ಬರುತ್ತಿದೆ ಹೋಂಡಾ ಆಕ್ಟಿವಾ ಪ್ರತಿಸ್ಪರ್ಧಿ ಹೀರೊ ಡ್ಯುಯೆಟ್
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಶೀಘ್ರದಲ್ಲೇ ಡ್ಯುಯೆಟ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಇದು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ನಂ.1 ಸ್ಕೂಟರ್ ಹೀರೊ ಆಕ್ಟಿವಾಗೆ ನೇರ ಪ್ರತಿಸ್ಪರ್ದಿಯಾಗಿರಲಿದೆ.
ಈ ಹಿಂದೆ ದೆಹಲಿಯಲ್ಲಿ 2014 ರಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಡ್ಯಾಶ್ ಹೆಸರಿನೊಂದಿಗೆ ಪ್ರದರ್ಶನಗೊಂಡಿದ್ದ ಹೀರೊ ಡ್ಯುಯೆಟ್ ಅನೇಕ ನಾವೀನ್ಯ ತಂತ್ರಜ್ಞಾನಗಳೊಂದಿಗೆ ಮುಂದೆ ಬರಲಿದ್ದು, ಗ್ರಾಹಕರ ನೆಚ್ಚಿನ ಸ್ಕೂಟರ್ ಎಂದೆನಿಸಿಕೊಳ್ಳುವ ಇರಾದೆಯಲ್ಲಿದೆ.

ಪುರುಷರು ಸೇರಿದಂತೆ ಮಹಿಳೆಯರನ್ನು ಹೀರೊ ಡ್ಯುಯೆಟ್ ಗುರಿ ಮಾಡುತ್ತಿದೆ. ಇದರದಲ್ಲಿ ಸಂಪೂರ್ಣ ಹೊಸ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಆಕ್ಟಿವಾ ತರಹನೇ ಡ್ಯುಯೆಟ್ ಆಟೋಮ್ಯಾಟಿಕ್ ಸ್ಕೂಟರ್ ನಲ್ಲೂ ಮೆಟಲ್ ಬಾಡಿ ಕಂಡುಬರಲಿದೆ. ಇನ್ನು ಹೆಚ್ಚಿನ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ.

ಎಂಜಿನ್ ತಾಂತ್ರಿಕತೆ
110 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್
ಅಶ್ವಶಕ್ತಿ: 8.4
ತಿರುಗುಬಲ: 9.4

ಹಾಗಿದ್ದರೂ ಬಿಡುಗಡೆ ದಿನಾಂಕ ಬಗ್ಗೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಮುಂಬರುವ ಹಬ್ಬದ ಆವೃತ್ತಿ ಅಥವಾ 2015 ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇನ್ನು ಸ್ಪರ್ದಾತ್ಮಕ ಬೆಲೆ ಕಾಪಾಡಿಕೊಳ್ಳಲಿದ್ದು, ಹೀರೊ ಡ್ಯುಯೆಟ್ ಎಕ್ಸ್ ಶೋ ರೂಂ ಬೆಲೆ 55,000 ರು.ಗಳಿಂದ 60,000 ರು.ಗಳಷ್ಟು ದುಬಾರಿಯೆನಿಸಲಿದೆ.

ಅಷ್ಟಕ್ಕೂ ನೂತನ ಡ್ಯುಯೆಟ್ ನಿಮ್ಮ ಮನ ಸೆಳೆಯಿತೇ? ನಿಮಗೂ ಇಷ್ಟವಾದ್ದಲ್ಲಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಮಂಡಿಸಲು ಮರೆಯದಿರಿ.


Click it and Unblock the Notifications








