ಭಾರತದಲ್ಲೇ ಹಸ್ಕ್ವಾರ್ನಾ ಡರ್ಟ್ ಬೈಕ್ ನಿರ್ಮಾಣ
ಆಸ್ಟ್ರೀಯಾದ ಕೆಟಿಎಂ ಸ್ಪೋರ್ಟ್ ಮೋಟಾರ್ ಸೈಕಲ್ ಭಾಗವಾಗಿರುವ ಯುರೋಪ್ ನ ಹೆಸರಾಂತ ಡರ್ಟ್ ಬೈಕ್ ಬ್ರ್ಯಾಂಡ್ ಹಸ್ಕ್ವಾರ್ನಾ ಮೋಟಾರ್ ಸೈಕಲ್ಸ್ ಭಾರತದಲ್ಲೇ ನಿರ್ಮಾಣವಾಗಲಿದೆ.
ಭಾರತದಲ್ಲಿ ಬಜಾಜ್ ಆಟೋ ಜೊತೆ ಪಾಲುದಾರಿಕೆ ಹೊಂದಿರುವ ಕೆಟಿಎಂ, ಪುಣೆಯ ಹತ್ತಿರದ ಚಕನ್ ಘಟಕದಲ್ಲಿ ಹಸ್ಕ್ವಾರ್ನಾ ಬೈಕ್ ನಿರ್ಮಿಸಿ ಜಾಗತಿಕ ಮಾರುಕಟ್ಟೆಗೆ ಮಾರಾಟ ಮಾಡುವ ಇರಾದೆ ಹೊಂದಿದೆ.

ಆರಂಭದಲ್ಲಿ ಆಫ್ ರೋಡ್ ಡರ್ಟ್ ಬೈಕ್ ಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿತ್ತು. ಆದರೆ ಇದೀಗ ಬಜಾಜ್ ಜೊತೆ ಸೇರಿ ರಸ್ತೆ ಮಾನ್ಯತಾ ಪಡೆದ ಮಾದರಿಗಳನ್ನು ನಿರ್ಮಿಸುವ ಯೋಜನೆಯನ್ನು ಹೊಂದಿರುವುದಾಗಿ ಕೆಟಿಎಂ ತಿಳಿಸಿದೆ.

ಆರಂಭದಲ್ಲಿ ಭಾರತದಿಂದ ಎಂಜಿನ್ ಹಾಗೂ ಬಿಡಿಭಾಗಗಳನ್ನು ಆಮದು ಮಾಡಿ ಆಸ್ಟ್ರೀಯಾ ಘಟಕದಲ್ಲಿ ಜೋಡಣೆ ಮಾಡುವುದು ಹಾಗೂ 2017ರಲ್ಲಿ ಯುರೋಪ್ ಹಾಗೂ ಅಮೆರಿಕದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿತ್ತು.

ನಿಮ್ಮ ಮಾಹಿತಿಗಾಗಿ ಕೆಟಿಎಂನಲ್ಲಿ ಶೇಕಡಾ 48ರಷ್ಟು ಶೇರನ್ನು ಬಜಾಜ್ ಆಟೋ ಇಂಟರ್ ನ್ಯಾಷನಲ್ ಹೋಲ್ಡಿಂಗ್ಸ್ ಹೊಂದಿದೆ.

125 ಸಿಸಿ ಆರಂಭವಾಗಿ 390 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯಗಳನ್ನು ಹೊಂದಿರುವ ಹಸ್ಕ್ವಾರ್ನಾ ಮೋಟಾರ್ ಸೈಕಲ್ಸ್ ಭಾರತದಲ್ಲಿ ಕಡಿಮೆ ನಿರ್ಮಾಣ ವೆಚ್ಚದ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಲಿದೆ.

ಪ್ರಸ್ತುತ ಕೆಟಿಎಂ ಪಾಲಿಗೆ ವರದಾನವಾಗಿರುವ ಬಜಾಜ್, ಕಡಿಮೆ ವೆಚ್ಚದಲ್ಲಿ 125 ಸಿಸಿ, 200 ಸಿಸಿ ಹಾಗೂ 390 ಸಿಸಿ ಬೈಕ್ ಗಳನ್ನು ದೇಶದಿಂದ ಜಾಗತಿಕ ಮಾರುಕಟ್ಟೆಗೆ ಆಮದು ಮಾಡಿಕೊಳ್ಳಲು ನೆರವಾಗುತ್ತಿದೆ.


Click it and Unblock the Notifications