ಲೂನಾ ಪರಂಪರೆ ಮತ್ತೆ ಎತ್ತಿ ಹಿಡಿಯಲಿರುವ ಮಹೀಂದ್ರ
ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೆಚ್ಚು ಗಮನ ಕೇಂದ್ರಿತವಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ನಿರಂತರ ಅಂತರಾಳದಲ್ಲಿ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರಲ್ಲಿ ಕಾರ್ಯ ಮಗ್ನವಾಗಿದೆ. ಈಗ ಭಾರತದ ಮೂಲದ ಈ ಸಂಸ್ಥೆಯು ಜನಪ್ರಿಯ ಲೂನಾ ಪರಂಪರೆಯನ್ನು ಮತ್ತೆ ಎತ್ತಿ ಹಿಡಿಯುವ ಯೋಜನೆಯಲ್ಲಿದೆ.
ನಿಮ್ಮ ಮಾಹಿತಿಗಾಗಿ ಕೈನಾಟಿಕ್ ಮೋಟಾರು ಕಂಪನಿ ಲಿಮೆಟೆಡ್ ಒಡೆತನದಲ್ಲಿದ್ದ ಲೂನಾ ಬ್ರಾಂಡ್ ಅನ್ನು ಮಹೀಂದ್ರ ಟು ವೀಲರ್ ಲಿಮೆಟೆಡ್‌ಗೆ ಮಾರಾಟ ಮಾಡಲಾಗಿತ್ತು. ಈಗ ಲೂನಾ ಬ್ರಾಂಡ್‌ಗೆ ಆಧುನಿಕ ಸ್ಪರ್ಶ ನೀಡುವ ಇರಾದೆಯನ್ನು ಮಹೀಂದ್ರ ಹೊಂದಿದೆ.

ಸದ್ಯ ಎದ್ದಿರುವ ಕುತೂಹಲ ಏನೆಂದರೆ ಮಹೀಂದ್ರ ಸಂಸ್ಥೆಯು ಲೂನಾ ತಳಹದಿಯಲ್ಲಿ ಎಲ್ಲ ಹೊಸತನದಿಂದ ಕೂಡಿರುವ ಹೊಸ ಮಾಡೆಲ್ ಬಿಡುಗಡೆ ಮಾಡಲಿದೆಯೇ ಅಥವಾ ಮರು ಲಾಂಚ್ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಸದ್ಯ ಈ ವಿಭಾಗದಲ್ಲಿರುವ ಏಕೈಕ ಮೊಪೆಡ್ ಮಾದರಿಯಾಗಿರುವ ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ದ್ವಿಚಕ್ರ ವಾಹನವು ಭಾರಿ ಮಾರಾಟ ಗಳಿಸುತ್ತದೆ. ಅಲ್ಲದೆ ಸಣ್ಣ ವ್ಯಾಪಾರವನ್ನು ಹರಿಸಿಕೊಂಡು ಬದುಕುತ್ತಿರುವರಿಗೆ ನೆರವಾಗುತ್ತಿದೆ.
ತೀರಾ ಸರಳ ಹಾಗೂ ಮೂಲ ದ್ವಿಚಕ್ರ ವಾಹನವಾಗಿರುವ ಲೂನಾದಲ್ಲಿ 50 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಆಳವಡಿಸಲಾಗಿತ್ತು. ಈಗ ಹೆಚ್ಚು ಶಕ್ತಿಶಾಲಿ 70 ಸಿಸಿ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಅಂದರೆ 70 ಸಿಸಿ ಎಂಜಿನ್ ಹೊಂದಿರುವ ಟಿವಿಎಸ್ ಎಕ್ಸ್‌ಎಲ್ಸ್ ಮೊಪೆಡ್ ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








