ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

By Nagaraja

ಹೌದು, ಹಳೆಯ ಕೆಟಿಎಂ ಡ್ಯೂಕ್ ಹಾಗೂ ಆರ್‌ಸಿ ಬೈಕ್ ಗಳಿಗೆ ಗುಡ್ ಬೈ ಹೇಳಲು ಕಾಲ ಹತ್ತಿರ ಬಂದಿದೆ. ಆಟೋ ವಲಯಗಳಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ ಹೊಸ ಹೊಸ ಎಂಜಿನ್ ತಾಂತ್ರಿಕತೆಗಳೊಂದಿಗೆ ಕೂಡಿರುವ ನೂತನ ಕೆಟಿಎಂ ಡ್ಯೂಕ್ ಹಾಗೂ ಆರ್‌ಸಿ ಬೈಕ್ ಗಳು 2017ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.

ಭಾರತದ ನಿರ್ವಹಣಾ ಮೋಟಾರ್‌ಸೈಕಲ್ ವಿಭಾಗದಲ್ಲಿ ಭಾರಿ ಸದ್ದು ಮೂಡಿಸಿರುವ ಕೆಟಿಎಂ ಬೈಕ್‌ಗಳು ದೇಶದ ರಸ್ತೆಯಲ್ಲಿ ರಾರಾಜಿಸುತ್ತಿದೆ. ಯುವ ಮನಸ್ಕರ ಪಾಲಿಗಂತೂ ಕೆಟಿಎಂ ಬೈಕ್‌ಗಳು ನೆಚ್ಚಿನ ಆಯ್ಕೆಯಾಗಿದೆ.

ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

ಈ ಬಗ್ಗೆ ಕೆಟಿಎಂ ಮೂಲಗಳಿಂದಲೇ ಸ್ಪಷ್ಟನೆ ಬಂದಿದ್ದು, ಆಗಿರುವ ಆರ್‌ಸಿ200 ಹಾಗೂ ಆರ್‌ಸಿ390 ಬದಲಾಯಿಸಲು ಕಾಲ ಹತ್ತಿರ ಬಂದಿದೆ. ಅಲ್ಲದೆ ಎಲ್ಲ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ನೂತನ ಬೈಕ್ ನಿರ್ಮಾಣವಾಗಲಿದೆ.

ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

ಎರಡನೇ ತಲೆಮಾರಿನ ಕೆಟಿಎಂ ಬೈಕ್ ಗಳು ಯುರೋ IV ಮಾನ್ಯತೆಯನ್ನು ಪಡೆದುಕೊಳ್ಳಲಿದ್ದು, 2017ರಲ್ಲಿ ಯುರೋಪ್ ಬಳಿಕ ಭಾರತಕ್ಕೂ ಪ್ರವೇಶ ಪಡೆಯಲಿದೆ.

ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

ನೂತನ ಕೆಟಿಎಂ ಬೈಕ್‌ಗಳಲ್ಲಿ ಏನೆಲ್ಲ ಹೊಸತನವಿರಲಿದೆ ಎಂಬುದನ್ನು ಈಗಾಗಲೇ ಹೇಳುವುದು ಕಷ್ಟಕರ. ಆದರೂ ಸ್ಲಿಪರ್ ಕ್ಲಚ್, ರೈಡ್ ಬೈ ವೈರ್, ಬದಲಾಯಿಸಬಹುದಾದ ಎಬಿಎಸ್ ಮುಂತಾದ ಸೌಲಭ್ಯಗಳು ಕಂಡುಬರಲಿದೆ.

ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

ನೂತನ ಎಂಜಿನ್ ತಳಹದಿಯು ಕೆಟಿಎಂ ಬೈಕ್ ಗಳಿಗೆ ಹೊಸತನವನ್ನು ತುಂಬಲಿದೆ. ಅಂದರೆ ಹೊಸ ತಲೆಮಾರಿನ ನೆಕ್ಡ್ ಬೈಕ್ ನೋಡಲು ತಯಾರಾಗಿರಿ.

ಕೆಟಿಎಂ ಡ್ಯೂಕ್/ಆರ್‌ಸಿ ಬೈಕ್‌ಗಳಿಗೆ ಗುಡ್ ಬೈ ಹೇಳಿರಿ!

ಕೆಟಿಎಂನಲ್ಲಿ ಶೇಕಡಾ 48ರಷ್ಟು ಶೇರನ್ನು ಹೊಂದಿರುವ ಬಜಾಜ್‌ನ ಚಕನ್ ಘಟಕದಲ್ಲೇ ಈ ಎಲ್ಲ ಬೈಕ್ ಗಳು ನಿರ್ಮಾಣವಾಗಲಿರುವುದು ಮಗದೊಂದು ಶುಭ ಸಂದೇಶವಾಗಿದೆ.

Most Read Articles

Kannada
Read more on ಕೆಟಿಎಂ ktm
English summary
KTM Duke & RC Range To Be Revamped Globally By 2017
Story first published: Tuesday, December 29, 2015, 15:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X