ಪ್ಯಾಶನ್ ಪ್ರೊ ಬೆನ್ನಲ್ಲೇ 2015 ಎಚ್ ಎಫ್ ಡಿಲಕ್ಸ್, ಇಕೊ ಮಾರುಕಟ್ಟೆಗೆ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಇದೀಗಷ್ಟೇ 2015 ಪ್ಯಾಶನ್ ಪ್ರೊ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಇದಾದ ಬೆನ್ನಲ್ಲೇ 2015 ಎಚ್ ಎಫ್ ಡಿಲಕ್ಸ್ ಹಾಗೂ ಎಚ್ ಎಫ್ ಡಿಲಕ್ಸ್ ಇಕೊ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಪರಿಷ್ಕೃತ ಮಾದರಿಯನ್ನು ಪರಿಚಯಸುವ ಮೂಲಕ ಮಾರಾಟಕ್ಕೆ ಉತ್ತೇಜನ ನೀಡುವ ಗುರಿಯನ್ನು ಹೀರೊ ಹೊಂದಿದೆ. 2015 ಪ್ಯಾಶನ್ ಪ್ರೊ ತರಹನೇ ಹೊಸ ಎಚ್ ಎಫ್ ಡಿಲಕ್ಸ್ ಮಾದರಿಗಳು ಹೆಚ್ಚು ಶಕ್ತಿಶಾಲಿ ಎಂಜಿನ್ ಹಾಗೂ ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಹೊಸ ಬಾಡಿ ಗ್ರಾಫಿಕ್ಸ್, ಐದು ಬಣ್ಣಗಳ ಆಯ್ಕೆ ನೂತನ ಎಚ್ ಎಫ್ ಡಿಲಕ್ಸ್ ಮಾದರಿಯ ವೈಶಿಷ್ಟ್ಯವಾಗಿರಲಿದೆ. ಅದೇ ಹೊತ್ತಿಗೆ ಎಚ್ ಎಫ್ ಇಕೊ ಮಾದರಿಯು ಏಕ ಮಾತ್ರ ಲೀಫ್ ಗ್ರೀನ್ ಬಣ್ಣದಲ್ಲಿ ದೊರಕಲಿದೆ.

ಇನ್ನು ಸಾಮಾನ್ಯ ಎಚ್ ಎಫ್ ಡಿಲಕ್ಸ್ ಮಾದರಿಗೆ ಹೋಲಿಸಿದಾಗ ಇಕೊ ಮಾದರಿಯು ಏರೋಡೈನಾಮಿಕ್ ವಿಂಗ್ ಮಿರರ್, ಕಡಿಮೆ ಉರುಳುವಿಕೆ ಪ್ರತಿರೋಧಕ ಚಕ್ರಗಳು ಇನ್ನಷ್ಟು ಇಂಧನ ಕ್ಷಮತೆ ಕಾಪಾಡಲು ಸಹಕಾರಿಯಾಗಲಿದೆ.

ಇನ್ನು ಎರಡು ಮಾದರಿಗಳು ಮುಂಭಾಗದಲ್ಲಿ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್, ಸ್ವಿಂಗ್ ಆರ್ಮ್ ಜೊತೆಗೆ ಹಿಂದುಗಡೆ ಎರಡು ವಿಧದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಪಡೆಯಲಿದೆ. ಇನ್ನುಳಿದಂತೆ ಮುಂದುಗಡೆ 130 ಎಂಎಂ ಡ್ರಮ್ ಹಾಗೂ ಹಿಂದುಗಡೆ 110 ಎಂಎಂ ಡ್ರಮ್ ಬ್ರೇಕ್ ಇರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
2015 ಎಚ್ ಎಫ್ ಡಿಲಕ್ಸ್ ಇಕೊ: 46,150 ರು.
2015 ಎಚ್ ಎಫ್ ಡಿಲಕ್ಸ್ ಕಿಕ್ ಸ್ಟ್ಯಾರ್ಟ್ ಸ್ಪೋಕ್ ವೀಲ್: 42,100 ರು.
2015 ಎಚ್ ಎಫ್ ಡಿಲಕ್ಸ್ ಕಿಕ್ ಸ್ಟ್ಯಾಟ್ ಅಲಾಯ್ ವೀಲ್: 43,000 ರು.
2015 ಎಚ್ ಎಫ್ ಡಿಲಕ್ಸ್ ಸೆಲ್ಫ್ ಸ್ಟ್ಯಾರ್ಟ್ ಸ್ಪೋಕ್ ವೀಲ್: 44,150 ರು.
2015 ಎಚ್ ಎಫ್ ಡಿಲಕ್ಸ್ ಸೆಲ್ಫ್ ಸ್ಟ್ಯಾರ್ಟ್ ಅಲಾಯ್ ವೀಲ್: 45,150 ರು.

ಎಂಜಿನ್
97.2 ಸಿಂಗಲ್ ಸಿಲಿಂಡರ್ ಒಎಚ್ ಸಿ,
ಅಶ್ವಶಕ್ತಿ: 8.24
ತಿರುಗುಬಲ: 8.05
ಗೇರ್ ಬಾಕ್ಸ್: 4 ಸ್ಪೀಡ್

ಬಣ್ಣಗಳು
ಕ್ಯಾಂಡಿ ಬ್ಲೇಝಿಂಗ್ ಆರೆಂಜ್,
ಕಪ್ಪು ಜೊತೆ ಕೆಂಪು,
ಕಪ್ಪು ಜೊತೆ ನೇರಳ,
ಬೂನ್ ಸಿಲ್ವರ್ ಮೆಟ್ಯಾಲಿಕ್,
ಕ್ಲಾಸಿ ಮೆರೂನ್ ಮೆಟ್ಯಾಲಿಕ್,


Click it and Unblock the Notifications








