ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಐನಾನಿಕ್ ಬ್ರಾಂಡ್ ಯೆಜ್ಡಿ ದೇಶಿಯ ಮಾರುಕಟ್ಟೆಗೆ ಮರಳಿ ಪ್ರವೇಶಿಸಿದ್ದು, ವಿನೂತನ ಮೂರು ಹೊಸ ಮೋಟಾರ್‌ಸೈಕಲ್ ಮಾದರಿಗಳೊಂದಿಗೆ ಯೆಜ್ಡಿ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೂ ಹೊಸ ರೂಪ ನೀಡಿದ್ದು, ಯೆಜ್ಡಿ ಹೊಸ ಬೈಕ್‌ಗಳಲ್ಲಿ ರೋಡ್‌ಸ್ಟರ್ ಕೂಡಾ ಪ್ರಮುಖವಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

90ರ ದಶಕದಲ್ಲಿ ಬೈಕ್ ಪ್ರಿಯರ ಆಯ್ಕೆಯಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದ ಕಾರಣಾಂತರಗಳಿಂದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಇದೀಗ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಮೂರು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಡ್ರೈವ್‌ಸ್ಪಾರ್ಕ್ ತಂಡವು ಮೂರು ಬೈಕ್ ಮಾದರಿಗಳನ್ನು ಪ್ರತ್ಯೇಕವಾಗಿ ಚಾಲನೆ ಮಾಡುವ ಮೂಲಕ ವಿವಿಧ ಮಾದರಿಗಳ ಕಾರ್ಯಕ್ಷಮತೆ ಕುರಿತಾಗಿ ಪ್ರತ್ಯೇಕವಾದ ವಿಮರ್ಶೆ ಲೇಖನಗಳನ್ನು ಪ್ರಕಟಿಸಿದೆ. ಮೊದಲ ವಿಮರ್ಶೆ ಲೇಖನದಲ್ಲಿ ಯೆಜ್ಡಿ ಅಡ್ವೆಂಚರ್, ಎರಡನೇ ವಿಮರ್ಶೆಯಲ್ಲಿ ಯೆಜ್ಡಿ ಸ್ಕ್ರ್ಯಾಂಬ್ಲರ್ ಮಾದರಿಯನ್ನು ಮತ್ತು ಮೂರನೇ ಲೇಖನದಲ್ಲಿ ಯೆಜ್ಡಿ ರೋಡ್‌ಸ್ಟರ್ ಮಾದರಿಯಾಗಿ ಕುರಿತಾಗಿ ವಿಸ್ತೃತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ರೋಡ್‌ಸ್ಟರ್ ವಿನ್ಯಾಸ ಮತ್ತು ಶೈಲಿ

ನಿಸ್ಸಂಶಯವಾಗಿ ಹೇಳುವುದಾರರೇ ಹೊಸ ಯೆಜ್ಡಿ ರೋಡ್‌ಸ್ಟರ್ ಸುಧಾರಿತ ವಿನ್ಯಾಸ ಸ್ಫೂರ್ತಿಯನ್ನು ಈ ಹಿಂದಿನ ಯೆಜ್ಡಿ ರೋಡ್‌ಕಿಂಗ್‌ ಮಾದರಿಯನ್ನು ಪಡೆಯಲಾಗಿದೆ ಎನ್ನಬಹುದು. ಒಟ್ಟಾರೆ ಇದರ ವಿನ್ಯಾಸ ಮತ್ತು ಸಿಲೂಯೆಟ್ ರೋಡ್‌ಕಿಂಗ್ ಮಾದರಿಯನ್ನು ನೆನಪಿಸಲಿದ್ದು, ವೃತ್ತಾಕಾರವಾದ ಹೆಡ್‌ಲ್ಯಾಂಪ್, ಎಲ್ಇಡಿ ಯನಿಟ್‌ಗಳು, ಲೋ ಭೀಮ್ ಮತ್ತು ಹೈ ಭೀಮ್‌ಗಳ ನಡುವೆ ಯೆಜ್ಡಿ ಲೋಗೋ ಸಂಯೋಜಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಹೊಸ ಬೈಕಿನ ಫೋರ್ಕ್ ಮತ್ತು ಹ್ಯಾಂಡಲ್‌ಬಾರ್ ತುಸು ಮೇಲ್ಮುಖವಾಗಿದ್ದು, ಬೈಕ್ ವಿನ್ಯಾಸಕಾರರು ಹೊಸ ಮಾದರಿಯಲ್ಲಿ ಐಕಾನಿಕ್ ರೋಡ್‌ಕಿಂಗ್‌ ಸವಾರಿ ಸ್ಥಾನವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಬಹುದು. ಹಾಗೆಯೇ ಹೊಸ ಬೈಕಿನ ಹೆಡ್‌ಲ್ಯಾಂಪ್‌ನ ಮೇಲೆ ಕ್ರೋಮ್ ಸರೌಂಡ್ ಹೊಂದಿರುವ ವೃತ್ತಾಕಾರದ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಇರಿಸಲಾಗಿದ್ದು, ಹೆಡ್‌ಲ್ಯಾಂಪ್ ಸರೌಂಡ್ ಮತ್ತು ಹ್ಯಾಂಡಲ್‌ಬಾರ್ ಅನ್ನು ಸಹ ಕ್ರೋಮ್‌ ಮೂಲಕವೇ ಪೂರ್ಣಗೊಳಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ತದನಂತರ ಬೈಕಿನ ಇಂಧನ ಟ್ಯಾಂಕ್ ಕೂಡಾ ಹಳೆಯ ರೋಡ್‌ಕಿಂಗ್‌ ಮಾದರಿಯಂತೆ ತುಸು ಎತ್ತಲ್ಪಟ್ಟಂತೆ ತೋರಲಿದ್ದು, ಅದರ ದುಂಡಾಕಾರವಾಗಿರುವ ಅಂಚುಗಳು ಮತ್ತು ರೆಟ್ರೋ ವಿನ್ಯಾಸವು ಇಂಧನ ಟ್ಯಾಂಕ್‌ಗೆ ಗಮನಾರ್ಹ ಹೋಲಿಕೆಯನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಇದರೊಂದಿಗೆ ಹೊಸ ಬೈಕಿನ ರೇಡಿಯೇಟರ್ ತುಸು ದೊಡ್ಡ ಗಾತ್ರದೊಂದಿಗೆ ಗಮನ ಸೆಳೆಯಲಿದ್ದು, ಕೆಲವು ಆಸಕ್ತಿದಾಯಕ ತಂತ್ರಜ್ಞಾನವು ಇದರಲ್ಲಿ ಜೋಡಣೆಯಾಗಿದ್ದು, ಕಡಿಮೆ ಎತ್ತರದ ಆಸನ ಸ್ಥಾನದೊಂದಿಗೆ ಅತ್ಯುತ್ತಮ ರೈಡಿಂಗ್ ಶೈಲಿಯನ್ನು ಒದಗಿಸುತ್ತದೆ. ಹೊಸ ಬೈಕಿನಲ್ಲಿ ಸಿಂಗಲ್-ಪೀಸ್ ಸೀಟನ್ನು ಹೊಂದಿದ್ದು, ಪಿಲಿಯನ್ ರೈಡರ್ ತುಸು ಎತ್ತರದ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಹೊಸ ಬೈಕಿನಲ್ಲಿ ರೆಟ್ರೊ ವಿನ್ಯಾಸವನ್ನು ಅನ್ನು ವರ್ಧಿಸುವ ಮತ್ತೊಂದು ಅಂಶವೆಂದರೆ ಹಿಂಭಾಗದ ಫೆಂಡರ್. ಹೌದು ಇದು ಟೈಲ್ ಲ್ಯಾಂಪ್, ಇಂಡಿಕೇಟರ್‌ಗಳು ಮತ್ತು ನಂಬರ್ ಪ್ಲೇಟ್ ಅನ್ನು ಈ ಫೆಂಡರ್‌ನಲ್ಲಿ ಅಳವಡಿಸಲಾಗಿದ್ದು, ರೆಟ್ರೋ ವಿನ್ಯಾಸದಲ್ಲಿ ಎಂಜಿನ್ ವಿಭಾಗವು ಸಹ ಪ್ರಮುಖ ಪಾತ್ರ ವಹಿಸುತ್ತದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಇದು ಹಳೆಯ ಟು-ಸ್ಟ್ರೋಕ್ ಎಂಜಿನ್‌ಗೆ ಹೋಲಿಕೆಯಾಗಲಿದ್ದು, ಹೊಸ ಎಂಜಿನ್ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿದ್ದರೂ ಸಹ ಸಿಲಿಂಡರ್ ಹೆಚ್ಚು ರೆಟ್ರೋ ಆಗಿ ಕಾಣುವಂತೆ ಮಾಡುತ್ತದೆ. ಇದರೊಂದಿಗೆ ಯೆಜ್ಡಿ ರೋಡ್‌ಸ್ಟರ್ ಬೈಕಿನಲ್ಲಿರುವ ಟ್ವಿನ್ ಎಕ್ಸಾಸ್ಟ್ ಔಟ್‌ಲೆಟ್‌ಗಳು ರೋಡ್‌ಕಿಂಗ್‌ ನೆನಪಿಸಲಿದ್ದು, ಬಾರ್-ಎಂಡ್ ಮಿರರ್‌ ಮತ್ತು ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ರೋಡ್‌ಸ್ಟರ್ ವೈಶಿಷ್ಟ್ಯಗಳು

ಹೊಸ ಯೆಜ್ಡಿ ರೋಡ್‌ಸ್ಟರ್ ಆಧುನಿಕ ಯೆಜ್ಡಿ ಬೈಕ್ ಶ್ರೇಣಿಯಲ್ಲಿನ ಪ್ರವೇಶ ಮಟ್ಟದ ಮಾದರಿಯಾಗಿದ್ದು, ವೈಶಿಷ್ಟ್ಯತೆಗಳ ವಿಷಯದಲ್ಲಿ ಇದು ಇನ್ನುಳಿದ ಎರಡು ಬೈಕ್ ಮಾದರಿಗಿಂತ ತುಸು ಕಡಿಮೆ ಮಟ್ಟದ ತಾಂತ್ರಿಕ ಅಂಶಗಳನ್ನು ಹೊಂದಿದೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಕನಿಷ್ಠ ಮಟ್ಟದ ವೈಶಿಷ್ಟ್ಯತೆಗಳ ಹೊರತಾಗಿ ಹಲವಾರು ಸ್ಟ್ಯಾಂಡರ್ಡ್ ವೈಶಿಷ್ಟ್ಯತೆಗಳಿದ್ದು, ಹೊಸ ಬೈಕಿನಲ್ಲಿ ಎರಡು ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸ್ಲಾಟ್‌ಗಳು(ಟೈಪ್-ಎ ಮತ್ತು ಟೈಪ್-ಸಿ) ಮತ್ತು ಎಲ್ಇಡಿ ಲೈಟಿಂಗ್‌ಗಳನ್ನು ಜೋಡಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಹಾಗೆಯೇ ಹೊಸ ಬೈಕಿನ ವೃತ್ತಾಕಾರದ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸಾಕಷ್ಟು ಆಕರ್ಷಕವಾಗಿ ಕಾಣಲಿದ್ದು, ಇದು ಒಂದೇ ಸೂರಿನಡಿ ಸಾಕಷ್ಟು ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಗೇರ್ ಪೊಸಿಷನ್ ಇಂಡಿಕೇಟರ್, ಕ್ರಮಿಸಬಹುದಾದ ದೂರ, ಮಲ್ಟಿ ಟ್ರಿಪ್ ಮೀಟರ್‌ಗಳು, ಸ್ಪೀಡೋ ಮೀಟರ್, ಓಡೋ ಮೀಟರ್, ಟ್ಯಾಕೋ ಮೀಟರ್ ಸೇರಿದಂತೆ ಸ್ವಿಚ್‌ಗೇರ್ ಉತ್ತಮವಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ರೋಡ್‌ಸ್ಟರ್ ಎಂಜಿನ್ ಕಾರ್ಯಕ್ಷಮತೆ

ಹೊಸ ಯೆಜ್ಡಿ ರೋಡ್‌ಸ್ಟರ್ ಮಾದರಿಯು ಇತರೆ ಎರಡು ಯೆಜ್ಡಿ ಮೋಟಾರ್‌ಸೈಕಲ್‌ಗಳಂತೆಯೇ ಲಿಕ್ವಿಡ್-ಕೂಲ್ಡ್ ಹೊಂದಿರುವ 334ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್‌ ಆಯ್ಕೆ ಹೊಂದಿದ್ದು, ಒಂದೇ ಮಾದರಿಯ ಎಂಜಿನ್ ಹೊಂದಿದ್ದರೂ ಕ್ಲಾಸಿಕ್ ಬೈಕ್ ರೈಡಿಂಗ್ ಅವಶ್ಯಕತೆಗಳಿಗೆ ಸರಿಹೊಂದುವಂತೆ ಎಂಜಿನ್ ಕಾರ್ಯಕ್ಷಮತೆಯನ್ನು ವಿಭಿನ್ನವಾಗಿ ಮಾರ್ಪಾಡುಗೊಳಿಸಲಾಗಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ರೋಡ್‌ಸ್ಟರ್ ಮಾದರಿಯ ಎಂಜಿನ್ 7,300 ಆರ್‌ಪಿಎಂನಲ್ಲಿ ಗರಿಷ್ಠ 29.3 ಬಿಎಚ್‌ಪಿ ಉತ್ಪಾದಿಸಲಿದ್ದರೆ 6,500 ಆರ್‌ಪಿಎಂನಲ್ಲಿ 29 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸಲಿದ್ದು, ಇನ್ನುಳಿದ ಎರಡು ಯೆಜ್ಡಿ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ರೋಡ್‌ಸ್ಟರ್‌ ಮಾದರಿಯಲ್ಲಿ ಗರಿಷ್ಠ ಶಕ್ತಿಯು ಸ್ವಲ್ಪ ಕಡಿಮೆ ಎಂಜಿನ್ ವೇಗದಲ್ಲಿ ಬರಲಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಹೊಸ ಬೈಕ್ ಮಾದರಿಯ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಇದು ಪ್ರತಿ ಗಂಟೆಗೆ 100-110 ಕಿ.ಮೀ ವೇಗದಲ್ಲಿ ಸುಲಭವಾಗಿ ಚಲಿಸಬಲ್ಲದು. ಈ ವೇಗದಲ್ಲಿ ಬೈಕ್ ಸ್ಪಲ್ಪ ಕಂಪನವಾದದಂತೆ ಎನ್ನಿಸಿದರೂ ಅದು ನಿಮಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ನೀಡುವುದಿಲ್ಲ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಒಟ್ಟಾರೆಯಾಗಿ ರೋಡ್‌ಸ್ಟರ್ ಎಂಜಿನ್ ಗುಣಲಕ್ಷಣಗಳು ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಮಾದರಿಗಳಿಗೆ ಹೋಲಿಕೆಯಾದರೂ ಈ ಎಂಜಿನ್ ರೋಡ್‌ಸ್ಟರ್‌ಗೆ ಹೆಚ್ಚು ಸೂಕ್ತವಾಗಿದ್ದು, ಹೊಸ ಬೈಕಿನ ಸಸ್ಪೆನ್ಷನ್ ಸೆಟಪ್ ಮೃದುವಾಗಿದೆ ಎನ್ನಬಹುದು.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಹೊಸ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ನೊಂದಿಗೆ 135 ಎಂಎಂ ಟ್ರಾವೆಲ್ ಸಸ್ಷೆಷನ್ ಮತ್ತು 100 ಎಂಎಂ ಹಿಂಭಾಗದ ಟ್ರಾವೆಲ್ ಸಸ್ಷೆಷನ್ ನೀಡಲಾಗಿದ್ದು, ಸಮತೋಲಿತ ಸಸ್ಷೆಷನ್ ಸೆಟಪ್ ಆರಾಮದಾಯಕ ಸವಾರಿಗೆ ಅನುಕೂಲ ಮಾಡಿಕೊಡುತ್ತದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಪರ್ಫಾಮೆನ್ಸ್ ತಕ್ಕಂತೆ ಬ್ರೇಕಿಂಗ್ ಸೌಲಭ್ಯವು ಕೂಡಾ ಉತ್ತಮವಾಗಿದ್ದು, ಬೈಕಿನ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಆಗಿ ಡ್ಯುಯಲ್-ಚಾನೆಲ್ ಎಬಿಎಸ್ ಜೋಡಿಸಲಾಗಿದ್ದು, ಇನ್ನುಳಿದ ಎರಡು ಮಾದರಿಗಳಂತೆ ಈ ಬೈಕಿನಲ್ಲಿ ಬದಲಾಯಿಸಬಹುದಾದ ಎಬಿಎಸ್ ಮೋಡ್ ಸೌಲಭ್ಯವನ್ನು ನೀಡಲಾಗಿಲ್ಲ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಜೊತೆಗೆ ಹೊಸ ಯೆಜ್ಡಿ ಮೋಟಾರ್‌ಸೈಕಲ್‌ಗಳಿಗೆ ರೇಡಿಯೇಟರ್ ಸೆಟಪ್ ಆಕರ್ಷಕವಾಗಿದ್ದು, ಎಂಜಿನ್ ಕೂಲಿಂಗ್ ದಕ್ಷತೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ಮೂಲಕ ಯೆಜ್ಡಿ ರೋಡ್‌ಸ್ಟರ್‌ ಸವಾರಿಯು ಆಹ್ಲಾದಕರ ಅನುಭವ ನೀಡುವುದರೊಂದಿಗೆ ಯೆಜ್ಡಿ ರೋಡ್‌ಕಿಂಗ್‌ ನೆನಪು ಮಾಡಲಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ರೋಡ್‌ಸ್ಟರ್ ಬಣ್ಣಗಳು, ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಹೊಸ ಯೆಜ್ಡಿ ರೋಡ್‌ಸ್ಟರ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಒಟ್ಟು ಐದು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ವಿವಿಧ ಬಣ್ಣಗಳ ಆಯ್ಕೆಗೆ ಅನುಗುಣವಾಗಿ ಹೊಸ ಬೈಕ್ ಬೆಲೆ ನಿರ್ಧಾರವಾಗುತ್ತದೆ.

* ಸ್ಮೋಕ್ ಗ್ರೇ - ರೂ. 1,98,142

* ಹಂಟರ್ ಗ್ರೀನ್ - ರೂ. 2,02,142

* ಸ್ಟೀಲ್ ಬ್ಲೂ - 2,02,142

* ಸಿನ್ ಸಿಲ್ವರ್ - ರೂ. 2,06,142

* ಗ್ಯಾಲಂಟ್ ಗ್ರೇ- ರೂ. 2,06,142

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ವಿವಿಧ ಬಣ್ಣಗಳ ಆಯ್ಕೆಯಿದ್ದರೂ ಹೊಸ ಬೈಕ್ ಮಾದರಿಯು ಸ್ಟೀಲ್ ಬ್ಲೂ ಮತ್ತು ಹಂಟರ್ ಗ್ರೀನ್ ಬಣ್ಣಗಳನ್ನು ಹೊಂದಿರುವ ರೋಡ್‌ಸ್ಟರ್‌ ಮಾದರಿಗಳು ಹೆಚ್ಚಿನ ಆಕರ್ಷಣೆ ಹೊಂದಿದ್ದು, ಟ್ವಿನ್ ಎಕ್ಸಾಸ್ಟ್‌ಗಳನ್ನು ಒಳಗೊಂಡಂತೆ ಕ್ರೋಮ್‌ ಬೈಕಿನ ಬಲಿಷ್ಠತೆ ಹೆಚ್ಚಿಸಿವೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಈ ಮೂಲಕ ಹೊಸ ಯೆಜ್ಡಿ ರೋಡ್‌ಸ್ಟರ್ ಮಾದರಿಯು ಕ್ಲಾಸಿಕ್ ಬೈಕ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಪ್ರಮುಖ ಬೈಕ್ ಮಾದರಿಗಳಿಗೆ ಪೈಪೋಟಿ ನೀಡಬಹುದಾದ ಎಲ್ಲಾ ವೈಶಿಷ್ಟ್ಯತೆಗಳು ಈ ಮಾದರಿಯಲ್ಲಿದ್ದು, ಕ್ಲಾಸಿಕ್ 350 ಮಾದರಿಗೆ ನೇರ ಪೈಪೋಟಿಯೊಂದಿಗೆ ಜಾವಾ 42 ಮಾದರಿಗೂ ಪ್ರತಿಸ್ಪರ್ಧಿಯಾಗಲಿದೆ.

ಫಸ್ಟ್ ರೈಡ್ ರಿವ್ಯೂ: ರೋಡ್‌ಕಿಂಗ್ ಸ್ಥಾನವನ್ನು ತುಂಬುತ್ತಾ ಹೊಸ ಯೆಜ್ಡಿ ರೋಡ್‌ಸ್ಟರ್ ಕ್ಲಾಸಿಕ್?

ಯೆಜ್ಡಿ ರೋಡ್‌ಸ್ಟರ್ ಕುರಿತಾದ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಚ್ಚ ಹೊಸ ಯೆಜ್ಡಿ ರೋಡ್‌ಸ್ಟರ್ ಮಾದರಿಯು ನಿಜವಾಗಿಯೂ ಯೆಜ್ಡಿ ರೋಡ್‌ಕಿಂಗ್‌ ಮಾದರಿಗೆ ಯೋಗ್ಯವಾದ ಉತ್ತರಾಧಿಕಾರಿ ಎನ್ನಬಹುದು. ಇದು ಐಕಾನಿಕ್ ಮಾದರಿಯಲ್ಲಿರುವಂತೆ ಪ್ರಮುಖ ತಾಂತ್ರಿಕ ಅಂಶವನ್ನು ಹೊಂದಿಲ್ಲವಾದರೂ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಅದ್ಭುತವಾದ ಕ್ಲಾಸಿಕ್ ಮಾದರಿಯಾಗಿ ನಿರ್ಮಾಣಗೊಳಿಸಲಾಗಿದೆ. ಹೊಸ ಬೈಕ್ ಡಿಸೈನ್, ಎಂಜಿನ್ ಮತ್ತು ಪ್ರತಿಸ್ಪರ್ಧಿಗಿಂತಲೂ ಆಕರ್ಷಕವಾದ ಬೆಲೆ ನಿಗದಿಪಡಿಸುವಲ್ಲಿ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಯಶಸ್ವಿಯಾಗಿದೆ ಎನ್ನಬಹುದಾಗಿದ್ದು, ಮಾರಾಟ ಪ್ರಕ್ರಿಯೆ ಮೇಲೆ ಹೊಸ ಬೈಕ್ ಭವಿಷ್ಯವು ನಿರ್ಧಾರವಾಗಲಿದೆ.

Most Read Articles

Kannada
English summary
Yezdi roadster review engine specs performance features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X