ಇದಕ್ಕಿಂತ ಇನ್ನೇನು ಬೇಕು ? ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

Written By:

ಬ್ರಿಟನ್ ನ ಅತಿ ಹಳೆಯ ಬಿಎಸ್ ಎ ಮೋಟಾರ್ ಸೈಕಲ್ ಸಂಸ್ಥೆಯನ್ನು ಖರೀದಿಸುವ ಮೂಲಕ ದೇಶದೆಲ್ಲ ವಾಹನ ಪ್ರೇಮಿಗಳನ್ನು ಆಶ್ಚರ್ಯ ಚಕಿತಗೊಳಿಸಿರುವ ಭಾರತದ ಅಗ್ರಗಣ್ಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯೀಗ ಮಗದೊಂದು ಐಕಾನಿಕ್ ಜಾವಾ ಬ್ರಾಂಡ್ ವಶಪಡಿಸಿಕೊಂಡಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಮಹೀಂದ್ರ, ದ್ವಿಚಕ್ರ ವಿಭಾಗದದಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಿರುವುದನ್ನು ಖಚಿತಪಡಿಸಿಕೊಂಡಿದೆ.

To Follow DriveSpark On Facebook, Click The Like Button
ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಪ್ರೀಮಿಯಂ ಹಾಗೂ ಐಕಾನಿಕ್ ಮೋಟಾರ್ ಸೈಕಲ್ ವಿಭಾಗವನ್ನು ಗುರಿ ಮಾಡಲಿರುವ ಮಹೀಂದ್ರ, ಹಳೆಯ ಜೀವನಶೈಲಿಯನ್ನು ಹೊಸ ರೀತಿಯಲ್ಲಿ ಮರು ಸೃಷ್ಟಿ ಮಾಡಲಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಮಹೀಂದ್ರ ಉಪಾಂಗ ಸಂಸ್ಥೆಯಾಗಿರುವ ಕ್ಲಾಸಿಕ್ ಲೆಜೆಂಡ್ಸ್ ಭಾರತ ಮತ್ತು ಪೂರ್ವ ಏಷ್ಯಾದಲ್ಲಿ ಜಾವಾ ಬ್ರಾಂಡ್ ನಲ್ಲಿ ಹೊಸ ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಗಿಟ್ಟಿಸಿಕೊಂಡಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಜಗತ್ತಿನ ಬಹುತೇಕ ಕಡೆಗಳಲ್ಲಿ ಬಿಎಸ್ ಎ ಮತ್ತು ಜಾವಾ ತನ್ನದೇ ಆದ ವಿಶಿಷ್ಟ ಸ್ಥಾನಮಾನವನ್ನು ಕಾಪಾಡಿಕೊಂಡಿದೆ. ಈ ಪೈಕಿ ಬಿಎಸ್ ಎ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿದರೆ ಜಾವಾ ಭಾರತದಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಲಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ವಿಶ್ವ ದರ್ಜೆಯ ಮೋಟಾರ್ ಸೈಕಲ್ ಗಳನ್ನು ನಿರ್ಮಿಸಲು ಇಟಲಿಯಲ್ಲಿರುವ ಮಹೀಂದ್ರ ರೇಸಿಂಗ್ ತಾಂತ್ರಿಕ ವಿಭಾಗ ಕೇಂದ್ರವು ನೆರವಾಗಲಿದೆ. ಇಲ್ಲಿ ನೂತನ ಬೈಕ್ ಗಳ ಅಭಿವೃದ್ಧಿಯು ಜರುಗಲಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಕ್ಲಾಸಿಕ್ ಲೆಜೆಂಡ್ಸ್ ಬಿಎಸ್ ಎ ಮತ್ತು ಜಾವಾ ಮರು ಆಗಮನದೊಂದಿಗೆ ದಿಚಕ್ರ ವಾಹನ ವಿಭಾಗದಲ್ಲಿ ಮಹೀಂದ್ರ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಮಹೀಂದ್ರ ಜನಪ್ರಿಯ ಮಾದರಿಗಳಾದ ಸೆಂಚುರೊ, ಗಸ್ಟೊ ಹಾಗೂ ಮೊಜೊ ನಿರ್ಮಾಣವಾಗುವ ಮಧ್ಯ ಪ್ರದೇಶದ ಘಟಕದಲ್ಲೇ ಜಾವಾ ಬೈಕ್ ಗಳ ನಿರ್ಮಾಣವಾಗಲಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

1950ರ ದಶಕದಲ್ಲಿ ಜಾವಾ ಮೋಟಾರ್ ಸೈಕಲ್ ಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಬಳಿಕ 1960ರ ದಶಕದಲ್ಲಿ ಮೈಸೂರು ತಳಹದಿಯ ಐಡಿಯಲ್ ಜಾವಾ ಇಂಡಿಯಾ ಲಿಮಿಟೆಡ್ ನಿರ್ಮಾಣವನ್ನು ಸ್ಥಳೀವವಾಗಿ ಆರಂಭಿಸಿತ್ತು.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಬೈಕ್ ಪ್ರೇಮಿಗಳು ಇಂದಿಗೂ ಜಾವಾ ಹಾಗೂ ಯೆಜ್ಡಿ ಬೈಕ್ ಗಳನ್ನು ಓಡಿಸುತ್ತಿದ್ದಾರೆ. ಇದು ಈ ಐಕಾನಿಕ್ ಬೈಕ್ ನ ಯಶಸ್ಸಿಗೆ ಕೈಗನ್ನಡಿಯಾಗಿದೆ.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಜಾವಾ ಆರಂಭಿಕ ಮಾದರಿಗಳು ಚೆಕೊಸ್ಲೊವೇಕಿಯಾದಲ್ಲಿ ಉತ್ಪಾದನೆಯಾಗಿದ್ದು, ಇಂಧನ ಟ್ಯಾಂಕ್ ಬದಿಯಲ್ಲಿ ಸಿಝಡ್ ಜಾವಾ ಲಾಂಛನವನ್ನು ಗಿಟ್ಟಿಸಿಕೊಂಡಿತ್ತು. ಭಾರತದಲ್ಲಿ ನಿರ್ಮಾಣವಾದ ಮಾಡೆಲ್ ಗಳು ಜಾವಾ ಲಾಂಛನದ ನಡುವೆ ಒ ಸಂಕೇತವನ್ನು ಪಡೆದಿತ್ತು.

ಐಕಾನಿಕ್ 'ಜಾವಾ' ಬೈಕ್ ಗಳಿಗೆ ಪುನರ್ಜ್ಮನ!

ಅಂತಿಮವಾಗಿ 1996ರಲ್ಲಿ ಸಂಸ್ಥೆಯು ನಿರ್ಮಾಣವನ್ನು ಕೊನೆಗೊಳಿಸಿತ್ತು. ಇದೀಗ ಮಹೀಂದ್ರ ಜಾವಾ ಬ್ರಾಂಡ್ ಹೆಸರಲ್ಲಿ ಮಾರಾಟ ಹಕ್ಕು ಗಿಟ್ಟಿಸಿಕೊಳ್ಳುವ ಮೂಲಕ ಮರು ಜೀವ ಪಡೆದಿದೆ.

English summary
Mahindra To Bring Back Iconic Jawa Motorcycles
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark