ಕವಾಸಕಿ ಜೆ125 ಸ್ಕೂಟರ್ ಮಿಲಾನ್‌ನಲ್ಲಿ ಮಿಲನ

Written By:

ಪ್ರತಿಷ್ಠಿತ 2015 ಮಿಲಾನ್ ಮೋಟಾರ್ ಶೋದಲ್ಲಿ (EICMA) ಕವಾಸಕಿ ಜೆ125 ಭರ್ಜರಿ ಪ್ರದರ್ಶನ ಕಂಡಿದೆ. ಪ್ರಸ್ತುತ ಸ್ಕೂಟರ್ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಲಿದೆ.

ಯಮಹಾ ಆರ್3 Vs ಕವಾಸಕಿ ನಿಂಜಾ 300 Vs ಕೆಟಿಎಂ ಆರ್‌ಸಿ 390 ಮುಂದಕ್ಕೆ ಓದಿ

ಆಕ್ರಮಣಕಾರಿ ವಿನ್ಯಾಸ ಶೈಲಿ, ದೃಢವಾದ ದೇಹ ರಚನೆ, ಸೊಗಸಾದ ನೋಟ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳು ಹೊಸ ಕವಾಸಕಿ ಜೆ125 ಸ್ಕೂಟರ್‌ಗೆ ಮತ್ತಷ್ಟು ಮೆರಗು ತುಂಬಿದೆ.

To Follow DriveSpark On Facebook, Click The Like Button
ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ದೊಡ್ಡದಾದ ಜೆ300 ಮಾದರಿಯಿಂದ ಪ್ರೇರಣೆ ಪಡೆದುಕೊಂಡು ಸಣ್ಣ ಎಂಜಿನ್ ಸಾಮರ್ಥ್ಯದ ಈ ಸೋದರ ಜೆ125 ಮಾದರಿಯನ್ನು ತಯಾರಿಸಲಾಗಿದೆ.

ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ಕವಾಸಕಿ ಜೆ125 ಪ್ರಮುಖವಾಗಿಯೂ ಯುರೋಪ್ ಮಾರುಕಟ್ಟೆಯನ್ನು ಗುರಿಯಾಗಿಸಲಿದ್ದು, ಸಿವಿಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಅಂಡರ್ ಸೀಟು ಸ್ಟೋರೆಜ್ ಜಾಗದಲ್ಲಿ ಫುಲ್ ಫೇಸ್ ಹೆಲ್ಮೆಟ್ ಸುಲಭವಾಗಿ ಇಡಬಹುದಾಗಿದೆ.

ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ಇದರ ಎಲ್‌ಇಡಿ ಲೈಟ್ ಗಳು ಕತ್ತಲೆಯಲ್ಲೂ ಪ್ರಕಾಶಮಾನ ಬೆಳಕು ಚೆಲ್ಲುವಲ್ಲಿ ಸಹಕಾರಿಯಾಗಲಿದೆ. ಅಲ್ಲದೆ ಗ್ಲೋವ್ ಬಾಕ್ಸ್ ಒಳಗಡೆ 12 ವಾಟ್ ಸಾಕೆಟ್ ಕೂಡಾ ಇರುತ್ತದೆ.

ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ಐಚ್ಚಿಕ ಎಬಿಎಸ್ ಆಯ್ಕೆಯೂ ಲಭ್ಯವಾಗಲಿದೆ. ಅಂತೆಯೇ ಎರಡೂ ಬದಿಗಳಲ್ಲೂ ಪೆಡಲು ವಿಧದ ಡಿಸ್ಕ್ ಬ್ರೇಕ್ ಇರಲಿದೆ.

ಮಿಲಾನ್‌ನಲ್ಲಿ ಕವಾಸಕಿ ಜೆ125 ಸ್ಕೂಟರ್ ಅನಾವರಣ

ಅಂದ ಹಾಗೆ ಕವಾಸಕಿ ಜೆ125 ಸ್ಕೂಟರ್ 125 ಸಿಸಿ ಲಿಕ್ವಿಡ್ ಕೂಲ್ಡ್ ಎಸ್ಒಎಚ್‌ಸಿ ಫೋರ್ ವಾಲ್ವ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಪರಿಣಾಮಕಾರಿ 13.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 182 ಕೆ.ಜಿ ತೂಕವಿರಲಿದೆ.

English summary
Kawasaki J125 Scooter at 2015 EICMA
Story first published: Thursday, November 19, 2015, 8:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark