ಮಹೀಂದ್ರ ಮೊಜೊ ವಿಮರ್ಶೆ; ಬ್ರಾಂಡ್ ಅಲ್ಲ ಗುಣಮಟ್ಟ ಮುಖ್ಯ!

By Nagaraja

ತಾಜಾ ಹಾಗೂ ನಾವೀನ್ಯ ಉತ್ಪನ್ನಗಳನ್ನು ಪರಿಚಯಿಸುತ್ತಲೇ ಬಂದಿರುವ ದೇಶದ ಮುಂಚೂಣಿಯ ಮಹೀಂದ್ರ ಸಂಸ್ಥೆಯು ವಾಹನ ಪ್ರೇಮಿಗಳಿಗಾಗಿ ಮಗದೊಂದು ಆಕರ್ಷಕ ಮೊಜೊ ಕ್ರೀಡಾ-ಪ್ರವಾಸಿ ಬೈಕ್ ಅನ್ನು ಮುಂದಿಟ್ಟಿದೆ. ದಶಕದಿಂದಲೂ 100 ಸಿಸಿ ಮೋಟಾರ್‌ಸೈಕಲ್ ವಿಭಾಗಕ್ಕೆ ಅಚ್ಚೊತ್ತಿ ನಿಂತಿರುವ ದೇಶದ ದ್ವಿಚಕ್ರ ವಿಭಾಗವೀಗ ನಿಧಾನವಾಗಿ ಎಂಟ್ರಿ ಲೆವೆಲ್ ಕ್ರೀಡಾ ವಿಭಾಗದತ್ತವೂ ಕಣ್ಣಾಯಿಸಿದೆ.

Also Read: 1.5 ಲಕ್ಷಕ್ಕೆ ಶಕ್ತಿಶಾಲಿ 200 ಸಿಸಿ ಬೈಕ್ಸ್; ಮುಂದಕ್ಕೆ ಓದಿ

ಅಷ್ಟಕ್ಕೂ ಕ್ರೀಡಾ ಬಳಕೆಯ ಕಾರು ನಿರ್ಮಾಣದಲ್ಲಿ ಹೆಸರು ಮಾಡಿರುವ ಮಹೀಂದ್ರ ಎಂಬ ಬೈಕ್ ಬ್ರಾಂಡ್ ವಾಹನ ಪ್ರೇಮಿಗಳನ್ನು ಎಷ್ಟರ ಮಟ್ಟಿಗೆ ಸೆಳೆಯಲಿದೇ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಮೊದಲ ಬಾರಿಗೆ ಈ ವಿಭಾಗದಲ್ಲಿ ಟ್ವಿನ್ ಪೊಡ್ ಹೆಡ್ ಲೈಟ್, ಅಪ್ ಸೈಡ್ ಡೌನ್ ಫಾರ್ಕ್, ಶಕ್ತಿಯುತ ಇಂಧನ ಟ್ಯಾಂಕ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಮುಂದೆ ಬಂದಿರುವ ಮಹೀಂದ್ರ ಮೊಜೊ 300 ಸಿಸಿ ಬೈಕ್ ಹೇಗೆ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಲ್ಲಲಿದೆ ಎಂಬುದನ್ನು ಸಂಪೂರ್ಣ ಚಾಲನಾ ವಿಮರ್ಶೆಯ ಮೂಲಕ ಉತ್ತರ ಕಂಡುಹುಡುಕುವ ಪ್ರಯತ್ನ ಮಾಡಲಿದ್ದೇವೆ.

ಎಲ್ಲಿಂದ ಎಲ್ಲಿಗೆ?

ಎಲ್ಲಿಂದ ಎಲ್ಲಿಗೆ?

ಮಾಧ್ಯಮ ಮಿತ್ರರಿಗಾಗಿ ಪ್ರತ್ಯೇಕ ಏರ್ಪಡಿಸಲಾಗಿದ್ದ ಮಹೀಂದ್ರ ಮೊಜೊ ಪ್ರಾಯೋಗಿಕ ಸಂಚಾರ ಪರೀಕ್ಷೆಯಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ತಂಡದ ಪ್ರಧಾನ ಸಂಪಾದಕರಾದ ಜೊಬೊ ಕುರುವಿಲ್ಲಾ ಅವರು ಸಹ ಭಾಗವಹಿಸಿದ್ದರು. ಇದರಂತೆ ಬೆಂಗಳೂರಿನಿಂದ ಕೂರ್ಗ್ ವರೆಗಿನ ನೈಜ ರಸ್ತೆ ಪರಿಸ್ಥಿತಿಯಲ್ಲಿ ಚಾಲನಾ ಪರೀಕ್ಷೆ ಮಾಡಲಾಗಿತ್ತು.

ವಿನ್ಯಾಸ

ವಿನ್ಯಾಸ

ಮಹೀಂದ್ರ ಮೊಜೊ ವಿನ್ಯಾಸದ ಬಗ್ಗೆ ಮೆಲುಕು ಹಾಕಿದಾಗ ಮೊದಲು ಕಂಡುಬರುವ ವಿಚಾರವೇ ಮುಂದುಗಡೆಯಿರುವ ಟ್ವಿನ್ ಪೊಡ್ ಹ್ಯಾಲಗನ್ ಹೆಡ್ ಲ್ಯಾಂಪ್. ಒಂದು ಸಾಮಾನ್ಯ ಬೈಕ್ ಗಿಂತಲೂ ವಿಭಿನ್ನವಾಗಿ ಈ ಡ್ಯುಯಲ್ ಹೆಡ್ ಲ್ಯಾಂಪ್ ಗಳು ಮುಂಭಾಗದಿಂದ ದೃಢವಾದ ರಸ್ತೆ ಸಾನಿಧ್ಯವನ್ನು ನೀಡುತ್ತದೆ.

ವಿನ್ಯಾಸ

ವಿನ್ಯಾಸ

ಸಹಜವಾಗಿಯೇ ವಿನ್ಯಾಸ ಅಂದ ಮೇಲೆ ಕೆಲವರಿಗೆ ಇಷ್ಟವಾಗಬಹುದು. ಇನ್ನು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ಇದು ಅವರವರ ವ್ಯಯಕ್ತಿಕ ಬಯಕೆಗಳಿಗೆ ಬಿಟ್ಟ ವಿಚಾರ. ಆದರೆ ಇಲ್ಲಿ ಮೊಜೊ ವಿಷಯವನ್ನು ಗಮನಕ್ಕೆ ತೆಗೆದುಕೊಂಡಾಗ ಯಾವುದೇ ಫಲಿತಾಂಶವನ್ನು (ಸೋಲು ಅಥವಾ ಗೆಲುವು) ದಿಟ್ಟವಾಗಿ ಸ್ವೀಕರಿಸುವ ಮನೋಭಾವದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಎಂಬುದು ಸಾಬೀತಾಗುತ್ತದೆ. ಇದಕ್ಕೆ ತಾಜಾತನ ತುಂಬುವ ಈ ಟ್ವಿನ್ ಪೊಡ್ ಹೆಡ್ ಲ್ಯಾಂಪ್ ಗಳೇ ಸಾಕ್ಷಿಯಾಗಿದೆ.

ವಿನ್ಯಾಸ

ವಿನ್ಯಾಸ

ಕೇವಲ ಟ್ವಿನ್ ಹೆಡ್ ಲ್ಯಾಂಪ್ ಮಾತ್ರವಲ್ಲದೆ ಇಂಧನ ಟ್ಯಾಂಕ್ ಕೆಳಗಡೆಯಿಂದ ಹಾದು ಹೋಗುವ ಬಂಗಾರ ಬಣ್ಣದ ಎರಡು ಕೊಳವೆಗಳು, ಮುಂದುಗಡೆ ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್ ಶಕ್ತಿಯುತ ವಿನ್ಯಾಸ ಪ್ರದಾನ ನೀಡುತ್ತದೆ.

ವಿನ್ಯಾಸ

ವಿನ್ಯಾಸ

ಇದಕ್ಕೆ ತಕ್ಕುದಾಗಿ ಎಲ್‌ಇಡಿ ಮಾರ್ಗದರ್ಶಿ ಬೆಳಕು, ಎಂಜಿನ್ ಗಾರ್ಡ್, ಫ್ರೇಮ್, ಸ್ವಿಂಗ್ ಆರ್ಮ್, ಟ್ವಿನ್ ಎಕ್ಸಾಸ್ಟ್ ಕೊಳವೆ ಹಾಗೂ ಏರ್ ಡಿಫ್ಲೆಕ್ಷನ್ ಜೋಡಣೆ ಮಾಡಲಾಗಿದ್ದ್ದು, ಅತ್ಯುತ್ತಮ ಚಾಲನಾ ಅನುಭವ ನಿಮ್ಮದಾಗಿಸಲಿದೆ.

ವಿನ್ಯಾಸ

ವಿನ್ಯಾಸ

  • ಬಂಗಾರ ವರ್ಣದ ಅಪ್ ಸೈಡ್ ಡೌನ್ ಫಾರ್ಕ್ (USD),
  • ಬಂಗಾರ ವರ್ಣದ ಜೋಡಿ ಕೊಳವೆ,
  • ಎಲ್‌ಇಡಿ ಡೇಟೈಮ್ ರನ್ನಿಂಗ್ ಹೆಡ್ ಲೈಟ್ (DRL),
  • ಫ್ರಂಟ್ ಡಿಸ್ಕ್ ಬ್ರೇಕ್ (320 ಎಂಎಂ),
  • ಟ್ವಿನ್ ಎಕ್ಸಾಸ್ಟ್ ಕೊಳವೆ
  • ಎಂಜಿನ್ ಮತ್ತು ಗೇರ್ ಬಾಕ್ಸ್

    ಎಂಜಿನ್ ಮತ್ತು ಗೇರ್ ಬಾಕ್ಸ್

    ಮಹೀಂದ್ರ ಮೊಜೊದಲ್ಲಿರುವ 295 ಸಿಸಿ 4 ವಾಲ್ವ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 30 ಎನ್‌ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿ ಉತ್ಪಾದಿಸಲಿದೆ.

    ಎಂಜಿನ್ ತಾಂತ್ರಿಕತೆ

    ಎಂಜಿನ್ ತಾಂತ್ರಿಕತೆ

    • ವಿಧ: ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, ಎಸ್ ಐ ಎಂಜಿನ್, 1 ಸಿಲಿಂಡರ್, ಡಿಒಎಚ್ ಸಿ
    • ಸಾಮರ್ಥ್ಯ: 295 ಸಿಸಿ
    • ಬೋರ್ X ಸ್ಟ್ರೋಕ್: 76 x 65 ಎಂಎಂ
    • ಒತ್ತುವಿಕೆ ಅನುಪಾತ: 11:1
    • ವಾಲ್ವ್: ಡಬಲ್ ಓವರ್ ಹೆಡ್ ಕ್ಯಾಮ್ ಶಾಫ್ಟ್ (DOHC)
    • ಇಂಧನ ವಿತರಣೆ: ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್
    • ಲ್ಯೂಬ್ರಿಕೇಷನ್ ಸಿಸ್ಟಂ: ವೆಟ್ ಸಂಪ್, ಫೋರ್ಸ್ಡ್ ಲ್ಯೂಬ್ರಿಕೇಷನ್
    • ಗೇರ್ ಬಾಕ್ಸ್: 6 ಸ್ಪೀಡ್ ಕೇಬಲ್ ಆಕ್ಯೂವೇಟಡ್ ವೆಟ್ ಕ್ಲಚ್
    • ಫೈನಲ್ ಡ್ರೈವ್: ಚೈನ್
    • ಎಂಜಿನ್ ನಿರ್ವಹಣೆ

      ಎಂಜಿನ್ ನಿರ್ವಹಣೆ

      2010ನೇ ಇಸವಿಯಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿದ್ದ ಮಹೀಂದ್ರ ಮೊಜೊ ಅಧ್ಯಯನ ಹಾಗೂ ಅಭಿವೃದ್ಧಿಯಲ್ಲಿ ಸಂಸ್ಥೆಯು ಐದು ವರ್ಷಗಳಷ್ಟು ದೀರ್ಘಾವಧಿಯನ್ನು ವ್ಯಯಿಸಿದೆ. ಈ ಎಲ್ಲ ಕಠಿಣ ಪ್ರಯತ್ನಕ್ಕೆ ತಕ್ಕ ಪ್ರತಿಫಲದ ರೂಪದಲ್ಲಿ ಮೊಜೊ ಹೊರಹೊಮ್ಮಿದೆ.

      ಎಂಜಿನ್ ನಿರ್ವಹಣೆ

      ಎಂಜಿನ್ ನಿರ್ವಹಣೆ

      ಮಹೀಂದ್ರ ಮೊಜೊ ಎಂಜಿನ್ ನಿಶಬ್ದವಾಗಿದ್ದರೂ ಕಡಿಮೆ ಗೇರ್ ನಲ್ಲಿ ಸ್ವಲ್ಪ ಹೆಚ್ಚು ಶಬ್ದವನ್ನುಂಟು ಮಾಡುತ್ತದೆ. ಇನ್ನು ವೇಗವರ್ಧನೆಯು ಪರಿಣಾಮಕಾರಿಯಾಗಿದ್ದು, 4500ರಿಂದ 6500 ಆರ್‌ಪಿಎಂನಲ್ಲಿ 100ರಿಂದ 120 ಕೀ.ಮೀ. ವೇಗದಲ್ಲಿ ಸರಾಗವಾಗಿ ಸಾಗಬಹುದಾಗಿದೆ.

      ಇಂಧನ ಕ್ಷಮತೆ

      ಇಂಧನ ಕ್ಷಮತೆ

      ಪರಿಪೂರ್ಣ ಟೂರಿಂಗ್ ಬೈಕ್‌ಗೆ ತಕ್ಕುದಾಗಿ ನೂತನ ಮಹೀಂದ್ರ ಮೊಜೊ 21 ಲೀಟರ್ ಇಂಧನ ಟ್ಯಾಂಕ್ ಪಡೆದುಕೊಂಡಿದೆ. ಇನ್ನು ಮುಂಭಾಗದಲ್ಲಿರುವ ಏರ್ ಡಿಫ್ಲೆಕ್ಷನ್ ವ್ಯವಸ್ಥೆಯು 500 ಕೀ.ಮೀ. ದೂರದ ವರೆಗಿನ ಪಯಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ರೇಡಿಯೇಟರ್ ಬಿಸಿ ಹೆಚ್ಚಿದಾಗ ನಿಯಂತ್ರಿಸಲು ಸಹಕಾರಿಯಾಗುತ್ತದೆ.

      ಇಂಧನ ಕ್ಷಮತೆ

      ಇಂಧನ ಕ್ಷಮತೆ

      ಕಡಿದಾದ ತಿರುವು, ನೇರ ರಸ್ತೆ, ಹೈ ಸ್ಪೀಡ್ ಗಳಿಂದ ಕೂಡಿದ ಈ ಪಯಣದಲ್ಲಿ ಮಹೀಂದ್ರ ಮೊಜೊ ಸಂಪೂರ್ಣ ಟ್ಯಾಂಕ್ ನಲ್ಲಿ 400 ಕೀ.ಮೀ. ಕ್ರಮಿಸಲು ಸಾಧ್ಯವಾಗಿತ್ತು.

      • ಇಂಧನ ಟ್ಯಾಂಕ್ ಸಾಮರ್ಥ್ಯ: 21 ಲೀಟರ್
      • ರಿಸರ್ವ್ ಟ್ಯಾಂಕ್: 3 ಲೀಟರ್
      • ಗರಿಷ್ಠ ವೇಗ: 149 ಕೀ.ಮೀ.
      • ಮೈಲೇಜ್

        ಮೈಲೇಜ್

        ಒಟ್ಟಾರೆ ಮಹೀಂದ್ರ ಮೊಜೊ ಪ್ರತಿ ಲೀಟರ್ ಗೆ 20 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ನಿಮ್ಮ ಮಾಹಿತಿಗಾಗಿ ಭಾರತೀಯ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಮೊಜೊ ಪ್ರತಿ ಲೀಟರ್ ಗೆ 35 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

        ಅನುಕೂಲತೆ

        ಅನುಕೂಲತೆ

        ಆರಂಭದಲ್ಲೇ ಸೂಚಸಿರುವಂತೆಯೇ ಮಹೀಂದ್ರ ಮೊಜೊ ಪರಿಪೂರ್ಣ ಟೂರಿಂಗ್ ಬೈಕ್ ಆಗಿದ್ದು, ದೈನಂದಿನ ಚಾಲನೆಗೆ ಹೇಳಿ ಮಾಡಿಸಿದ್ದಲ್ಲ. ನಿಮ್ಮ ಪ್ರವಾಸವನ್ನು ಮೊಜೊ ಅತ್ಯುತ್ತಮ ಹ್ಯಾಂಡ್ಲಿಂಗ್ ಜೊತೆಗೆ ಹೆಚ್ಚು ಆನಂದದಾಯಕವಾಗಿಸಬಹುದಾಗಿದೆ.

        ಭಾರ, ನಿಭಾಯಿಸುವುದು

        ಭಾರ, ನಿಭಾಯಿಸುವುದು

        ಪಾರ್ಕಿಂಗ್ ಮಾಡುವಾಗ 160 ಕೆ.ಜಿ ತೂಕದ ಮಹೀಂದ್ರ ಮೊಜೊ ನಿಭಾಯಿಸುವುದು ಸ್ವಲ್ಪ ಕಷ್ಟವೆನಿಸಬಹುದು. ಅಂತೆಯೇ ಕಡಿಮೆ ಎತ್ತರದ ವ್ಯಕ್ತಿಗಳಿಗೆ ಬೈಕ್ ನಲ್ಲಿ ಕುಳಿತುಕೊಂಡು ಸಂಪೂರ್ಣವಾಗಿ ಎರಡೂ ಪಾದಗಳನ್ನು ನೆಲಕ್ಕಿರಿಸಲು ಕಷ್ಟವಾಗಬಹುದು. ಆದರೆ ಇದೊಂದು ಕೊರತೆಯಲ್ಲ. ಬದಲಾಗಿ ಒಮ್ಮೆ ಬೈಕ್ ಸ್ಟ್ಯಾರ್ಟ್ ಮಾಡಿ ಮುಂದಕ್ಕೆ ಚಲಿಸಿದಾಗ ನಿಮ್ಮ ಮೊಜೊ ಅತ್ಯುತ್ತಮ ನಿಯಂತ್ರಣವನ್ನು ಒದಗಿಸಲಿದೆ.

        ಹ್ಯಾಂಡ್ಲಿಂಗ್

        ಹ್ಯಾಂಡ್ಲಿಂಗ್

        ಕಡಿದಾದ ತಿರುವಿನಲ್ಲೂ ಮಹೀಂದ್ರ ಮೊಜೊ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತದೆ. ಒಟ್ಟಾರೆ ನಿರ್ವಹಣೆಯಿಂದ ಹಿಡಿದು ಹ್ಯಾಂಡ್ಲಿಂಗ್ ವರೆಗೂ ಮೊಜೊ ಸಾಮರ್ಥ್ಯವನ್ನು ಎತ್ತಿ ಹಿಡಿಯಬೇಕಾಗುತ್ತದೆ.

        ಚಾಲನಾ ಸ್ಥಾನ

        ಚಾಲನಾ ಸ್ಥಾನ

        ಒಟ್ಟಾರೆ ಚಾಲನಾ ಸ್ಥಾನ ತೃಪ್ತಿದಾಯಕವಾಗಿದ್ದು, ಮೃದುವಾದ ಸೀಟುಗಳನ್ನು ಪಡೆದುಕೊಂಡಿದೆ. ಅತ್ಯಮತ್ತಮ ಚಾಲನಾ ಸ್ಥಾನದ ನಿಟ್ಟಿನಲ್ಲಿ ಹ್ಯಾಂಡಲ್ ಬಾರ್-ಸೀಟ್-ಫೂಟ್ ಪೆಗ್ ಸ್ಥಾನವು ತ್ರಿಕೋನಕೃತಿಯಲ್ಲಿರಬೇಕು. ಆದರೆ ಇಲ್ಲಿ ಹ್ಯಾಂಡಲ್ ಬಾರ್-ಸೀಟ್-ಫೂಟ್ ಪೆಗ್ ಸ್ಥಾನವು ಎತ್ತರದ ಸವಾರರಿಗೆ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿಯನ್ನುಂಟು ಮಾಡುತ್ತದೆ. ಇಲ್ಲಿ ಸೀಟಿನಿಂದ ಫೂಟ್ ಪೆಗ್ ವರೆಗಿನ ಕೋನವು ಸ್ವಲ್ಪ ನಿಕಟವಾಗಿರುವುದರಿಂದ 500 ಕೀ.ಮೀ.ಗಳಷ್ಟು ದೂರವನ್ನು ಸಂಚರಿಸಿದಾಗ ಎತ್ತರದ ಸವಾರರ ಮೊಣಕಾಲಿನಲ್ಲಿ ನೋವನ್ನುಂಟು ಮಾಡುತ್ತದೆ. ಈ ಸಂಬಂಧ ನಮ್ಮ ಪ್ರತಿಕ್ರಿಯೆಯನ್ನು ಮಹೀಂದ್ರ ಸಂಸ್ಥೆಯ ಜೊತೆ ಹಂಚಿಕೊಂಡಿದ್ದು, ಫೂಟ್ ಪೆಗ್ ಸ್ಥಾನವನ್ನು ಇನ್ನು ಸ್ವಲ್ಪ ಹಿಂದಕ್ಕೆ ಜೋಡಣೆ ಮಾಡುವುದು ಅಥವಾ ಕಸ್ಟಮೈಸ್ಡ್ ಸೀಟು ಆಯ್ಕೆ (ಎತ್ತರದ ಸೀಟು) ಮೂಲಕ ಈ ತೊಂದರೆಯನ್ನು ಸರಿಪಡಿಸಬಹುದಾಗಿದೆ.

        ಹಿಂಬದಿ ಸವಾರ

        ಹಿಂಬದಿ ಸವಾರ

        ಮೊಜೊ ಆಸನ ವಿನ್ಯಾಸದಿಂದಲೇ ತಿಳಿದು ಬರುವ ವಿಚಾರವೇನೆಂದರೆ ಹಿಂಬದಿ ಸವಾರರಿಗೂ ಮಹೀಂದ್ರ ಆದ್ಯತೆ ಕೊಟ್ಟಿದೆ. ಅಲ್ಲದೆ ಹಿಂಬದಿ ಸವಾರರಿಗೂ ಫೂಟ್ ಪೆಗ್ ಆಯ್ಕೆಯನ್ನು ನೀಡಿರುವುದು ಹೆಚ್ಚು ಆರಾಮದಾಯಕ ಚಾಲನೆ ನೀಡುತ್ತದೆ.

        ಸಸ್ಪೆನ್ಷನ್

        ಸಸ್ಪೆನ್ಷನ್

        ಮಹೀಂದ್ರ ಮೊಜೊ ಸಸ್ಪೆನ್ಷನ್ ಗಾಡಿಗೆ ಅತ್ಯುತ್ತಮ ಸಮತೋಲವನ್ನು ಕಾಪಾಡಿಕೊಂಡಿದೆ. 169 ಕೆ.ಜಿ ತೂಕ, 21 ಲೀಟರ್ ಇಂಧನ ಟ್ಯಾಂಕ್ ಹೊರತಾಗಿಯೂ ಈ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಅತ್ಯುತ್ತಮ ನಿಯಂತ್ರಣವನ್ನು ಒದಗಿಸುತ್ತದೆ.

        ಸಸ್ಪೆನ್ಷನ್

        ಸಸ್ಪೆನ್ಷನ್

        ಮಹೀಂದ್ರ ಮೊಜೊದಲ್ಲಿ ಇನ್ವರ್ಟಡ್ ಫ್ರಂಟ್ ಸಸ್ಪೆನ್ಷನ್ ಮತ್ತು ರಿಯರ್ ಮೊನೊ ಶಾಕ್ ಸಸ್ಪೆನ್ಷನ್ ಬಳಕೆ ಮಾಡಲಾಗಿದೆ. ಒಟ್ಟಾರೆ ಸಸ್ಪೆನ್ಷನ್ ತಂತ್ರಗಾರಿಕೆ ಮೆಚ್ಚುಗೆಗೆ ಪಾತ್ರವಾಗಿದೆ.

        ಬ್ರೇಕ್

        ಬ್ರೇಕ್

        ಶಕ್ತಿಯುತ ಬ್ರೇಕ್ ಮಹೀಂದ್ರ ಮೊಜೊದಾಗಿದ್ದು, ಸಿಂಗಲ್ ಫ್ರಂಟ್ ಡಿಸ್ಕ್ (320ಎಂಎಂ) ಜೊತೆ ಫೋರ್ ಪಿಸ್ತಾನ್ ರೇಡಿಯಲ್ ಕ್ಯಾಲಿಪರ್ ಮತ್ತು ಸಿಂಗಲ್ ರಿಯರ್ (240ಎಂಎಂ) ಟು ಪಿಸ್ತಾನ್ ಫ್ಲೋಟಿಂಗ್ ಕ್ಯಾಲಿಪರ್ ಬಳಕೆ ಮಾಡಲಾಗಿದೆ.

        ಬ್ರೇಕ್

        ಬ್ರೇಕ್

        ನಿಖರವಾದ ಬ್ರೇಕಿಂಗ್ ತಂತ್ರಜ್ಞಾನ ಮಹೀಂದ್ರ ಮೊಜೊ ವಿಶ್ಲೇಷಕಿರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ನಿಕಟ ಭವಿಷ್ಯದಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆಯು (ಎಬಿಎಸ್) ಲಭ್ಯವಾಗಲಿದೆ.

        ಚಕ್ರಗಳು

        ಚಕ್ರಗಳು

        ವಿಶ್ವ ದರ್ಜೆಯ ಪೈರಲ್ಲಿ ಚಕ್ರಗಳು ಮಹೀಂದ್ರ ಮೊಜೊ ಹ್ಯಾಂಡ್ಲಿಂಗ್ ಪರಿಪೂರ್ಣವಾಗಿಸುತ್ತದೆ.

        • ಮುಂಭಾಗದ ಚಕ್ರ: 110/70-R17
        • ಹಿಂಭಾಗದ ಚಕ್ರ: 150/60-R17
        • ವೈಶಿಷ್ಟ್ಯಗಳು - ಟ್ವಿನ್ ಹೆಡ್ ಲ್ಯಾಂಪ್

          ವೈಶಿಷ್ಟ್ಯಗಳು - ಟ್ವಿನ್ ಹೆಡ್ ಲ್ಯಾಂಪ್

          ಕೆಲವು ಅತಿ ಮುಖ್ಯ ವೈಶಿಷ್ಟ್ಯಗಳನ್ನು ತುಲನೆ ಮಾಡಿದಾಗ ಟ್ವಿನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಮಾರ್ಗದರ್ಶಿ, ಟೈಲ್ ಲ್ಯಾಂಪ್ ಜೊತೆ ಎಂಟು ಎಲ್‌ಇಡಿ, ಬ್ರೇಕ್ ಲೈಟ್ ಜೊತೆ 12 ಎಲ್‌ಇಡಿ ಬೆಳಕಿನ ವ್ಯವಸ್ಥೆ ಪ್ರಮುಖವೆನಿಸುತ್ತದೆ.

          ವೈಶಿಷ್ಟ್ಯಗಳು - ಸ್ಪೀಡೋಮೀಟರ್

          ವೈಶಿಷ್ಟ್ಯಗಳು - ಸ್ಪೀಡೋಮೀಟರ್

          ಕ್ರೀಡಾತ್ಮಕ, ಕಾಂಪಾಕ್ಟ್ ಸ್ಪೀಡೋಮೀಟರ್ ಕ್ಲಸ್ಟರ್ ಮಗದೊಂದು ಮುಖ್ಯ ಘಟಕವಾಗಿದ್ದು, ಇದರಲ್ಲಿ ಡ್ಯುಯಲ್ ಟ್ರಿಪ್ ಮೀಟರ್, ಗರಿಷ್ಠ ವೇಗ ಸೂಚಕ ಇರಲಿದೆ.

          ಸುರಕ್ಷತೆ - ಲಿಂಪ್-ಹೋಮ್ ಮೋಡ್

          ಸುರಕ್ಷತೆ - ಲಿಂಪ್-ಹೋಮ್ ಮೋಡ್

          ಸುರಕ್ಷತೆಯಲ್ಲಿ ಲಿಂಪ್-ಹೋಮ್ ಮೋಡ್ ಪ್ರಮುಖವಾಗಿದ್ದು, ಎಂಜಿನ್ ನಲ್ಲಿ ಯಾವುದೇ ದೋಷ ಸಂಭವಿಸಿದ್ದಲ್ಲಿ, ಎಂಜಿನ್ ಕಂಟ್ರೋಲ್ ಯುನಿಟ್ (ECU) ತಕ್ಷಣ ಪತ್ತೆ ಹಚ್ಚಿ ಬೈಕ್ ಗಂಟೆಗೆ 60 ಕೀ.ಮೀ. (5000rpm) ಹೆಚ್ಚಿನ ವೇಗದಲ್ಲಿ ಸಂಚರಿಸದಂತೆ ನಿಯಂತ್ರಣ ಹೇರಲಿದೆ. ಈ ಮೂಲಕ ಮಾಲಿಕನನ್ನು ಎಚ್ಚರಿಸಲಿದೆ.

          ಸುರಕ್ಷತೆ - ರೋಲ್ ಓವರ್ ಸೆನ್ಸಾರ್ ತಂತ್ರಜ್ಞಾನ

          ಸುರಕ್ಷತೆ - ರೋಲ್ ಓವರ್ ಸೆನ್ಸಾರ್ ತಂತ್ರಜ್ಞಾನ

          ಮಹೀಂದ್ರ ರೋಲ್ ಓವರ್ ಸೆನ್ಸಾರ್ ತಂತ್ರಜ್ಞಾನದ ಮುಖಾಂತರ ಗಾಡಿ ಮಗುಚಿದ್ದಲ್ಲಿ ತಕ್ಷಣ ಗಾಡಿ ಆಫ್ ಆಗಲಿದೆ.

          ಧನಾತ್ಮಕ ಅಂಶಗಳು

          ಧನಾತ್ಮಕ ಅಂಶಗಳು

          • ಗರಿಷ್ಠ ವೇಗದಲ್ಲೂ ಸ್ಥಿರತೆ,
          • ಬ್ರೈಡಡ್ ಬ್ರೇಕ್ ಲೈನ್ಸ್,
          • ಅತ್ಯುತ್ತಮ ಪವರ್,
          • ನಯವಾದ ಹಾಗೂ ಶಬ್ದರಹಿತ ಎಂಜಿನ್,
          • ಪೈರಲ್ಲಿ ಡಯಾಬ್ಲೊ ರೊಸ್ಸೊ II ಚಕ್ರ (ಪರಿಣಾಮಕಾರಿ ಗ್ರಿಪ್),
          • ಫ್ರಂಟ್ ಮತ್ತು ರಿಯರ್ ಮೊನೊ ಶಾಕ್ ಸಸ್ಪೆನ್ಷನ್,
          • ಶಕ್ತಿಶಾಲಿ ಬ್ರೇಕ್ (ಹಿಂಭಾಗದ ಬ್ರೇಕ್),
          • ವಿಶಿಷ್ಟತೆಗಳು (ಗರಿಷ್ಠ ವೇಗ ಮಾಪಕ, ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್)
          • ಟ್ವಿನ್ ಎಕ್ಸಾಸ್ಟ್ ಜೊತೆಗೆ ಮಫ್ಲರ್ '
          • ಹಿನ್ನಡೆ

            ಹಿನ್ನಡೆ

            • ಸೀಟು ಎತ್ತರ (ತ್ರಿಕೋನ)
            • ಕಡಿಮೆ ಗೇರ್ ನಲ್ಲಿ ಶಬ್ದ ಜಾಸ್ತಿ
            • ಇಂಧನ ಖಾಲಿ ಕೊರತೆ
            • ಅಂತಿಮ ತೀರ್ಪು

              ಅಂತಿಮ ತೀರ್ಪು

              ನಿರ್ವಹಣಾ ಬೈಕ್ ವಿಭಾಗದಲ್ಲಿ ಕೆಟಿಎಂ ಡ್ಯೂಕ್ 390 ಜೊತೆ ನೂತನ ಮೊಜೊ ಸ್ವಲ್ಪ ಹಿಂದೆ ಬಿದ್ದಿರಬಹುದು. ಆದರೆ 300 ಸಿಸಿ ವಿಭಾಗದಲ್ಲಿ ಸದ್ಯ ದೇಶದಲ್ಲಿ ಲಭ್ಯವಿರುವ ಏಕ ಮಾತ್ರ ಸ್ಪೋರ್ಟ್ಸ್ ಟೂರರ್ ಬೈಕ್ ಎಂಬ ಗೌರವಕ್ಕೆ ಪಾತ್ರವಾಗಿರುವ ಮೊಜೊ ಬ್ರೇಕಿಂಗ್, ಹ್ಯಾಂಡ್ಲಿಂಗ್ ಹಾಗೂ ಕ್ರೂಸಿಂಗ್ ಸಾಮರ್ಥ್ಯಕ್ಕೆ ಎರಡು ಮಾತೇ ಇಲ್ಲ. ಇದೇ ಕಾರಣಕ್ಕಾಗಿ ನೀವು ಒಂದು ಬ್ರಾಂಡ್ ಆಗಿ ಮಹೀಂದ್ರ ಉತ್ಪನ್ನಗಳನ್ನು (ದ್ವಿಚಕ್ರ) ಖರೀದಿಸಲು ಹಿಂದೇಟು ಹಾಕುವ ಬದಲು ಬೈಕ್ ಗುಣಮಟ್ಟತೆಗೆ ಆದ್ಯತೆ ಕೊಡುವುದಾದ್ದಲ್ಲಿ ಮಹೀಂದ್ರ ಮೊಜೊ ಪರಿಪೂರ್ಣ ಆಯ್ಕೆಯಾಗಿರಲಿದೆ.

              ಬೆಲೆ, ಬಿಡುಗಡೆ

              ಬೆಲೆ, ಬಿಡುಗಡೆ

              ಪ್ರತಿಯೊಂದು ನಿರ್ವಹಣಾ ಬೈಕ್ ತರಹನೇ ಮಹೀಂದ್ರ ಮೊಜೊ ಸ್ಪರ್ಧಾತ್ಮಕ ಬೆಲೆಯು ಅತಿ ನಿರ್ಣಾಯಕವೆನಿಸಲಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ 1.8 ಲಕ್ಷ ರು.ಗಳ ಅಸುಪಾಸಿನಲ್ಲಿ ನೂತನ ಮೊಜೊ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ಕೆಟಿಎಂ 390 ಡ್ಯೂಕ್ ಗಿಂತ ಸರಿ ಸುಮಾರು 50,000 ರು.ಗಿಂತಲೂ ಕಡಿಮೆ ಬೆಲೆ ಆಗಿರಲಿದೆ. ಒಟ್ಟಿನಲ್ಲಿ ಹೊಸತನ ಬಯಸುವ ಬೈಕ್ ಪ್ರೇಮಿಗಳಿಗೆ ತಾಜಾತನದ ಅನುಭವ ನೀಡಲಿದೆ ಎಂಬುದಂತೂ ಗ್ಯಾರಂಟಿ! ಹ್ಯಾಪಿ ರೈಡಿಂಗ್!

              ಬಿಡುಗಡೆ: 2015 ಅಕ್ಟೋಬರ್ 16

              ಮಹೀಂದ್ರ ಮೊಜೊ; ಸಂಪೂರ್ಣ ಚಾಲನಾ ವಿಮರ್ಶೆ

              ಮಹೀಂದ್ರ ಮೊಜೊ ರೇಟಿಂಗ್


Most Read Articles

Kannada
English summary
Mahindra’s Sports-Tourer (300cc) For India. Stylish, But Is It Worth The Money?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X