ಹೊಸ ಬಣ್ಣದಲ್ಲಿ ಕಂಗೊಳಿಸುತ್ತಿರುವ ಮಹೀಂದ್ರ ಮೊಜೊ

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ತನ್ನ ಜನಪ್ರಿಯ ಮೊಜೊ ಬೈಕ್ ಗೆ ಹೊಸ ಬಣ್ಣದ ಆಯ್ಕೆಯನ್ನು ಸೇರ್ಪಡೆಗೊಳಿಸಿದೆ. ಈ ಮೊದಲು 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಸನ್ ಬರ್ಸ್ಟ್ ಯಲ್ಲೊ (ಹಳದಿ)ಬಣ್ಣದೊಂದಿಗೆ ಕೂಡಿರುವ ಮಹೀಂದ್ರ ಮೊಜೊ ಬೈಕನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಬಣ್ಣದಲ್ಲಿ ಕಂಗೊಳಿಸುತ್ತಿರುವ ಮಹೀಂದ್ರ ಮೊಜೊ

ಇದರೊಂದಿಗೆ ಮಹೀಂದ್ರ ಮೊಜೊ ಬಣ್ಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವುಗಳೆಂದರೆ, ಕಪ್ಪು, ಬಿಳಿ, ಕೆಪ್ಪು-ಬಿಳಿ ಮತ್ತು ಸನ್ ಬರ್ಸ್ಟ್ ಯಲ್ಲೊ.

ಹೊಸ ಬಣ್ಣದಲ್ಲಿ ಕಂಗೊಳಿಸುತ್ತಿರುವ ಮಹೀಂದ್ರ ಮೊಜೊ

ಮಹೀಂದ್ರ ಮೊಜೊ ಕ್ರೀಡಾ ಬೈಕ್ ಗೆ ಹೊಸ ಬಣ್ಣವು ಮತ್ತಷ್ಟು ಹೊಳಪನ್ನು ತುಂಬಲಿದೆ. ಇದು ಕ್ರೀಡಾ ಬೈಕ್ ಪ್ರೇಮಿಗಳ ನೆಚ್ಚಿನ ಬಣ್ಣದ ಆಯ್ಕೆಯೂ ಸೇರ್ಪಡೆಯಾಗಿದೆ.

ಎಂಜಿನ್

ಎಂಜಿನ್

ವಿಧ: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಎಸ್ಐ ಎಂಜಿನ್, 1 ಸಿಲಿಂಡರ್, ಡಿಒಎಚ್ ಸಿ, ಇಎಫ್ ಐ

ಸಾಮರ್ಥ್ಯ: 295 ಸಿಸಿ

ಗರಿಷ್ಠ ಪವರ್: 20 ಕೆಡಬ್ಲ್ಯು @ 800 ಆರ್ ಪಿಎಂ

ಗರಿಷ್ಠ ತಿರುಗುಬಲ: 30 ಎನ್ ಎಂ @ 5500 ಆರ್ ಪಿಎಂ

ಸಸ್ಪೆನ್ಷನ್

ಸಸ್ಪೆನ್ಷನ್

ಮುಂಭಾಗ: ಅಪ್ ಸೈಡ್ ಡೌನ್ ಫಾರ್ಕ್, 143.5 ಎಂಎಂ ಟ್ರಾವೆಲ್

ಹಿಂಭಾಗ: ಹೈ ಪ್ರೆಶರ್ ಗ್ಯಾಸ್ ಚಾರ್ಜ್ಡ್ ಮೊನೊ ಶಾಕ್ ಜೊತೆ ಇಂಟರ್ನಲ್ ಫ್ಲೋಟಿಂಗ್ ಪಿಸ್ತನ್, 143 ಎಂಎಂ ಟ್ರಾವೆಲ್

ವಿಶಿಷ್ಟತೆಗಳು

ವಿಶಿಷ್ಟತೆಗಳು

ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸಾಲ್

ಟ್ವಿನ್ ಪೊಡ್ ಹೆಡ್ ಲ್ಯಾಂಪ್,

21 ಲೀಟರ್ ಇಂಧನ ಟ್ಯಾಂಕ್,

ಟ್ವಿನ್ ಎಕ್ಸಾಸ್ಟ್,

ಪೈರಲ್ಲಿ ಚಕ್ರಗಳು,

ಬ್ರೇಕ್

ಬ್ರೇಕ್

ಮುಂಭಾಗ: 320 ಎಂಎಂ ಡಿಸ್ಕ್ ಬ್ರೇಕ್

ಹಿಂಭಾಗ: 240 ಎಂಎಂ ಡಿಸ್ಕ್ ಬ್ರೇಕ್

ಆಯಾಮ

ಆಯಾಮ

ಉದ್ದ: 2100 ಎಂಎಂ

ಅಗಲ: 800 ಎಂಎಂ

ಎತ್ತರ: 1165.5 ಎಂಎಂ

ಸೀಟು ಎತ್ತರ: 814.5 ಎಂಎಂ

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ಬೆಂಗಳೂರು: 1,68,500 ರು.

ದೆಹಲಿ: 1,63,000 ರು.

ಮುಂಬೈ: 1,65,500 ರು.

ಪುಣೆ: 1,65,500 ರು.

ಹೊಸ ಬಣ್ಣದಲ್ಲಿ ಕಂಗೊಳಿಸುತ್ತಿರುವ ಮಹೀಂದ್ರ ಮೊಜೊ

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮೊಜೊಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಹಾಗಿದ್ದರೂ ಹೋಂಡಾ ಸಿಬಿಆರ್250ಆರ್, ಕೆಟಿಎಂ390 ಡ್ಯೂಕ್ ಮತ್ತು ರಾಯಲ್ ಎನ್ ಫೀಲ್ಡ್ 350 ಶ್ರೇಣಿಯ ಮಾದರಿಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ.

English summary
Mahindra Mojo Now Available In An All-New Colour Option
Story first published: Monday, November 14, 2016, 13:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark