ಮಹೀಂದ್ರ ವೆಬ್ ಸೈಟ್ ನಿಂದ ಮಾಯವಾದ ಡ್ಯುರೋ ಸ್ಕೂಟರ್

By Nagaraja

ಉಪಯಕ್ತ ವಾಹಗಳಿಗೆ ಹೋಲಿಸಿದಾಗ ದ್ವಿಚಕ್ರ ವಿಭಾಗದಲ್ಲಿ ಉತ್ತಮ ಮಾರಾಟ ಗಿಟ್ಟಿಸಕೊಳ್ಳಲು ಪೇಚಾಡುತ್ತಿರುವ ಮಹೀಂದ್ರ ಸಂಸ್ಥೆಯು, ತನ್ನ ಜನಪ್ರಿಯ ಡ್ಯುರೋ ಸ್ಕೂಟರ್ ಮಾದರಿಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆರವುಗೊಳಿಸಿದೆ.

ಮಹೀಂದ್ರ ಕೈಗೊಂಡಿರುವ ಇಂತಹದೊಂದು ನಡೆಯ ಹಿಂದಿರುವ ಗುಟ್ಟೇನು ಎಂಬುದು ತಿಳಿದು ಬಂದಿಲ್ಲ. ಆದರೆ ಡ್ಯುರೋ ಮಾರಾಟವಂತೂ ನಿಲುಗಡೆಗೊಂಡಿಲ್ಲ ಎಂಬುದು ತಿಳಿದು ಬಂದಿಲ್ಲ.

ಮಹೀಂದ್ರ ಡ್ಯುರೋ

ಡ್ಯುರೋ ಜೊತೆಗೆ ಗಸ್ಟೊ ಸ್ಕೂಟರ್ ಹಾಗೂ ಸೆಂಚರೊಗಳಂತಹ ಆಕರ್ಷಕ ಬೈಕನ್ನು ಮಹೀಂದ್ರ ಸಂಸ್ಥೆಯು ದೇಶದಲ್ಲಿ ಮಾರಾಟ ಮಾಡುತ್ತಿದೆ.

ಡ್ಯುರೋ ತಾಂತ್ರಿಕತೆ
ಎಂಜಿನ್: 124.6 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್,
ಅಶ್ವಶಕ್ತಿ: 8
ತಿರುಗುಬಲ: 9 ಎನ್‌ಎಂ

ದೇಶದ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಹಾಗೂ ಸುಜುಕಿ ಆಕ್ಸೆಸ್ 125 ಮಾದರಿಗಳಿಗೆ ಮಹೀಂದ್ರ ಡ್ಯುರೋ ಪ್ರತಿಸ್ಪರ್ಧಿಯಾಗಿದೆ. ಈಗ ಮಾರಾಟದ ವಿಚಾರದಲ್ಲಿ ಉಳಿಗಾಲದ ಭೀತಿ ಎದುರಿಸುತ್ತಿದೆ.

ಭಾರತಕ್ಕೆ ಸದ್ಯದಲ್ಲೇ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದ್ದು, ಈ ಎಲ್ಲ ಸನ್ನಿವೇಶಗಳು ಪರಿಸ್ಥಿತಿಯನ್ನು ಬದಲಾಯಿಸುವ ನಿರೀಕ್ಷೆಯನ್ನು ಹೊಂದಿದೆ. ಅಲ್ಲದೆ ಹೆಚ್ಚು ಶಕ್ತಿಶಾಲಿ ಮೊಜೊ ಬೈಕ್ ಅತಿ ಶೀಘ್ರದಲ್ಲೇ ಬಿಡುಗಡೆ ಕಾಣಲಿದೆ.

Most Read Articles

Kannada
English summary
They used to also sell their Duro scooter, which has been taken off their official India site. This could only mean that Mahindra has discontinued Duro scooter, to make for newer products.
Story first published: Saturday, July 4, 2015, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X