ಹೋಂಡಾ ಸಿಬಿ ಹಾರ್ನೆಟ್ ಆಗಮನಕ್ಕೆ ರೆಡಿ

Written By:

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ, ಇದೇ ಮುಂಬರುವ 2015 ಡಿಸೆಂಬರ್ 10ರಂದು ಬಹುನಿರೀಕ್ಷಿತ ಸಿಬಿ ಹಾರ್ನೆಟ್ 160ಆರ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಇದು ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡುತ್ತಿರುವ 15ನೇ ಮಾದರಿಯಾಗಿರಲಿದೆ.

ನೂತನ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು ದೇಶದ್ಯಾಂತ ಸ್ಥಿತಗೊಂಡಿರುವ ಹೋಂಡಾ ಅಧಿಕೃತ ಡೀಲರ್ ಶಿಪ್ ಗಳನ್ನು ಸಂಪರ್ಕಿಸಬಹುದಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160

ಮುಂಗಡ ಬುಕ್ಕಿಂಗ್ ದರ: 5,000 ರು.

ಎಂಜಿನ್ ತಾಂತ್ರಿಕತೆ

  • 162.71 ಸಿಸಿ ಸಿಂಗಲ್ ಸಿಲಿಂಡರ್,
  • ಏರ್ ಕೂಲ್ಡ್,
  • 14.5 ಅಶ್ವಶಕ್ತಿ,
  • 14.6 ಎನ್‌ಎಂ ತಿರುಗುಬಲ,

ಗೇರ್ ಬಾಕ್ಸ್: 5 ಸ್ಪೀಡ್

ನೂತನ ಬೈಕ್ ನಲ್ಲಿ ಸಿಬಿ ಯೂನಿಕಾರ್ನ್ ಮಾದರಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಳವಡಿಸಲಾಗಿದೆ. ಇದು 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿರುವ ಸಿಎಕ್ಸ್-01 ಕಾನ್ಸೆಪ್ಟ್ ಮಾದರಿಯಿಂದ ರಚಿಸಲಾಗಿದೆ.

ಎಲ್ಲ ಹೊಸತನದಿಂದ ಕೂಡಿರುವ ಡಿಜಿಟಲ್ ಇನ್ಸ್ಟ್ರುಮೆಂಟ್, ಪರಿಣಾಮಕಾರಿ ವಿನ್ಯಾಸ, ಎಕ್ಸ್ ಆಕಾರದ ಟೈಲ್ ಲೈಟ್ ಜೊತೆಗೆ ಎಲ್‌ಇಡಿ ಬೆಳಕಿನ ಸೇವೆಯಿರಲಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯವಿರಲಿದೆ. ಅಲ್ಲದೆ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್) ಸಹ ಕಂಡುಬರಲಿದೆ.

ಅಂದಾಜು ಬೆಲೆ: 80,000 ರು.ಗಳಿಂದ 90,000 ರು.

ಪ್ರತಿಸ್ಪರ್ಧಿಗಳು: ಯಮಹಾ ಎಫ್‌ಝಡ್-ಎಸ್, ಸುಜುಕಿ ಜಿಕ್ಸರ್, ಟಿವಿಎಸ್ ಅಪಾಚೆ 160, ಹೋಂಡಾ ಎಕ್ಸ್ ಟ್ರೀಮ್ ಸ್ಪೋರ್ಟ್ಸ್.

English summary
Honda CB Hornet 160R India Launch On December 10
Story first published: Saturday, November 28, 2015, 17:07 [IST]
Please Wait while comments are loading...

Latest Photos