37 ಲಕ್ಷ ದುಬಾರಿಯ ಇಂಡಿಯನ್ ರೋಡ್ ಮಾಸ್ಟರ್ ಬಿಡುಗಡೆ
ಕೆಲವು ಸಮಯಗಳ ಹಿಂದೆಯಷ್ಟೇ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಅಮೆರಿಕದ ಅಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ತನ್ನ ಫ್ಲ್ಯಾಗ್‌ಶಿಪ್ ಮಾದರಿಯನ್ನು ಭಾರತಕ್ಕೆ ಪರಿಚಯಿಸಿದೆ.
ಹೊಸ ಇಂಡಿಯನ್ ರೋಡ್ ಮಾಸ್ಟರ್ ಭಾರತದಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 37 ಲಕ್ಷ ರುಪಾಯಿ.

ಈ ಮೂಲಕ ಸಾಂಪ್ರದಾಯಿಕ ಶೈಲಿಯ ದೈತ್ಯ ಬೈಕ್‌ವೊಂದು ಭಾರತ ಪ್ರವೇಶ ಕಂಡಿದೆ. ಪ್ರಸ್ತುತ ಬೈಕ್ 2015 ಮಧ್ಯಂತರ ಅವಧಿಯಲ್ಲಿ ವಿತರಣೆ ಆರಂಭವಾಗಲಿದೆ. ಪೊಲರಿಸ್ ಮಾಲಿಕತ್ವದಲ್ಲಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ದೂರ ಪ್ರಯಾಣ ಬಯಸುವವರಿಗೆ ಸಂಪೂರ್ಣ ಹೊಸ ಅನುಭವ ನೀಡಲಿದೆ.
ಎಂಜಿನ್
ಇಂಡಿಯನ್ ರೋಡ್ ಮಾಸ್ಟರ್ 1811 ಸಿಸಿ, ಟ್ವಿನ್ ಸಿಲಿಂಡರ್ ಎಂಜಿನ್‌ನಿಂದ (138.9 ಎನ್ಎಂ) ನಿಯಂತ್ರಿಸಲ್ಪಡಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಜೊತೆಗಿರಲಿದೆ.

ವೈಶಿಷ್ಟ್ಯಗಳು
ಹೊಂದಾಣಿಸಬಹುದಾದ ಫ್ಲೋರ್ ಬೋರ್ಡ್,
ಹೀಟಡ್ ಗ್ರಿಪ್ ಮತ್ತು ಸೀಟು,
ರಿಮೋಟ್ ಲಾಕಿಂಗ್ ಸ್ಯಾಡಲ್ ಬ್ಯಾಗ್ ಮತ್ತು ಟ್ರಂಕ್,
ಕೀಲೆಸ್ ಇಗ್ನಿಷನ್,
ಲೆಥರ್ ಸೀಟು,
200ಡಬ್ಲ್ಯು ಸ್ಟೀರಿಯೋ ಸಿಸ್ಟಂ,
ಎಎಂ/ಎಫ್‌ಎಂ ಜೊತೆ ಬ್ಲೂಟೂತ್ ಮತ್ತು ಸ್ಮಾರ್ಟ್ ಫೋನ್ ಸಂಪರ್ಕ,
ಎಬಿಎಸ್,
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
ಕ್ರೂಸ್ ಕಂಟ್ರೋಲ್,
142 ಲೀಟರ್ ಸ್ಟೋರೆಜ್ ಜಾಗ,
ಇಂಧನ ಸಾಮರ್ಥ್ಯ: 20.8 ಲೀಟರ್
ಭಾರ: 403 ಕೆ.ಜಿ.
ಬಣ್ಣಗಳು
ಕೆಂಪು, ಕೆಂಪು ಜೊತೆ ಐವರಿ ಕ್ರೀಮ್, ಥಂಡರ್ ಬ್ಲ್ಯಾಕ್


Click it and Unblock the Notifications








