First Ride Review: ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310..

ದೇಶದ ಮುಂಚೂಣಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಹೊಚ್ಚ ಟಿವಿಎಸ್ 'ಬಿಲ್ಟ್ ಟು ಆರ್ಡರ್' (ಬಿಟಿಒ) ಪ್ಲಾಟ್‍ಫಾರ್ಮ್ ಆರಂಭಿಸುವುದೊಂದಿಗೆ ಹೊಸ 2021ರ ಅಪಾಚೆ ಆರ್‌ಆರ್310(Apache RR310) ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬಿಟಿಒ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಬೈಕಿನ ಪರ್ಫಾಮೆನ್ಸ್ ಕುರಿತಾಗಿ ಈ ವಿಮರ್ಶೆ ಲೇಖನದಲ್ಲಿ ತಿಳಿಯೋಣ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

2016ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅಕುಲಾ 310 ಪರಿಕಲ್ಪನೆಯನ್ನು ಪ್ರದರ್ಶಿಸಿದ್ದ ಟಿವಿಎಸ್ ಮೋಟಾರ್ ಕಂಪನಿಯು ತದನಂತರ ಹಲವಾರು ಬದಲಾವಣೆಗಳೊಂದಿಗೆ 2017ರಲ್ಲಿ ಅಪಾಚೆ ಆರ್‌ಆರ್310 ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಹೊಸ ಬೈಕಿನ ಕಾನ್ಸೆಪ್ಟ್ ಮೋಟಾರ್ ಸೈಕಲ್‌ ಮಾದರಿಯ ಬಹುತೇಕ ವಿನ್ಯಾಸಗಳನ್ನು ಉತ್ಪಾದನಾ ಮಾದರಿಯಲ್ಲೂ ಮುಂದುವರಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಯ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಈಗಾಗಲೇ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿರುವ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯಲ್ಲಿ ಕಂಪನಿಯು ಪರಿಪೂರ್ಣ ಅನ್ವೇಷಣೆಯನ್ನು ಮುಂದುವರಿಸುವ ಮೂಲಕ 2018, 2019 ಮತ್ತು 2020ರಲ್ಲಿ ಕೆಲವು ಬದಲಾವಣೆಗಳೊಂದಿಗೆ ನವೀಕರಿಸಿದ್ದು, ಇದೀಗ ಮತ್ತೊಮ್ಮೆ ಹೊಸ ಬೈಕ್ ಮಾದರಿಗಾಗಿ ವಿಶೇಷ 'ಬಿಲ್ಟ್ ಟು ಆರ್ಡರ್' ಪ್ಲ್ಯಾಟ್‌ಫಾರ್ಮ್ ತೆರೆದಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಬಿಲ್ಟ್-ಟು-ಆರ್ಡರ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದಾಗಿದ್ದು, ಇದರಲ್ಲಿ ಡೈನಾಮಿಕ್ ಕಿಟ್ ಮತ್ತು ರೇಸ್ ಕಿಟ್ ಎಂಬ ಎರಡು ಪರ್ಫಾಮೆನ್ಸ್ ಕಿಟ್‌ಗಳನ್ನು ಪಡೆಯುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ವೈಶಿಷ್ಟ್ಯಗಳ ಪಟ್ಟಿಗೆ ದೊಡ್ಡ ಸೇರ್ಪಡೆ ಎಂದರೆ ಅಂದರೆ ಅದು ಮುಂಭಾಗ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆಯ ಸಸ್ಷೆಂಷನ್ ಸೆಟಪ್ ನೀಡಲಿದ್ದು,ರೇಸ್‌ ಟ್ರಾಕ್‌ನಲ್ಲಿ ರೈಡ್ ಮಾಡಿದಾಗ ಅನುಭವವನ್ನು ನೀಡುವಂತೆ ಮಾಡಲು ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದೆ. ಹಾಗಾದ್ರೆ ಹೊಸ ಬೈಕಿನ ಬಿಲ್ಟ್-ಟು-ಆರ್ಡರ್ ಪ್ಲಾಟ್‌ಫಾರ್ಮ್ ಮತ್ತು ಹೊಸ ವೈಶಿಷ್ಟ್ಯತೆಗಳೊಂದಿಗೆ ಬೈಕಿನ ಪರ್ಫಾಮೆನ್ಸ್ನಲ್ಲಿ ಏನೆಲ್ಲಾ ಬದಲಾವಣೆಗಳಿವೆ ಎಂಬುವುದನ್ನು ಮುಂದಿನ ಸ್ಲೈಡ್‌ಗಳಲ್ಲಿ ಹಂತ-ಹಂತವಾಗಿ ತಿಳಿಯೋಣ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಟಿವಿಎಸ್ ಬಿಲ್ಟ್-ಟು-ಆರ್ಡರ್ ಪ್ಲ್ಯಾಟ್‌ಫಾರ್ಮ್ (TVS Built-To-Order Platform)

ಟಿವಿಎಸ್‌ ಕಂಪನಿಯು ಬಿಲ್ಟ್-ಟು-ಆರ್ಡರ್ ಪ್ಲಾಟ್‌ಫಾರ್ಮ್ ಕಾರ್ಖಾನೆಯೊಂದಿಗೆ ಗ್ರಾಹಕೀಕರಣವನ್ನು ಅನುಮತಿಸಲು ಕೈಗೊಂಡ ಮೊದಲ ಉದ್ಯಮವಾಗಿದ್ದು, ಇದನ್ನು ವೆಬ್‌ಸೈಟ್ ಆಧಾರಿತ ಸಂರಚಕದ ಮೂಲಕ ಅಥವಾ TVS ARIVE ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ತಮ್ಮಿಷ್ಟದಂತೆ ಹೊಸ ಬೈಕ್ ತಾಂತ್ರಿಕ ಅಂಶಗಳನ್ನು ನಿರ್ಧರಿಸಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಸಂರಚಕದ ಮೂಲಕ ಬೈಕ್ ಖರೀದಿದಾರರು ಮೋಟಾರ್ ಸೈಕಲ್‌ನಲ್ಲಿ ಗ್ರಾಫಿಕ್ಸ್, ವೈಯಕ್ತಿಕ ರೇಸ್ ಸಂಖ್ಯೆಯನ್ನು ಸೇರಿಸಬಹುದು ಮತ್ತು ಡೈನಾಮಿಕ್ ಅಥವಾ ರೇಸ್ ಕಿಟ್ ಅನ್ನು ತಮ್ಮ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಆರಿಸಿಕೊಳ್ಳಬಹುದಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹಾಗೆಯೇ ಹೊಸ ಬೈಕಿನಲ್ಲಿರುವ ಅಲಾಯ್ ಚಕ್ರಗಳ ಬಣ್ಣ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಬಹುದಾಗಿದ್ದು, ಕಾರ್ಖಾನೆಯಿಂದಲೇ ವೈಯಕ್ತಿಕಗೊಳಿಸಿದ ಮೋಟಾರ್ ಸೈಕಲ್ ಅನ್ನು ಪಡೆಯಲಿರುವ ಗ್ರಾಹಕರು ತಮ್ಮ ಬಜೆಟ್ ಅನುಗುಣವಾಗಿ ಹೊಸ ವಿನ್ಯಾಸವನ್ನು ಪಡೆಯಬಹುದಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ವಿನ್ಯಾಸ ಮತ್ತು ಶೈಲಿ

ಹೊಸ ಅಪಾಚೆ ಆರ್‌ಆರ್310 ಬೈಕ್ ಮಾದರಿಯನ್ನು ರೇಸ್ ಟ್ರ್ಯಾಕ್‌ನಲ್ಲಿ ಸವಾರಿ ಮಾಡುವ ಮೊದಲು ನಾವು ಕೆಲವು ನಿಮಿಷಗಳ ಕಾಲ ಹೊಸ ಮೋಟಾರ್ ಸೈಕಲ್‌ನ ರೇಸ್ ರೆಪ್ಲಿಕಾ ಲಿವರಿಯನ್ನು ವಿಕ್ಷಣೆ ಮಾಡಿದೆವು. ಇದು ಸಂಪೂರ್ಣವಾಗಿ ಬಿಲ್ಟ್-ಟು-ಆರ್ಡರ್ ಪ್ಲ್ಯಾಟ್‌ಫಾರ್ಮ್ ಮೇಲೆ ಸಿದ್ದಗೊಂಡಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಪರ್ಫಾಮೆನ್ಸ್ ಪ್ರೇರಣೆ ಹೊಂದಿರುತ್ತದೆ

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ರೇಸ್ ರೆಪ್ಲಿಕಾ ಲಿವರಿ ಎನ್ನುವುದು ಟಿವಿಎಸ್ ರೇಸಿಂಗ್ ಮತ್ತು ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಕಂಪನಿಯ ಸಾಧನೆಯ ಒಂದು ಆಚರಣೆಯಾಗಿದೆ. ಇದು ಟಿವಿಎಸ್ ರೇಸಿಂಗ್‌ನ ಅಧಿಕೃತ ಬಣ್ಣಗಳಾದ ಕೆಂಪು, ಬಿಳಿ ಮತ್ತು ನೀಲಿ ಬಣ್ಣಗಳೊಂದಿಗೆ ಬರುತ್ತದೆ. ಮೋಟಾರ್ ಸೈಕಲ್‌ನ ಬಹುತೇಕ ಎಲ್ಲಾ ದೇಹದ ಭಾಗಗಳಲ್ಲಿ ನೀವು ಆಕರ್ಷಕ ಗ್ರಾಫಿಕ್ಸ್ ಮತ್ತು ಡಿಕಾಲ್‌ಗಳನ್ನು ಸಹ ಪಡೆಯಬಹುದಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಟಿವಿಎಸ್ ಡಿಕಾಲ್‌ಗಳಲ್ಲಿ ಟಿವಿಎಸ್ ರೇಸಿಂಗ್, ಅಪಾಚೆ, ಡಿಒಎಚ್‌ಸಿ, ಆರ್‌ಆರ್ 310, ಇತ್ಯಾದಿ. ಹೆಡ್‌ಲ್ಯಾಂಪ್ ಫೇರಿಂಗ್‌, 'ರೇಸಿಂಗ್ ಸಿನ್ಸ್ 1982' ವೈಶಿಷ್ಟ್ಯತೆ ಹೊಂದಿದ್ದು, ಹೊಸ ಮೋಟಾರ್ ಸೈಕಲ್‌ಗೆ ಸರಿಯಾದ ರೇಸ್ ಬೈಕ್ ಅನುಭವವನ್ನು ನೀಡಲು ಇವೆಲ್ಲವೂ ಒಟ್ಟಾಗಿ ಸೇರಿಕೊಳ್ಳುತ್ತವೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಜೊತೆಗೆ ಶೌಟಿ ಡಿಕಾಲ್‌ಗಳು ಮತ್ತು ಆಕರ್ಷಕವಾಗಿ ಗ್ರಾಫಿಕ್ಸ್‌ಗಳು ಬೈಕ್ ಅಂದವನ್ನು ಹೆಚ್ಚಿಸಲು ಸಹಕಾರಿಯಾಗಿದ್ದು, 2017ರಲ್ಲಿ ಪ್ರಾರಂಭವಾದಾಗಿನಿಂದಲೂ ಹೆಚ್ಚು ಬದಲಾಗದ ಅದೇ ಪರಿಚಿತ ವಿನ್ಯಾಸ ಭಾಷೆಯನ್ನು ನೀವು ನೋಡುತ್ತೀರಿ. ಮುಂದೆ, ನೀವು ಇನ್ನೂ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಸುಂದರವಾದ ಟ್ವಿನ್-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ ಜೋಡಣೆ ನೋಡಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ತದನಂತರ ಹೆಡ್ ಲ್ಯಾಂಪ್ ಮೇಲೆ ದೊಡ್ಡದಾದ ವಿಂಡ್ ಸ್ಕ್ರೀನ್‌ನೊಂದಿಗೆ ದೊಡ್ಡ ಫೇರಿಂಗ್ ಮೂಲಕ ಸಂಯೋಜಿಸಲ್ಪಟ್ಟಿದ್ದು, ಎಕ್ಸಾಸ್ಟ್ ವಿನ್ಯಾಸವು ಈ ಹಿಂದಿನಂತೆಯೇ ಮೊಣಕಾಲುಗಳಿಗೆ ಉತ್ತಮ ಹಿಡಿತ ಹೊಂದಿರುವ ಸ್ಪೋರ್ಟಿ ಇಂಧನ ಟ್ಯಾಂಕ್ ಪಡೆದುಕೊಂಡಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಬಹಿರಂಗಪಡಿಸಲಾಗಿರುವ ಫ್ರೇಮ್ ಮತ್ತು ಸಬ್‌ಫ್ರೇಮ್ ಮೋಟಾರ್‌ಸೈಕಲ್ ಅನ್ನು ಉತ್ತಮವಾಗಿ ಕಾಣುವಂತೆ ಮಾಡಿದ್ದು, ಅಚ್ಚುಕಟ್ಟಾ ವಿನ್ಯಾಸದ ಚೂಪಾದ ಕೌಲಿಂಗ್‌, ಎಲ್‌ಇಡಿ ಟೈಲ್ ಲ್ಯಾಂಪ್ ನೋಡಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಟ್ರ್ಯಾಕ್‌ನಲ್ಲಿ ನಾವು ಓಡಿಸುತ್ತಿದ್ದ ಮೋಟಾರ್ ಸೈಕಲ್ ಮಾದರಿಯಲ್ಲಿ ಕಂಪನಿಯು ರೇಸ್ ಕಿಟ್ ಹಾಗೂ ಡೈನಾಮಿಕ್ ಕಿಟ್ ಅಳವಡಿಸಿತ್ತು. ಆದ್ದರಿಂದ, ಇದು ಹೆಚ್ಚಿನ ಸೆಟ್ ನರ್ಲ್ಡ್ ಫುಟ್‌ಪೆಗ್‌ಗಳು, ಸಂಪೂರ್ಣ ಹೊಂದಾಣಿಕೆ ಸಸ್ಷೆಂಷನ್‌ಗಳೊಂದಿಗೆ ನಮ್ಮ ಕೈ ಸೇರಿತ್ತು. ಇದು ಹೆಚ್ಚು ಆಕ್ರಮಣಕಾರಿಯಾದ ಹ್ಯಾಂಡಲ್‌ಬಾರ್ ಸೇರಿದಂತೆ ಪ್ರಮುಖ ಬದಲಾವಣೆಗಳೊಂದಿಗೆ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸಿತ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಅಪಾಚೆ ಆರ್‌ಆರ್310 ವೈಶಿಷ್ಟ್ಯತೆಗಳು

2021ರ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯಲ್ಲಿ ಕೇವಲ ರೇಸ್ ಕಿಟ್, ಡೈನಾಮಿಕ್ ಕಿಟ್ ಮತ್ತು ಬಿಲ್ಟ್ ಟು ಆರ್ಡರ್ ಪ್ಲಾಟ್‌ಫಾರ್ಮ್ ವೈಶಿಷ್ಟ್ಯತೆಗಳು ಮಾತ್ರವಲ್ಲ ಸ್ಟ್ಯಾಂಡರ್ಡ್ ಮೋಟಾರ್‌ಸೈಕಲ್ ಕೂಡಾ ಹಲವಾರು ಫೀಚರ್ಸ್ ಸೇರ್ಪಡೆಗಳನ್ನು ಹೊಂದಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ವೈಶಿಷ್ಟ್ಯತೆಗಳು ಹೆಚ್ಚಿನ ಸಂಖ್ಯೆಯಲ್ಲಿ TFT ಸಲಕರಣೆಗಳ ನಿಯಂತ್ರಣದಲ್ಲಿ ಜೋಡಿಸಲಾಗಿದ್ದು, 2020 ರಿಂದ, ಅಪಾಚೆ ಆರ್‌ಆರ್310 ಮಾದರಿಯು 5.2 ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಪರದೆ ಪಡೆದುಕೊಂಡಿದೆ.

- ಡಿಜಿ ಡಾಕ್ಸ್

- ಡೈನಾಮಿಕ್ ರೆವ್ ಲಿಮಿಟ್ ಇಂಡಿಕೇಟರ್

- ಪ್ರತಿದಿನದ ಟ್ರಿಪ್ ಮೀಟರ್

- ಅತಿ ವೇಗದ ಸೂಚನೆ

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ವೈಶಿಷ್ಟ್ಯತೆಗಳಲ್ಲಿ ಡಿಜಿ ಡಾಕ್ಸ್ ಒಂದು ವೈಶಿಷ್ಟ್ಯವಾಗಿದ್ದು, ವಾಹನದ ದಾಖಲೆಗಳನ್ನು ಸಿಸ್ಟಂನಲ್ಲಿ ಸಂಗ್ರಹಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ನೀವು ಯಾವಾಗಲೂ ಮೋಟಾರ್‌ಸೈಕಲ್‌ನಲ್ಲಿ ವಾಹನ ದಾಖಲೆಗಳನ್ನು ಯಾವಾಗಲೂ ಬೈಕಿನಲ್ಲಿ ಸಂಗ್ರಹಣೆ ಮಾಡಿಕೊಳ್ಳಲು ಸಹಕಾರಿಯಾಗಿದ್ದು, ಚಾಲನಾ ಪರವಾನಗಿ ಜೊತೆಗೆ ವಿಮೆ ಮತ್ತು ನೋಂದಣಿ ಪತ್ರಗಳನ್ನು ಸಹ ಈ ಸಲಕರಣೆಗಳಲ್ಲಿ ಸಂಗ್ರಹಿಸಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಇನ್ನು ಡೈನಾಮಿಕ್ ರೆವ್ ಲಿಮಿಟ್ ಇಂಡಿಕೇಟರ್ ಮೂಲಕ ಬೈಕ್ ಎಂಜಿನ್‌ನ ಉಷ್ಣತೆಯು ಹೆಚ್ಚಾದಂತೆ ಪರದೆಯ ಮೇಲೆ ಪ್ರದರ್ಶಿತವಾಗುವ ರೆವ್-ಮಿತಿಯನ್ನು ಹೆಚ್ಚಿಸುತ್ತದೆ. ಇದು ಎಂಜಿನ್‌ನ ಜೀವಿತಾವಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಎಂಜಿನ್ ಪರ್ಫಾಮೆನ್ಸ್ ಸೀಮಿತಗೊಳಿಸುವುದಿಲ್ಲವಾದರೂ ಪರದೆಯ ಮೇಲೆ ಸವಾರನಿಗೆ ಮಿತಿಯನ್ನು ದಾಟದಂತೆ ಸೂಚಿಸುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ವೈಶಿಷ್ಟ್ಯತೆಗಳಲ್ಲಿ ಡೇ ಟ್ರಿಪ್ ಮೀಟರ್ ಸವಾರನಿಗೆ ಒಂದು ದಿನದಲ್ಲಿ ಪ್ರಯಾಣಿಸಿದ ದೂರವನ್ನು ಅಳೆಯಲು ಅನುವು ಮಾಡಿಕೊಡುತ್ತದೆ ಮತ್ತು ನಿಗದಿತ ವೇಗದ ಮಿತಿಯನ್ನು ದಾಟಿದರೆ ಓವರ್‌ಸ್ಪೀಡ್ ಸೂಚನೆಯು ಸವಾರನನ್ನು ಎಚ್ಚರಿಸುತ್ತದೆ. ಈ ವೇಗದ ಮಿತಿಯನ್ನು ರೈಡರ್ ಆಯ್ಕೆ ಮಾಡಬಹುದು ಮತ್ತು ಇದು ವೇಗ-ನಿರ್ಬಂಧಿತ ವಲಯದಲ್ಲಿ ಸವಾರಿ ಮಾಡುತ್ತಿದ್ದರೆ ಇದು ಉಪಯುಕ್ತವಾದ ವೈಶಿಷ್ಟ್ಯವಾಗಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಇದರೊಂದಿಗೆ ಈ ಹೊಸ ವೈಶಿಷ್ಟ್ಯ ಸೇರ್ಪಡೆಗಳನ್ನು ಹೊರತುಪಡಿಸಿ, ಟಿವಿಎಸ್ ಮೇಲೆ ತಿಳಿಸಿದ ಡೈನಾಮಿಕ್ ಮತ್ತು ರೇಸ್ ಕಿಟ್‌ಗಳನ್ನು ಪರಿಚಯಿಸಿದ್ದು, ಹೊಸ ಬೈಕಿನಲ್ಲಿ ಮೇಲಿನ ಬದಲಾವಣೆಗಳಿಂತಲೂ ಇವು ಪ್ರಮುಖ ಬದಲಾವಣೆ ಎನ್ನಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಡೈನಾಮಿಕ್ ಕಿಟ್

- ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ KYB ಅಪ್‌ಸೈಡ್-ಡೌನ್ ಫೋರ್ಕ್

(20-ಹಂತದ ರಿಬೌಂಡ್ & ಕಂಪ್ರೆಷನ್ ಡ್ಯಾಂಪಿಂಗ್; 15ಎಂಎಂ ಪ್ರಿ-ಲೋಡ್ ಹೊಂದಾಣಿಕೆ ಹೊಂದಿದೆ)

- ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಕೆವೈಬಿ ಮೊನೊಶಾಕ್

(20-ಹಂತದ ರಿಬೌಂಡ್ ಡ್ಯಾಂಪಿಂಗ್; 15-ಹಂತದ ಪ್ರಿ-ಲೋಡ್ ಹೊಂದಾಣಿಕೆ ಹೊಂದಿದೆ)

-ಬ್ರಾಸ್(ಹಿತ್ತಾಳೆ) ಲೇಪಿತ, ತುಕ್ಕು ನಿರೋಧಕ ಹೊಂದಿರುವ ಚೈನ್

- ಬೆಲೆ- ರೂ. 12,000

ರೇಸ್ ಕಿಟ್:

- ರೇಸ್ ವೈಶಿಷ್ಟ್ಯತೆಯ ಹ್ಯಾಂಡಲ್‌ಬಾರ್

- ವಿಸ್ತರಿಸಲಾದ ಫೂಟ್‌ರೆಸ್ಟ್ ಅಸೆಂಬ್ಲಿ

- ಮರುವಿನ್ಯಾಸಗೊಳಿಸಲಾದ ಫುಟ್‌ಪೆಗ್‌ಗಳು

- ಬೆಲೆ- ರೂ. 5,000

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಮೇಲಿನ ಹೊಸ ಸೇರ್ಪಡೆಗಳನ್ನು ಹೊರತುಪಡಿಸಿ ಟಿವಿಎಸ್ ಕಂಪನಿಯು ಹೊಸ ಅಪಾಚೆ ಆರ್‌ಆರ್310 ಮಾದರಿಯಲ್ಲಿ ವಿವಿಧ ರೈಡ್ ಮೋಡ್‌ಗಳನ್ನು ನೀಡುತ್ತಿದ್ದು, ರೈನ್, ಸಿಟಿ, ಸ್ಪೋರ್ಟ್ ಮತ್ತು ರೇಸ್ ಮೋಡ್ ನೀಡಲಾಗುತ್ತಿದೆ. ಟಿಎಫ್‌ಟಿ ಸ್ಕ್ರೀನ್ನಲ್ಲಿ ಪ್ರತಿಯೊಂದು ರೈಡ್ ಮೋಡ್‌ಗಳಿಗೂ ವಿಭಿನ್ನ ಥೀಮ್‌ಗಳನ್ನು ನೀಡಲಾಗಿದ್ದು, ನೀವು ಸವಾರಿ ಮಾಡುತ್ತಿರುವಾಗ ಮೋಡ್‌ಗೆ ಅನುಗುಣವಾಗಿ ಟಿಎಫ್‌ಟಿ ಸ್ಕೀನ್ ಬಣ್ಣ ಬದಲಾವಣೆಯಾಗುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ಬೈಕ್ ರೈಡಿಂಗ್ ಅನಿಸಿಕೆಗಳು

ಬಜೆಟ್ ಬೆಲೆಗಳಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್ ಮಾದರಿಯಾಗಿ ಗುರುತಿಸಿಕೊಳ್ಳುವ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯು ಅದ್ಭುತವಾದ ಮೋಟಾರ್ ಸೈಕಲ್ ಮಾದರಿಯೆಂದರೆ ತಪ್ಪಾಗುವುದಿಲ್ಲ. ಇದು ಉತ್ಸಾಹಭರಿತವಾದ ಎಂಜಿನ್‌ನೊಂದಿಗೆ ಹೊಸ ಡೈನಾಮಿಕ್ ರೈಡಿಂಗ್ ಸೌಲಭ್ಯಗಳ ಮೂಲಕ ಸಾಮಾನ್ಯ ರಸ್ತೆಯಲ್ಲಿ ಮತ್ತು ರೇಸ್‌ ಟ್ರಾಕ್‌ನಲ್ಲಿ ತನ್ನದೇ ಆದ ರೈಡಿಂಗ್ ವೈಶಿಷ್ಟ್ಯತೆಯನ್ನು ಪ್ರದರ್ಶಿಸಿತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ಮೋಟಾರ್ ಸೈಕಲ್‌ನಲ್ಲಿ ಮೂರು ವಿಭಿನ್ನವಾದ ಸವಾರಿ ಗುಣಲಕ್ಷಣಗಳನ್ನು ಹೊಂದಬಹುದಾಗಿದ್ದು, ಅದು ನೀವು ಆಯ್ಕೆ ಮಾಡಿದ ಕಿಟ್ ಅವಲಂಬಿಸಿರುತ್ತದೆ. ಅದರಲ್ಲಿ ಡೈನಾಮಿಕ್ ಕಿಟ್ ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ಹೊಂದಿರುತ್ತದೆ. ನಾವು ರೈಡ್ ಮಾಡಿದ ಮೋಟಾರ್‌‌ಸೈಕಲ್‌ನಲ್ಲಿ ರೇಸ್ ಕಿಟ್ ಹಾಗೂ ಡೈನಾಮಿಕ್ ಕಿಟ್ ಎರಡನ್ನೂ ಹೊಂದಿದ್ದು, ಇದು ರೇಸ್‌ಟ್ರಾಕ್ ಪರ್ಫಾಮೆನ್ಸ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು.

ಮದ್ರಾಸ್ ಮೋಟಾರ್ ರೇಸ್‌ ಟ್ರಾಕ್‌ನಲ್ಲಿ ಆಯೋಜಿಸಲಾಗಿದ್ದ ಹೊಸ ಬೈಕ್ ರೈಡ್‌ನಲ್ಲಿ ಟಿವಿಎಸ್ ಕಂಪನಿಯು 2021ರ ಮಾದರಿಯನ್ನು ಸಾಕಷ್ಟು ಬದಲಾವಣೆಗೊಳಿಸಿರುವುದು ನಮ್ಮ ಅನುಭವಕ್ಕ ಬಂತು. ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ಮತ್ತು ಹೊಸ ಪ್ಯಾಕೇಜ್‌ಗಳು ಇತರೆ ವೈಶಿಷ್ಟ್ಯಗಳನ್ನು ವಿಸ್ತಾರವಾದ ರೀತಿಯಲ್ಲಿ ಅನುಭವಿಸುವಂತೆ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಿತ್ತು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಅದರಲ್ಲೂ ರೇಸ್ ಪ್ಯಾಕೇಜ್ ಹೊಂದಿರುವ ಬೈಕ್ ಮಾದರಿಯು ರೈಡಿಂಗ್ ವೇಳೆ ಹೊಸ ವ್ಯತ್ಯಾಸಗಳನ್ನು ನೀವು ಬಹುಬೇಗ ಅನುಭವಕ್ಕೆ ತಂದುಕೊಳ್ಳಬಹುದಾಗಿದ್ದು, ನಿಮ್ಮ ಕಾಲುಗಳನ್ನು ಮೋಟಾರ್ ಸೈಕಲ್ ಮೇಲೆ ಸ್ವಿಂಗ್ ಮಾಡಿದ ತಕ್ಷಣವೇ ಅದರ ಅನುಭವವಾಗುತ್ತದೆ. ಹಾಗೆಯೇ ಸೈಡ್ ಕಾರ್ನರ್‌ಗಳಲ್ಲಿ ಬೈಕ್ ಚಾಲನೆಯು ನಿಮಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಲಿದ್ದು, ರಿವ್‌ ಇಂಡಿಕೇಟರ್‌ಗಳು ಏರುತ್ತಿದ್ದಂತೆ ಮೋಟಾರ್‌ಸೈಕಲ್ ಹೆಚ್ಚು ಆಕ್ರಮಣಕಾರಿಯಾಗಿ ಮುನ್ನುಗ್ಗುವ ಮೂಲಕ ಸಾಮಾನ್ಯ ರಸ್ತೆಗಳಲ್ಲೂ ರೇಸ್ ಟ್ರ್ಯಾಕ್ ಅನುಭವ ನೀಡುತ್ತದೆ.

ಇನ್ನು ರೇಸ್ ಕಿಟ್‌ನಲ್ಲಿ ಅಪ್‌ಸೈಡ್-ಡೌನ್ ಫೋರ್ಕ್ ಹ್ಯಾಂಡಲ್‌ಬಾರ್ ಮತ್ತು ಮರು ವಿನ್ಯಾಸಗೊಳಿಸಲಾದ ಫುಟ್‌ಪೆಗ್‌ಗಳನ್ನು ಒಳಗೊಂಡಿದ್ದು, ಈ ಎರಡು ಘಟಕಗಳು ಮಾಡುವ ವ್ಯತ್ಯಾಸವು ಅಪಾರವಾಗಿದೆ. ಹ್ಯಾಂಡಲ್‌ಬಾರ್ ಅನ್ನು ಸುಮಾರು 5 ಡಿಗ್ರಿಗಳಷ್ಟು ಹಿಂದಕ್ಕೆ ಎಳೆಯಲಾಗುತ್ತದೆ ಮತ್ತು ತುದಿಗಳಲ್ಲಿ ಸುಮಾರು 8 ಡಿಗ್ರಿಗಳಷ್ಟು ಕಡಿಮೆ ಮಾಡಲಾಗಿದ್ದು, ಇದು ಹೆಚ್ಚು ಟಕ್-ಇನ್ ರೈಡಿಂಗ್ ಕೌಶಲ್ಯತೆಯನ್ನು ಅನುಮತಿಸುತ್ತದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ತದನಂತರ ಹೊಸ ಬೈಕಿನಲ್ಲಿ ಎತ್ತರಿಸಿದ ಫುಟ್‌ಪೆಗ್‌ಗಳು ಹೆಚ್ಚು ಆಕ್ರಮಣಕಾರಿ ಸವಾರಿ ಸ್ಥಾನವನ್ನು ಸಕ್ರಿಯಗೊಳಿಸಲಿದ್ದು, ರೇಸ್ ಕಿಟ್‌ನೊಂದಿಗೆ ರೇಸ್‌ಟ್ರಾಕ್‌ಗೆ ಅಗತ್ಯವಿರುವ ಮೀಸಲಾದ ಸವಾರಿ ಸ್ಥಾನವನ್ನು ಖಾತ್ರಿಪಡಿಸುತ್ತದೆ.

ಹೊಸ ಬೈಕ್ ರೈಡಿಂಗ್ ಸಂದರ್ಭದಲ್ಲಿ ಟಿವಿಎಸ್ ರೇಸಿಂಗ್‌ ಚಾಂಪಿಯನ್‌ಶಿಪ್ ವಿಜೇತ ಸವಾರರಾದ ಕೆವೈ ಅಹಮದ್ ಮತ್ತು ಜಗನ್ ಕುಮಾರ್ ಎರಡು ಸುತ್ತುಗಳೊಂದಿಗೆ ನಮ್ಮನ್ನು ಟ್ರ್ಯಾಕ್‌ಗೆ ಕರೆದೊಯ್ದರು. ಈ ಎರಡು ಸುತ್ತುಗಳಲ್ಲಿ, ಹೊಸ ಆರ್‌ಆರ್ 310 ಮಾದರಿಯ ಅಮಾನತು ಅದರ ಡೀಫಾಲ್ಟ್ ಸೆಟ್ಟಿಂಗ್‌ ತಿಳಿಸುವ ಮೂಲಕ ಆರ್‌ಆರ್310 ಮಾದರಿಯ ಸೈಡ್ ಕಾರ್ನರ್ ರೈಡಿಂಗ್ ಕೌಶಲ್ಯಗಳ ಬಗೆಗೆ ಉತ್ತಮ ಅನುಭವಗಳನ್ನು ಹಂಚಿಕೊಂಡರು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ಬೈಕಿನ 312 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ಗೆ ಪೂರಕವಾಗಿ 6-ಸ್ಪೀಡ್ ಗೇರ್ ಬಾಕ್ಸ್ ತ್ವರಿತವಾಗಿ ಬದಲಾಗುತ್ತದೆ ಮತ್ತು ಸ್ಲಿಪ್ಪರ್ ಕ್ಲಚ್ ಇದಕ್ಕೆ ಸಹಕಾರಿಯಾಗಿದ್ದು, 34 ಬಿಎಚ್‌ಪಿ ಮೋಟಾರ್‌ಸೈಕಲ್ ಅನ್ನು ತ್ವರಿತವಾಗಿ ವೇಗಗೊಳಿಸುತ್ತದೆ.

ಹೊಸ ಬೈಕ್ ನಿರ್ವಹಣೆಯ ವಿಷಯದಲ್ಲಿ ಹೊಂದಾಣಿಕೆಯ ಸಸ್ಷೆಂಷನ್‌ಗಳು, ರೇಸ್‌ಗೆ ಪೂರಕವಾದ ಹ್ಯಾಂಡಲ್‌ಬಾರ್‌ಗಳು ಮತ್ತು ಫುಟ್‌ಪೆಗ್‌ಗಳು ಪರ್ಫಾಮೆನ್ಸ್‌ಗೆ ಪೂರಕವಾದ ಅಂಶಗಳಾಗಿದ್ದು, ಹೊಸ ಅಪಾಚೆ ಆರ್‌ಆರ್310 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸ್ಟ್ಯಾಂಡರ್ಡ್ ಮಾದರಿಗಾಗಿ ರೂ. 2.59 ಲಕ್ಷ ನಿಗದಿಪಡಿಸಿದೆ.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಇನ್ನು ಟಿವಿಎಸ್ ಪರಿಚಯಿಸಿರುವ ಬಿಲ್ಟ್-ಟು-ಆರ್ಡರ್ ಮೂಲಕ ಕಸ್ಟಮೈಸೇಶನ್ ಮಾಡಿದ ನಂತರ ಮೋಟಾರ್ ಸೈಕಲ್‍ನ ಒಟ್ಟು ಎಕ್ಸ್-ಶೋರೂಂ ವೆಚ್ಚವನ್ನು ಏಕಕಾಲದಲ್ಲಿ ನವೀಕರಿಸಲಿದ್ದು, ಬುಕ್ಕಿಂಗ್ ಮೊತ್ತವನ್ನು ಆನ್‍ಲೈನ್‍ನಲ್ಲಿ ಪಾವತಿಸಿದ ನಂತರ, ಗ್ರಾಹಕರು ತಮ್ಮ ಮೋಟಾರ್‍ಸೈಕಲ್ ವಿತರಣೆಗೆ ಹತ್ತಿರದ ಪ್ರೀಮಿಯಂ ಡೀಲರ್‌ಶಿಪ್ ಅನ್ನು ಆಯ್ಕೆ ಮಾಡಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಪ್ರತಿಸ್ಪರ್ಧಿ ಬೈಕ್ ಮಾದರಿಗಳು

ಟಿವಿಎಸ್ ಹೊಸ ಅಪಾಚೆ ಆರ್‌ಆರ್310 ಮಾದರಿಯು ನೇರವಾಗಿ ಕವಾಸಕಿ ನಿಂಜಾ 300(Kawasaki Ninja 300) ಮತ್ತು ಕೆಟಿಎಂ ಆರ್‌ಸಿ390(KTM RC390) ಪೈಪೋಟಿ ನೀಡಲಿದ್ದು, ಆದಾಗ್ಯೂ, ಜಪಾನ್ ಮತ್ತು ಆಸ್ಟ್ರಿಯಾ ಕಂಪನಿಗಳು ಟಿವಿಎಸ್ ಮೋಟಾರ್ ಸೈಕಲ್ ನೀಡುವ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.

ಇದರ ನಡುವೆ ಕೆಟಿಎಂ ಇಂಡಿಯಾ(KTM India) ಕಂಪನಿಯು ಮುಂಬರುವ ತಿಂಗಳು ನವೀಕರಿಸಿದ ಆರ್‌ಸಿ 390 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೂ ಟಿವಿಎಸ್ ಅಪಾಚೆ ಆರ್‌ಆರ್ 310 ಮಾದರಿಗೆ ಹೋಲಿಸಿದರೆ ಕೆಟಿಎಂ ಹೊಸ ಬೈಕ್ ಬೆಲೆಯು ಅಪಾಚೆ ಮಾದರಿಗಿಂತಲೂ ಹೆಚ್ಚು ದುಬಾರಿಯಾಗಿದೆ. ಈ ಎಲ್ಲಾ ಅಂಶಗಳಿಂದ ಅಪಾಚೆ ಆರ್‌ಆರ್ 310 ಮಾದರಿಯು ಗ್ರಾಹಕ ಪರವಾದ ಅಂಶಗಳನ್ನು ಹೊಂದಿದ್ದು, ಟಿವಿಎಸ್ ಕಂಪನಿಯು ಈ ಬಾರಿಯು ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಉನ್ನತೀಕರಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.

ಪರ್ಫಾಮೆನ್ಸ್ ಪ್ರಿಯರಿಗಾಗಿ ಮತ್ತಷ್ಟು ಬದಲಾದ 2021ರ TVS Apache RR310

ಹೊಸ ಅಪಾಚೆ ಆರ್‌ಆರ್310 ಬಗೆಗಿನ ನಮ್ಮ ಅಭಿಪ್ರಾಯ

ಭಾರತದಲ್ಲಿ ಕೆಲ ವರ್ಷಗಳ ಹಿಂದಷ್ಟೇ 300ಸಿಸಿ ಮೋಟಾರ್‌ಸೈಕಲ್‌ನಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ವೈಶಿಷ್ಟ್ಯಗಳನ್ನು ನಾವು ಊಹಿಸಿರಲಿಲ್ಲ. ಆದರೆ ನಾವು 2021ರ ಅಪಾಚೆ ಆರ್‌ಆರ್ 310 ನೊಂದಿಗೆ ಅಂತಹ ಹಲವಾರು ಹೊಸ ವೈಶಿಷ್ಟ್ಯಗಳತೆಗಳನ್ನು ಬಜೆಟ್ ಬೆಲೆಯೊಂದಿಗೆ ಪಡೆಯಲು ಸಾಧ್ಯವಾಗಿದೆ. ಇದು ಖಂಡಿತವಾಗಿಯೂ ಹೊಸ ಅಪಾಚೆ ಆರ್‌ಆರ್ 310 ಮಾರಾಟಕ್ಕೆ ಉತ್ತಮ ಅಂಶವಾಗಿದ್ದು, ಹೊಸ ಮಾದರಿಯು ಟಿವಿಎಸ್ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಡಲಿದೆ.

ಜೊತೆಗೆ ಟಿವಿಎಸ್‌ ಕಂಪನಿಯು ಹೊಸ ರೈಡಿಂಗ್ ವೈಶಿಷ್ಟ್ಯಗಳನ್ನು ಹೊಸ ಬೈಕ್‌ನಲ್ಲಿ ಮಾತ್ರವಲ್ಲದೆ ಅಸ್ತಿತ್ವದಲ್ಲಿರವ ಆರ್‌ಆರ್ 310 ಹಳೆಯ ಮಾದರಿಗಳಿಗೂ ಸಹ ಜೋಡಣೆ ಮಾಡಲಿದೆ. ಸದ್ಯಕ್ಕೆ ನಾವು ಹೊಸ ಮೋಟಾರ್ ಸೈಕಲ್ ಅನ್ನು ರೇಸ್‌ಟ್ರಾಕ್‌ನಲ್ಲಿ ಮಾತ್ರ ಪರೀಕ್ಷಿಸಿದ್ದು, ಶೀಘ್ರದಲ್ಲೇ ಸಾಮಾನ್ಯ ರಸ್ತೆಗಳಲ್ಲೂ ರೈಡ್ ಅನುಭವಗಳನ್ನು ನಿಮ್ಮದೊಂದಿಗೆ ಹಂಚಿಕೊಳ್ಳಲಿದ್ದೇವೆ.

Most Read Articles

Kannada
English summary
2021 tvs apache rr 310 first ride review impressions engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X