ಮಹೀಂದ್ರ ಮೊಜೊ ಬಿಡುಗಡೆ ಸನಿಹ; ಸಂಚಲನ ಮೂಡಿಸಿತೇ?
ಬಹುನಿರೀಕ್ಷಿತ ಮಹೀಂದ್ರ ಮೊಜೊ ಬಿಡುಗಡೆ ಮತ್ತಷ್ಟು ಸನಿಹವಾಗಿದ್ದು, ಮುಂಬರುವ ಅಕ್ಟೋಬರ್ 16ರಂದು ಭಾರತೀಯ ವಾಹನ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆಯಲಿದೆ.
ಮಹೀಂದ್ರ ಮೊಜೊ ಕಳೆದ ಕೆಲವು ಸಮಯಗಳಿಂದ ಸುದ್ದಿಯಲ್ಲಿದ್ದು, ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸುವ ನಿರೀಕ್ಷೆಯಲ್ಲಿದೆ. ಅಷ್ಟಕ್ಕೂ ಈಗಾಗಲೇ ಹಲವು ಬಾರಿ ಪ್ರಾಯೋಗಿಕ ಸಂಚಾರ ಪರೀಕ್ಷೆ ವೇಳೆ ಸೆರೆ ಸಿಕ್ಕಿರುವ ನೂತನ ಮೊಜೊ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.

ಎಂಜಿನ್ ತಾಂತ್ರಿಕತೆ
- 296 ಸಿಸಿ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್,
- 27 ಅಶ್ವಶಕ್ತಿ,
- 25 ಎನ್‌ಎಂ ತಿರುಗುಬಲ,
- ಆರು ಸ್ಪೀಡ್ ಗೇರ್ ಬಾಕ್ಸ್,
- ಮೈಲೇಜ್: 25 kpl (ಅಂದಾಜು),
- 20 ಲೀಟರ್ ಇಂಧನ ಟ್ಯಾಂಕ್
- ಡೇಟೈಮ್ ರನ್ನಿಂಗ್ ಲೈಟ್ಸ್,
- ಕ್ರೀಡಾತ್ಮಕ ವಿನ್ಯಾಸ,
- ಹೊಸ ಇಂಧನ ಟ್ಯಾಂಕ್,
- ಪೈರಲ್ಲಿ ಸ್ಪೋರ್ಟ್ ಡೆಮೊನ್ ಚಕ್ರ,
- ಎಲ್‌ಇಡಿ ಟೈಲ್ ಲೈಟ್,
- ಅಪ್ ಸೈಡ್ ಡೌನ್ (ಯುಎಸ್‌ಡಿ) ಫಾರ್ಕ್ ಮತ್ತು ಟ್ವಿನ್ ಮಫ್ಲರ್

ವೈಶಿಷ್ಟ್ಯ

ಬುಕ್ಕಿಂಗ್ ಪ್ರಾರಂಭ
ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಶೋ ರೂಂ ಗಳಲ್ಲಿ 10,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ಕವಾಸಕಿ ನಿಂಜಾ 300ಆರ್, ಸಿಬಿಆರ್ 250 ಆರ್ ಮತ್ತು ಕೆಟಿಎಂ ಆರ್ ಸಿ 390 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಬೆಲೆ ಪರಿಧಿ
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಅಂದಾಜು ಎರಡು ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಮಹೀಂದ್ರ ಮೊಜೊ ಬಿಡುಗಡೆಯಾಗಲಿದೆ. ಈ ಎಲ್ಲದರ ಬಗೆಗಿನ ತಾಜಾ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications








