ಪ್ರಸಕ್ತ ಸಾಲಿನಲ್ಲೇ ಹೀರೊ ಎಕ್ಸ್‌ಎಕ್ಸ್250ಆರ್ ಜಾಗತಿಕ ಬಿಡುಗಡೆ

By Nagaraja

ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೀರೊ ಮೊಟೊಕಾರ್ಪ್, ಪ್ರಸಕ್ತ ಸಾಲಿನಲ್ಲೇ ಬಹು ನಿರೀಕ್ಷಿತ ಎಕ್ಸ್ ಎಕ್ಸ್250ಆರ್ ಬಿಡುಗಡೆ ಮಾಡಲಿದೆ. ವರದಿಗಳ ಪ್ರಕಾರ ಹೋಂಡಾ ನೂತನ ಬೈಕ್ ಜಾಗತಿಕ ಬಿಡುಗಡೆ 2015 ಮಧ್ಯಂತರ ಅವಧಿಯಲ್ಲಿ ನೇರವೇರಲಿದೆ.

ಪ್ರತಿಸ್ಪರ್ಧಿ: ಹೋಂಡಾ ಸಿಬಿಆರ್250ಆರ್

ಸಂಪೂರ್ಣ ಫೇರ್ಡ್ ವರ್ಷನ್ ಬೈಕ್ ಆಗಿರುವ ಹೀರೊ ಎಕ್ಸ್ ಎಕ್ಸ್250ಆರ್ ಬೈಕ್ ಅತಿ ಹೆಚ್ಚು ಆಕರ್ಷಣೆಗೆ ಪಾತ್ರವಾಗಿದೆ. ಇದರಲ್ಲಿ 249 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಆಳವಡಿಸಲಾಗಿದ್ದು, 26 ತಿರುಗುಬಲದಲ್ಲಿ 31 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಸಹ ಜೋಡಣೆಯಾಗಲಿದೆ.

hero HX250R

ಹೋಂಡಾ ಎಕ್ಸ್ ಎಕ್ಸ್250ಆರ್ ಬೈಕ್ ನಲ್ಲಿ 17 ಇಂಚಿನ ಅಲಾಯ್ ವೀಲ್ ಕಂಡುಬರಲಿದೆ. ಅಲ್ಲದೆ ಗ್ರಾಹಕರಿಗೆ ಎಬಿಎಸ್ ಸುರಕ್ಷತೆಯು ಐಚ್ಛಿಕ ಆಯ್ಕೆಯಾಗಿ ಸಿಗಲಿದೆ. ಇನ್ನು ಹೊಂದಾಣಿಸಬಹುದಾದ ರಿಯರ್ ಮೊನೊ ಶಾಕ್ ಜೊತೆಗೆ ಹಿಂದುಗಡೆ ಹಾಗೂ ಮುಂಭಾಗದಲ್ಲಿ ಎಲ್ ಇಡಿ ಬೆಳಕಿನ ಸೇವೆ ಇರಲಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಹೋಂಡಾ ಎಕ್ಸ್ ಎಕ್ಸ್250ಆರ್ ಪ್ರದರ್ಶನ ಕಂಡಿತ್ತು. ಇದು ಸಂಸ್ಥೆಯಿಂದ ಆಗಮನವಾಗಲಿರುವ ಬಹುನಿರೀಕ್ಷಿತ ಬೈಕ್ ಗಳಲ್ಲಿ ಒಂದಾಗಿದ್ದು, ಭಾರಿ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

Article Published On: Saturday, March 21, 2015, 16:09 [IST]
English summary
Indian two-wheeler giant Hero MotoCorp has planned to launch several motorcycles and scooter in India during 2015. Their highly anticipated HX250R is expected to launch by mid-2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+