ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ; ಎಕ್ಸ್ ಕ್ಲೂಸಿವ್ ವಿವರಗಳು
ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಅತಿ ನೂತನ ಮಹೀಂದ್ರ ಮೊಜೊ ಬೆಂಗಳೂರಿನಲ್ಲಿ ಮಾಧ್ಯಮ ಮಿತ್ರರಿಗಾಗಿ ಏರ್ಪಡಿಸಿರುವ ವಿಶೇಷ ಟೆಸ್ಟ್ ಡ್ರೈವ್ ನಲ್ಲಿ ಅನಾವರಣಗೊಂಡಿದೆ. ಈ ಸಂಬಂಧ ಎಕ್ಸ್ ಕ್ಲೂಸಿವ್ ಮಾಹಿತಿ ಹಾಗೂ ಚಿತ್ರಗಳನ್ನು ಬೈಕ್ ಪ್ರೇಮಿಗಳ ಜೊತೆ ಹಂಚಿಕೊಳ್ಳಲಿದ್ದೇವೆ.
ನಿಮ್ಮ ಮಾಹಿತಿಗಾಗಿ, ಮಹೀಂದ್ರ ಮೊಜೊ ಮೀಡಿಯಾ ಡ್ರೈವ್ ನಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರಾಗಿರುವ ಜೊಬೊ ಕುರುವಿಲ್ಲಾ ಸಹ ಭಾಗವಹಿಸುತ್ತಿದ್ದು, ಬೆಂಗಳೂರಿನಿಂದ ಕೂರ್ಗ್ ವರೆಗೆ ಸವಾರಿ ಹಮ್ಮಿಕೊಳ್ಳಲಾಗುವುದು. ಇನ್ನೇನು ಕೆಲವೇ ದಿನಗಳಲ್ಲಿ ಸಮಗ್ರ ಟೆಸ್ಟ್ ಡ್ರೈವ್ ವರದಿಯನ್ನು ನಾವು ಓದುಗರ ಮುಂದಿಡಲಿದ್ದೇವೆ. ಇದಕ್ಕಾಗಿ ಕಾದಿರಿ. ಈಗ ಮೊಜೊ ಬಗೆಗಿನ ಎಕ್ಸ್ ಕ್ಲೂಸಿವ್ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ವಿಶಿಷ್ಟತೆ
- ಟ್ವಿನ್ ಪೊಡ್ ಹೆಡ್ ಲ್ಯಾಂಪ್
- ಡೈ ಟೈಮ್ ರನ್ನಿಂಗ್ ಲೈಟ್ಸ್,
- ಶಕ್ತಿಯುತ ಇಂಧನ ಟ್ಯಾಂಕ್
- ಅಪ್ ಸೈಡ್ ಡೌನ್ ಫಾರ್ಕ್,
- ಕ್ರೀಡಾತ್ಮಕ ವಿನ್ಯಾಸ,
- ಟ್ವಿನ್ ಎಕ್ಸಾಸ್ಟ್,
- ಎಲ್‌ಇಡಿ ಟೈಲ್ ಲೈಟ್
- ಫ್ರಂಟ್ 320 ಎಂಎಂ
- ರಿಯರ್ 240 ಎಂಎಂ
- ಡಿಜಿಟಲ್ ಕನ್ಸೋಲ್,
- ಸ್ಟೈಲಿಷ್ ಟೈಲ್ ಲ್ಯಾಂಪ್,
- ಪೈರಲ್ಲಿ ಚಕ್ರಗಳು
- ವಿಧ: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಎಸ್ ಐ ಎಂಜಿನ್, 1 ಸಿಲಿಂಡರ್, ಡಿಒಎಚ್ ಸಿ
- ಸಾಮರ್ಥ್ಯ: 295 ಸಿಸಿ
- 20 ಕೆಡಬ್ಲ್ಯು, 30 ಎನ್ ಎಂ ತಿರುಗುಬಲ
- ಗೇರ್ ಬಾಕ್ಸ್: ಕಾಸ್ಟಂಟ್ ಮೆಶ್ 6 ಸ್ಪೀಡ್
- ಇಂಧನ ಟ್ಯಾಂಕ್ ಸಾಮರ್ಥ್ಯ: 21 ಲೀಟರ್
- ಮುಂಭಾಗ: ಅಪ್ ಸೈಡ್ ಡೌನ್ ಫಾರ್ಕ್,
- ಹಿಂಭಾಗ: ಹೈ ಪ್ರೆಶರ್ ಗ್ಯಾಸ್ ಚಾರ್ಜ್ಡ್ ಮೊನೊ ಶಾಕ್ ಜೊತೆ ಇಂಟರ್ನಲ್ ಫ್ಲೋಟಿಂಗ್ ಪಿಸ್ತಾನ್
- ಉದ್ದ: 2100 ಎಂಎಂ
- ಅಗಲ: 800 ಎಂಎಂ
- ಎತ್ತರ: 1165.5 ಎಂಎಂ
- ಸೀಟು ಎತ್ತರ: 814.5 ಎಂಎಂ

ಡಿಸ್ಕ್ ಬ್ರೇಕ್

ವಿಶಿಷ್ಟತೆ

ಎಂಜಿನ್

ಗೇರ್ ಬಾಕ್ಸ್, ಇಂಧನ ಟ್ಯಾಂಕ್

ಸಸ್ಪೆನ್ಷನ್

ಆಯಾಮ

ಅಂದಾಜು ಬೆಲೆ
ಹಾಗಿದ್ದರೂ ಬೆಲೆಯ ಬಗ್ಗೆ ವಿವರಗಳು ಬಿಡುಗಡೆ ವೇಳೆಯಷ್ಟೇ ಲಭ್ಯವಾಗಲಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ನೂತನ ಮಹೀಂದ್ರ ಮೊಜೊ 1.7 ಲಕ್ಷ ರು.ಗಳಿಂದ 1.9 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬುಕ್ಕಿಂಗ್ ಪ್ರಾರಂಭ
ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಶೋ ರೂಂ ಗಳಲ್ಲಿ 10,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಜೊತೆಗೆ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ, ಕವಾಸಕಿ ನಿಂಜಾ 300ಆರ್ ಹಾಗೂ ಸಿಬಿಆರ್250 ಆರ್ ಮಾದರಿಗಳಿಗೆ ಇದು ಪ್ರತಿಸ್ಪರ್ಧಿಯಾಗಲಿದೆ.


Click it and Unblock the Notifications








