ದೀಪಾವಳಿ ಕೊಡುಗೆ; ಗಸ್ಟೊ ವಿಶೇಷ ಆವೃತ್ತಿ ಬಿಡುಗಡೆ
ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ಗಸ್ಟೊ ವಿಶೇಷ ಆವೃತ್ತಿಯ ಸ್ಕೂಟರನ್ನು ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 51,560 ರು. (ಎಕ್ಸ್ ಶೋ ರೂಂ ಮಹಾರಾಷ್ಟ್ರ)
ಮಹೀಂದ್ರ ಗಸ್ಟೊ ವಿಶೇಷ ಆವೃತ್ತಿಯು ವಿಎಕ್ಸ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಇದು ಟಾಪ್ ಎಂಡ್ ವೆರಿಯಂಟ್ ಆಗಿರಲಿದ್ದು, ಎಲ್ಲ ವೈಶಿಷ್ಟ್ಯಗಳನ್ನು ಪಡೆಯಲಿದೆ.

ವಿಶಿಷ್ಟತೆಗಳು
- ಎತ್ತರ ಹೊಂದಾಣಿಸಬಹುದಾದ ಸೀಟು,
- ರಿಮೋಟ್ ಪ್ಲಿಪ್ ಕೀ,
- ಫೈಂಡ್ ಮಿ ಲ್ಯಾಂಪ್,
- ಗೈಡ್ ಲ್ಯಾಂಪ್,
- ಟ್ಯೂಬ್ ಲೆಸ್ ಚಕ್ರ,
- ಟೆಲಿಸ್ಕಾಪಿಕ್ ಸಸ್ಪೆನ್ಷನ್ ಜೊತೆ ಏರ್ ಸ್ಪ್ರಿಂಗ್,
- ಫ್ರಂಟ್ ಕಿಕ್,
ತ್ವರಿತ ಸ್ಟೋರಿಜ್ ಬಳಕೆ
ವಿಶೇಷ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳು ಪ್ರಮುಖ ಆಕರ್ಷಣೆಯಾಗಲಿದೆ. ಇದು ಐಸ್ ಕೂಲ್ ರೆಡ್ ಮತ್ತು ಸಿಲ್ವರ್ ಮ್ಯಾಗೆಂಟಾ ಬಣ್ಣಗಳ ಆಯ್ಕೆಗಳು ಲಭ್ಯವಾಗಲಿದೆ. ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

- 109.6 ಸಿಸಿ ಸಿಂಗಲ್ ಸಿಲಂಡರ್ ಎಂಜಿನ್,
- 7.9 ಅಶ್ವಶಕ್ತಿ,
- 9 ಎನ್‌ಎಂ ತಿರುಗುಬಲ,
- ಸಿವಿಟಿ ಗೇರ್ ಬಾಕ್ಸ್
ಮೈಲೇಜ್: 63.7 ಕೀ.ಮೀ.
ಇದಲ್ಲದೆ ಉಚಿತ ವಿಮೆ ಸೇವೆಯನ್ನು ಮಹೀಂದ್ರ ನೀಡುತ್ತಿದೆ. ಈ ಮೂಲಕ ಗ್ರಾಹಕರು ತಮ್ಮ ಹಬ್ಬದ ಸಂಭ್ರಮಾಚರಣೆಯನ್ನು ಇಮ್ಮಡಿಯಾಗಿಸಬಹುದಾಗಿದೆ.


Click it and Unblock the Notifications








