2015 ಹೀರೊ ಪ್ಯಾಶನ್ ಪ್ರೊ ಸದ್ದಿಲ್ಲದೆ ಬಿಡುಗಡೆ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಸದ್ದಿಲ್ಲದೆ 2015 ಪ್ಯಾಶನ್ ಪ್ರೊ ಬೈಕ್ ಬಿಡುಗಡೆಗೊಳಿಸಿದೆ. ಇದು ಕಾಸ್ಮೆಟಿಕ್ ಬದಲಾವಣೆ ಜೊತೆಗೆ ಹೆಚ್ಚು ಶಕ್ತಿಶಾಲಿ 109 ಸಿಸಿ ಎಂಜಿನ್ ಪಡೆದುಕೊಳ್ಳಿದ್ದು, ಹೊಸ ಬಣ್ಣಗಳ ಆಯ್ಕೆಯೂ ಲಭ್ಯವಿರಲಿದೆ.
ಹೊಸ ಇಂಡಿಕೇಟರ್, ಮಡ್ ಗಾರ್ಡ್, ವೈಸರ್, ಅಲಾಯ್ ವೀಲ್ ಇತ್ಯಾದಿಗಳು ಹೊಸ 2015 ಹೀರೊ ಪ್ಯಾಶನ್ ಪ್ರೊದಲ್ಲಿ ಕಂಡುಬಂದಿರುವ ಇತರ ಪ್ರಮುಖ ಬದಲಾವಣೆಗಳಾಗಿವೆ. ಸಂಪೂರ್ಣ ಮಾಹಿತಿಗಾಗಿ ಫೋಟೊ ಸ್ಲೈಡ್ ಗೆ ಭೇಟಿ ಕೊಡಿರಿ.

ಸ್ಪ್ಲೆಂಡರ್ ಶ್ರೇಣಿಯ ಬಳಿಕ ಹೀರೊದ ಅತ್ಯಂತ ಶಕ್ತಿಶಾಲಿ ಬೈಕ್ ಎನಿಸಿಕೊಂಡಿರುವ ಪ್ಯಾಶನ್ ಪ್ರೊ ಕಳೆದ ಆರ್ಥಿಕ ಸಾಲಿನಲ್ಲಿ (2014-15) ಅತಿ ಹೆಚ್ಚು ಮಾರಾಟವಾದ ಮೂರನೇ ಬೈಕ್ ಬ್ರಾಂಡ್ ಎನಿಸಿಕೊಂಡಿತ್ತು. ಈಗ ಹೊಸ ಪ್ರೊ ಬಿಡುಗಡೆಯ ಜೊತೆಗೆ ವೆಬ್ ಸೈಟ್ ಸಹ ಅಪ್ ಡೇಟ್ ಮಾಡಲಾಗಿದೆ.

ನೂತನ ಇಂಡಿಕೇಟರ್, ಮುಂಭಾಗದಲ್ಲಿ ಮಡ್ ಗಾರ್ಡ್, ವೈಸರ್, ಫೈಬರ್ ಪೆಟ್ರೋಲ್ ಟ್ಯಾಪ್ ಹಾಗೂ ಹಿಂದುಗಡೆ ಎಲ್ ಇಡಿ ಟೈಲ್ ಲೈಟ್ ಸೇವೆ ಕಂಡುಬರಲಿದೆ. ಅಂತೆಯೇ ಹೊಚ್ಚ ಹೊಸ ಆರು ಸ್ಪೋಕ್ ಅಲಾಯ್ ವೀಲ್, ಹೊಸ ಗ್ರಾಫಿಕ್ಸ್ ಹಾಗೂ ಬಣ್ಣಗಳು ನೂತನ ಲುಕ್ ನೀಡಲಿದೆ.

ನೂತನ ಹೀರೊ ಪ್ಯಾಶನ್ ಪ್ರೊ ಬೈಕ್ 109.1 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.36 ಅಶ್ವಶಕ್ತಿ (8.05 ತಿರುಗುಬಲ) ಉತ್ಪಾದಿಸಲಿದೆ. ಇದು 4 ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ. ಅಂದರೆ ಹಿಂದಿನ 97.2 ಸಿಸಿ ಎಂಜಿನ್ ಅನ್ನು ಇದು ಬದಲಾಯಿಸಲಿದೆ.

ಇನ್ನು ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ಸ್ ಹಾಗೂ ಬಿಂಭಾಗದಲ್ಲಿ ಹೈಡ್ರಾಲಿಕ್ ಶಾಕ್ಸ್ ಸಸ್ಫೆಷನ್ ಪಡೆಕೊಳ್ಳಲಿದೆ. ಅಂತೆಯೇ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಇರಲಿದೆ.

ಒಟ್ಟಿನಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ಹೋಂಡಾ ಡ್ರೀಮ್ ಯುಗಾ, ಯಮಹಾ ವೈಬಿಆರ್ 110 ಹಾಗೂ ಬಜಾಜ್ ಪ್ಲಾಟಿನಾ 100 ಮಾದರಿಗಳಿಗೆ ನೂತನ 2015 ಪ್ಯಾಶನ್ ಪ್ರೊ ಪ್ರತಿಸ್ಪರ್ಧಿಯಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
- ಕಿಕ್ ಸ್ಟ್ಯಾರ್ಟ್, ಡ್ರಮ್ ಬ್ರೇಕ್, ಸ್ಪೋಕ್ ವೀಲ್: 47,550 ರು.
- ಕಿಕ್ ಸ್ಟ್ಯಾರ್ಟ್, ಡ್ರಮ್ ಬ್ರೇಕ್, ಅಲಾಯ್ ವೀಲ್: 49,181 ರು.
- ಸೆಲ್ಫ್ ಸ್ಟ್ಯಾರ್ಟ್, ಡ್ರಮ್ ಬ್ರೇಕ್, ಅಲಾಯ್ ವೀಲ್: 50,600 ರು.
- ಸೆಲ್ಫ್ ಸ್ಟ್ಯಾರ್ಟ್, ಡ್ರಮ್ ಬ್ರೇಕ್, ಸ್ಪೋಕ್ ವೀಲ್: 51,909 ರು.
- ಸೆಲ್ಫ್ ಸ್ಟ್ಯಾರ್ಟ್, ಡಿಸ್ಕ್ ಬ್ರೇಕ್, ಅಲಾಯ್ ವೀಲ್: 54,943 ರು.

ಬಣ್ಣಗಳು
ಬ್ರೌನ್,
ಸ್ಪೋರ್ಟ್ಸ್ ರೆಡ್,
ಫೋರ್ಸ್ ಸಿಲ್ವರ್ ಜೊತೆ ಬ್ಲೂ,
ಫೋರ್ಸ್ ಸಿಲ್ವರ್ ಜೊತೆ ರೆಡ್,
ಬೆಳ್ಳಿ ಹಳದಿ ಮೆಟ್ಯಾಲಿಕ್,
ಬ್ಲ್ಯಾಕ್ ಜೊತೆಗೆ ಹೆವಿ ಗ್ರೇ,
ಬ್ಲ್ಯಾಕ್ ಜೊತೆಗೆ ಫ್ರಾರ್ಸ್ಟ್ ಬ್ಲೂ,
ಬ್ಲ್ಯಾಕ್ ಜೊತೆಗೆ ಸ್ಪೋರ್ಟ್ಸ್ ರೆಡ್.

ಈಗ ನಿಮ್ಮ ನೆಚ್ಚಿನ ಹೀರೊ ಬೈಕ್ ಬಗ್ಗೆ ನಮ್ಮ ಜೊತೆ ಅನಿಸಿಕೆಗಳನ್ನು ಹಂಚಿಕೊಳ್ಳಿರಿ.


Click it and Unblock the Notifications








