ಕವಾಸಕಿ 2016 ಝಡ್‌ಝಡ್‌ಆರ್1400 ಬಿಡುಗಡೆ

Written By:

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಬಹುನಿರೀಕ್ಷಿತ 2016 ಝಡ್‌ಝಡ್‌ಆರ್1400 ಬೈಕ್ ಗಳ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ,

  • ಝಢ್‌ಝಡ್‌ಆರ್1400 ಮತ್ತು
  • ಝಡ್‌ಝಡ್‌ಆರ್1400 ಫರ್ಫಮೆನ್ಸ್ ಸ್ಪೋರ್ಟ್ಸ್ ಮಾಡೆಲ್.

ಎಂಜಿನ್ ತಾಂತ್ರಿಕತೆ

ನೂತನ 2016 ಕವಾಸಕಿ ಝಡ್‌ಝಡ್‌ಆರ್1400 ಮಾದರಿಯು ಇನ್‌ಲೈನ್, ಫೋರ್ ಸಿಲಿಂಡರ್, 1441 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ. ಇದು 165.5 ಎನ್‌ಎಂ ತಿರುಗುಬಲದಲ್ಲಿ 197.18 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

  • ಗೇರ್ ಬಾಕ್ಸ್: 6 ಸ್ಪೀಡ್ ಗೇರ್ ಬಾಕ್ಸ್.
  • ಗರಿಷ್ಥ ವೇಗ: ಗಂಟೆಗೆ 299 ಕೀ.ಮೀ. (ವಿದ್ಯುನ್ಮಾನ ನಿಯಂತ್ರಿತ)

ಭಾರತದಲ್ಲೂ 2016 ಕವಾಸಕಿ ಝಡ್‌ಝಡ್‌ಆರ್1400 ಲಭ್ಯವಾಗಲಿದ್ದು 16.80 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ವಿಶೇಷತೆಗಳು

  • ಅಕ್ರಾಪೊವಿಕ್ ಎಕ್ಸಾಸ್ಟ್ ಸಿಸ್ಟಂ,
  • ಓಹ್ಲಿನ್ಸ್ ಟಿಟಿಎಕ್ಸ್39 ರಿಯರ್ ಶಾಕ್,
  • ಬ್ರೆಂಬೊ ರೇಡಿಯಲ್ ಪಂಪ್ ಮಾಸ್ಟರ್ ಸಿಲಿಂಡರ್ ಜೊತೆ ಸ್ಟೈನ್ ಲೆಸ್ ಸ್ಟೀಲ್ ಬ್ರೇಕ್ ಲೈನ್ಸ್,
  • ಬ್ರೆಂಬೊ ಎಂ50 ಮೊನೊಬ್ಲಾಕ್ ಬ್ರೇಕ್ ಕಾಲಿಪರ್.
  • ಹೊಸ ಇನ್ಸ್ಟ್ರುಮಂಟ್ ಕ್ಲಸ್ಟರ್
  • ಎಲ್‌ಸಿಡಿ ಪ್ಯಾನೆಲ್

ಪ್ರತಿಸ್ಪರ್ಧಿ: ಸುಜುಕಿ ಹಯಾಬುಸಾ

English summary
Kawasaki Launches 2016 ZZR1400 In Two Variants
Story first published: Saturday, October 17, 2015, 15:28 [IST]
Please Wait while comments are loading...

Latest Photos

X