ಮಹೀಂದ್ರ ಮೊಜೊಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಹೀಂದ್ರ ಮೊಜೊ ಬೈಕ್‌ಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪ್ರಮುಖವಾಗಿಯೂ ದೇಶದ ನಾಲ್ಕು ಮಹಾ ನಗರಗಳಲ್ಲಿ ಬೆಲೆ ಏರಿಕೆ ಕಂಡುಬಂದಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 1.58 ಲಕ್ಷ ರು.ಗಳಿಷ್ಟಿದ್ದ ಮಹೀಂದ್ರ ಮೊಜೊ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆಯೀಗ ಬದಲಾಗಿದ್ದು, ಮತ್ತಷ್ಟು 5,000 ರು.ಗಳಷ್ಟು ದುಬಾರಿಗೊಂಡು 1.63 ಲಕ್ಷ ರು.ಗಳಿಗೆ ತಲುಪಿದೆ.

ದೆಹಲಿ, ಮುಂಬೈ, ಪುಣೆ ಸೇರಿದಂತೆ ಬೆಂಗಳೂರಿನಲ್ಲಿ ತನ್ನ ಐಕಾನಿಕ್ ಮೊಜೊ ಬೈಕನ್ನು ಮಹೀಂದ್ರ ಮಾರಾಟ ಮಾಡುತ್ತಿದೆ. ಇದರಲ್ಲಿರುವ 295 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 30 ಎನ್ ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.
ಮಹೀಂದ್ರ ಮೊಜೊ ವಿಶಿಷ್ಟತೆ
- ವಿಶಿಷ್ಟತೆ ಟ್ವಿನ್ ಪೊಡ್ ಹೆಡ್ ಲ್ಯಾಂಪ್,
- ಡೈ ಟೈಮ್ ರನ್ನಿಂಗ್ ಲೈಟ್ಸ್,
- ಶಕ್ತಿಯುತ ಇಂಧನ ಟ್ಯಾಂಕ್ ಅಪ್ ಸೈಡ್ ಡೌನ್ ಫಾರ್ಕ್,
- ಕ್ರೀಡಾತ್ಮಕ ವಿನ್ಯಾಸ,
- ಟ್ವಿನ್ ಎಕ್ಸಾಸ್ಟ್,
- ಎಲ್‌ಇಡಿ ಟೈಲ್ ಲೈಟ್,
- ಡಿಜಿಟಲ್ ಕನ್ಸೋಲ್,
- ಸ್ಟೈಲಿಷ್ ಟೈಲ್ ಲ್ಯಾಂಪ್,
- ಪೈರಲ್ಲಿ ಚಕ್ರಗಳು


Click it and Unblock the Notifications








