಣಲಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕ ನೋಟವನ್ನು ಮೈಗೂಡಿಸಿಕೊಳ್ಳಲಿದೆ.

ಎಂಜಿನ್ ತಾಂತ್ರಿಕತೆ
- ಎಂಜಿನ್: 149.2 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಒಎಚ್‌ಸಿ
- ಅಶ್ವಶಕ್ತಿ: 14.21
- ತಿರುಗುಬಲ: 12.80 ಎನ್‌ಎಂ
- ಗೇರ್ ಬಾಕ್ಸ್: 5 ಸ್ಪೀಡ್ ಗೇರ್ ಬಾಕ್ಸ್



Click it and Unblock the Notifications








